ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಟ್ರೇಲರ್‌ನಲ್ಲಿ ಸಿಕ್ಕಿದ್ದು ಹಾರರ್ ಸುಳಿವು!

[adning id="4492"]

ಲವಾರು ವರ್ಷಗಳ ಕಾಲ ತೀವ್ರವಾಗಿ ಹಚ್ಚಿಕೊಂಡ ಸಿನಿಮಾ ಕನಸು ಹೆಚ್ಚಿನ ಸಂದರ್ಭಗಳಲ್ಲಿ ಮ್ಯಾಜಿಕ್ಕು ಮಾಡುವಂಥಾ ಚಿತ್ರಗಳನ್ನೇ ರೂಪಿಸುತ್ತವೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಮೂಲಕ ನಿರ್ದೇಶಕರಾಗಿರುವ ರಾಮಚಂದ್ರ ಅವರೂ ಕೂಡಾ ಅಂಥಾದ್ದೇ ಕನಸೊಂದನ್ನು ದಶಕಗಳಿಂದಲೂ ಸಾಕಿಕೊಂಡು ಬಂದಿದ್ದವರು. ಅಷ್ಟು ವರ್ಷಗಳ ತಪನೆಯ ಫಲವಾಗಿ ಅವರು ಅಗಾಧ ಅಚ್ಚರಿಗಳನ್ನೇ ಬಚ್ಚಿಟ್ಟುಕೊಂಡಂತಿರೋ ಚಿತ್ರವನ್ನೇ ಪ್ರೇಕ್ಷಕರ ಮುಂದೆ ತರಲಿದ್ದಾರೆಂಬುದಕ್ಕೆ ಇದೀಗ ಬಿಡುಗಡೆಯಾಗಿರೋ ಈ ಸಿನಿಮಾದ ಟ್ರೇಲರ್‌ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ!


ರಾಮ್ ಜೆ ಚಂದ್ರ ನಿರ್ದೇಶನದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಆರಂಭ ಕಾಲದಿಂದಲೂ ಆಪ್ತವಾದದ್ದೇ ವಿಭಿನ್ನವಾದ ಪೋಸ್ಟರುಗಳ ಮೂಲಕ. ಆ ನಂತರದಲ್ಲಿ ಚಿತ್ರತಂಡದ ಕಡೆಯಿಂದ ಜಾಹೀರಾಗಿದ್ದ ಒಂದಷ್ಟು ಪೂರಕ ಸಂಗತಿಗಳ ಮೂಲಕ ಕುತೂಹಲದ ಕಿಚ್ಚು ಹತ್ತಿಕೊಂಡಿತ್ತು. ಇದೀಗ ಅದಕ್ಕೆ ಪೂರಕವಾದ ರೀತಿಯಲ್ಲಿಯೇ ಟ್ರೇಲರ್ ಹೊರ ಬಂದಿದೆ. ಎಂಥವರೂ ಅರೆಕ್ಷಣ ಅವಾಕ್ಕಾಗುವಂಥಾ ಕಂಟೆಂಟಿನ ಸೂಚನೆಯೊಂದಿಗೆ ಮೂಡಿಬಂದಿರೋ ಈ ಟ್ರೇಲರ್‌ಗೀಗ ಎಲ್ಲೆಡೆಯಿಂದಲೂ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಇದುವೇ ಈ ಸಿನಿಮಾದಲ್ಲಿ ಹಾರರ್ ಅಂಶಗಳೂ ಇರಬಹುದಾ ಎಂಬಂಥಾ ಸಂಶಯಕ್ಕೂ ಕಾರಣವಾಗಿದೆ!


ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್, ಮಯೂರಿ ಮತ್ತು ದುನಿಯಾ ರಶ್ಮಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕ ನಾಯಕಿ ಎಂಬುದರಾಚೆಗೆ ಈ ಸಿನಿಮಾದಲ್ಲಿ ಕಥೆಯೇ ಅನ್ನೋದು ಚಿತ್ರತಂಡದ ಮಾತು. ಪ್ರತೀ ಪಾತ್ರಗಳೂ ಇಲ್ಲಿ ಪ್ರಧಾನ್ಯತೆ ಹೊಂದಿವೆಯಂತೆ. ಅದೇ ರೀತಿ ಎಲ್ಲ ಪಾತ್ರಗಳೂ ಕೂಡಾ ಊಹಿಸಲು ಸಾಧ್ಯವಾಗದ, ಬೆಚ್ಚಿ ಬೀಳಿಸುವಂಥಾ ಚಿತ್ರ ವಿಚಿತ್ರ ಚಹರೆಗಳನ್ನೊಳಗೊಂಡಿದೆ ಅನ್ನೋದು ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಇಷ್ಟರಲ್ಲಿಯೇ ಬಿಡುಗಡೆಯಾಗಲಿರೋ ಈ ಸಿನಿಮಾ ಮೇಲಿನ ಆಸಕ್ತಿಯನ್ನು ಸದರಿ ಟ್ರೇಲರ್ ಮತ್ತಷ್ಟು ತೀವ್ರಗೊಳಿಸುವಂತೆ ಮೂಡಿ ಬಂದಿದೆ.

[adning id="4492"]

LEAVE A REPLY

Please enter your comment!
Please enter your name here