ರಾಬರ್ಟ್‌ನಲ್ಲಿ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಆಶಾ ಭಟ್?

[adning id="4492"]

ರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ದರ್ಶನ್ ಜೋಡಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಆಶಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಪ್ಪಟ ಕನ್ನಡತಿಯಾದ ಆಶಾ ಭಟ್ ಈಗಾಗಲೇ ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರೋ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಅದಕ್ಕೆ ‘ರಾಬರ್ಟ್‌ಗಾಗಿ ತಯಾರಿ’ ಎಂಬ ಒಕ್ಕಣೆಯನ್ನೂ ಹಾಕಿಕೊಂಡಿದ್ದರು. ಇದುವೇ ಈಗ ರಾಬರ್ಟ್‌ನಲ್ಲಿ ಆಶಾ ಭಟ್ ನಿರ್ವಹಿಸುತ್ತಿರೋ ಪಾತ್ರದ ಬಗ್ಗೆ ಅಭಿಮಾನಿಗಳ ನಡುವೆ ಗಂಭೀರವಾದ ಚರ್ಚೆಗೂ ಚಾಲನೆ ನೀಡಿದೆ.


ಸಾಮಾನ್ಯವಾಗಿ ಸಿನಿಮಾ ಆರಂಭವಾದಾಗ ನಾಯಕರು ವರ್ಕೌಟ್‌ನಂಥಾದ್ದಕ್ಕೆ ಹೆಚ್ಚು ಗಮನ ನೀಡೋದಿದೆ. ಮಾಮೂಲಿಯಾಗಿ ಜಿಮ್‌ಗೆ ತೆರಳೋ ನಾಯಕರು ಅದರ ಬಗ್ಗೆ ವಿಶೇಷ ಗಮನ ನೀಡಿದರೆ ಅದು ಆಕ್ಷನ್ ಪಾತ್ರಕ್ಕೆ ಸಿದ್ಧತೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಆದರೆ ಕನ್ನಡದಲ್ಲಿ ನಟಿಯರು ವರ್ಕೌಟ್ ಮೂಲಕ ತಯಾರಿ ಆರಂಭಿಸೋದು ವಿರಳ. ಆದರೆ ಪೂಜಹಾ ಭಟ್ ದೈಹಿಕ ಕಸರತ್ತುಗಳ ಮೂಲಕವೇ ರಾಬರ್ಟ್‌ಗಾಗಿ ತಯಾರಾಗುತ್ತಿರೋದು ಹಲವಾರು ದಿಕ್ಕಿನ ಅಭಿಪ್ರಾಯಗಳಿಗೆ ಕಾರಣವಾಗಿದೆ.


ಪೂಜಾ ಭಟ್ ವರ್ಕೌಟ್ ಮಾಡುತ್ತಿರೋ ಫೋಟೋಸ್ ಹಾಕಿಕೊಂಡು ಇದು ರಾಬರ್ಟ್‌ಗಾಗಿ ತಯಾರಿ ಅಂದಿರೋದರಿಂದ ಆಕೆ ಇಲ್ಲಿ ಆಕ್ಷನ್ ಓರಿಯಂಟೆಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಮಾತೂ ಅಭಿಮಾನಿಗಳ ನಡುವೆ ಹರಿದಾಡುತ್ತಿದೆ. ಇದನ್ನು ಅಲ್ಲಗಳೆಯಲೂ ಸಾಧ್ಯವಿಲ್ಲ. ಕಥೆಯ ಬಗ್ಗೆ ಸಣ್ಣದೊಂದು ಸುಳಿವೂ ಬಿಟ್ಟು ಕೊಡದಂತೆ ಮುಂದುವರೆಯುತ್ತಿರೋ ತರುಣ್ ಸುಧೀರ್ ನಾಯಕಿಯ ಪಾತ್ರದಲ್ಲಿಯೇ ಇಂಥಾದ್ದೊಂದು ಸರ್‌ಪ್ರೈಸ್ ಇಟ್ಟಿದ್ದರೂ ಅಚ್ಚರಿಯೇನಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪಾಟಿ ಚರ್ಚೆ ನಡೆಯುತ್ತಿದ್ದರೂ ಚಿತ್ರತಂಡ ಮಾತ್ರ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ.


ಅಂತೂ ರಾಬರ್ಟ್ ಮೂಲಕ ಆಶಾ ಭಟ್ ಅವರ ಬಹು ಕಾಲದ ಕನಸು ನನಸಾಗಿದೆ. ಭದ್ರಾವತಿಯವರಾದ ಆಶಾ ಪಾಲಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆನ್ನೋದೇ ಮಹಾ ಕನಸಾಗಿತ್ತು. ಆದರೆ ಫ್ಯಾಷನ್ ಲೋಕದ ಗುಂಗು ಹತ್ತಿಸಿಕೊಂಡಿದ್ದ ಅವರು ಮುಂಬೈನ ಮಾಡೆಲಿಂಗ್ ಜಗತ್ತಿನಲ್ಲಿ ಕಳೆದು ಹೋಗಿದ್ದರು. ತೀರಾ ಬಾಲಿವುಡ್‌ನಲ್ಲಿ ಜಂಗ್ಲಿ ಅನ್ನೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಇದೇ ಹಂತದಲ್ಲಿ ಅವರ ಪಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿಯಾಗೋ ಅವಕಾಶ ಕೂಡಿ ಬಂದಿದೆ. ಈ ಸಿನಿಮಾ ಮೂಲಕವೇ ತನ್ನ ತವರು ನೆಲವಾದ ಕನ್ನಡದಲ್ಲಿಯೇ ನೆಲೆ ಕಂಡುಕೊಳ್ಳುವ ಆಸೆಯೊಂದಿಗೆ ಪೂಜಾ ಶ್ರಮವಹಿಸಿ ತಯಾರಿ ನಡೆಸುತ್ತಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here