ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಡ್ರಮ್ಮರ್ ದೇವ

[adning id="4492"]
ಖ್ಯಾತ ಡ್ರಮ್ಮರ್, ಸಂಗೀತ ನಿರ್ದೇಶಕ ಡ್ರಮ್ಸ್ ದೇವ ಕೆಪಿಎಲ್ ಕ್ರಿಕೆಟ್ ಅಂಗಣದಲ್ಲಿ ಆಟಗಾರರನ್ನು ಹುರಿದುಂಬಿಸುತ್ತಿರುವಾಗಲೇ ತೀವ್ರ ಅನಾರೋಗ್ಯದಿಂದ ಕುಸಿದು ಬಿದ್ದಿದ್ದಾರೆ. ಈಗ್ಗೆ ಮೂರ್ನಾಲಕ್ಕು ದಿನಗಳ ಹಿಂದೆ ಅವರು ಮೈಸೂರಿನಲ್ಲಿ ನಡೆಯುತ್ತಿದ್ದ ಕೆಪಿಎಲ್ ಪಂದ್ಯಾಟದ ಸಂದರ್ಭದಲ್ಲಿ ಉತ್ಸಾಹದಿಂದಲೇ ಆಟಗಾರರನ್ನು ಹುರಿದುಂಬಿಸುತ್ತಾ, ನೋಡುಗರಿಗೂ ಮನೋರಂಜನೆ ನೀಡುತ್ತಿದ್ದರು. ಆದರೆ ಆ ಹೊತ್ತಿನಲ್ಲಿಯೇ ಕುಸಿದು ಬಿದ್ದ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿ, ಅದೆಷ್ಟೋ ಸಂಗೀತ ನಿರ್ದೇಶಕರ ಗೀತೆಗಳಿಗೆ ಡ್ರಮ್ಮರ್ ಆಗಿ ಕಾರ್ಯ ನಿರ್ವಹಿಸಿದ್ದ ದೇವಾ, ಒಂದಷ್ಟು ಆಯಾಸವಿದ್ದರೂ ಕೂಡಾ ಕೆಪಿಎಲ್ ಕ್ರಿಕೆಟ್ ಅಂಗಣದಲ್ಲಿ ಎಂದಿನ ಉತ್ಸಾಹದಿಂದಲೇ ಡ್ರಮ್ಸ್ ನುಡಿಸುತ್ತಿದ್ದರು. ಆದರೆ ನೋಡ ನೋಡುತ್ತಲೇ ಅವರು ಸುಸಿದು ಬಿದ್ದು ತಲೆಗೆ ಏಟಾಗಿತ್ತು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೀಗ ಅವರು ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ.

ಡ್ರಮ್ಮರ್ ದೇವಾ ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರಿಗೆ ತೀವ್ರವಾದ ಜ್ವರ ಕಾಣಿಸಿಕೊಂಡಿತ್ತು. ದೇಹದಲ್ಲಿನ ಸಕ್ಕರೆ ಪ್ರಮಾಣ ಕೂಡೂ ಅಪಾಯಕರ ರೀತಿಯಲ್ಲಿ ಏರಿಕೊಂಡಿತ್ತು. ಒಂದಷ್ಟು ಕಾಲದಿಂದ ಇಂಥಾ ಅನಾರೋಗ್ಯದಿಂದ ಜರ್ಜರಿತರಾಗಿದ್ದ ದೇವಾ ಆಯಾಸವಿದ್ದರೂ ಕೂಡಾ ತಾವು ನೆಚ್ಚಿಕೊಂಡಿದ್ದ ಕಲೆಯನ್ನು ಉತ್ಸಾಹದಿಂದಲೇ ಪ್ರದರ್ಶಿಸುತ್ತಿದ್ದರು. ಮೊನ್ನೆ ದಿನ ಕೆಪಿಎಲ್ ಅಂಗಣದಲ್ಲಿ ಡ್ರಮ್ಸ್ ಬಾರಿಸುತ್ತಿದ್ದ ದೇವಾರನ್ನು ನೋಡಿದ ಯಾರಿಗೇ ಆದರೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬಂಥಾ ಸಣ್ಣ ಸುಳಿವೂ ಸಿಗುವಂತಿರಲಿಲ್ಲ.

ಆದರೆ ಡ್ರಮ್ಸ್ ನುಡಿಸುತ್ತಲೇ ಕುಸಿದು ಬಿದ್ದಿದ್ದ ದೇವಾ ಈಗ ಜರ್ಜರಿತರಾಗಿದ್ದಾರೆ. ಅವರಿಗೆ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತೀದ್ದಾರೆ. ಇನ್ನು ಏನಿಲ್ಲವೆಂದರೂ ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಇರಬೇಕೆಂದು ವೈದ್ಯರು ಸೂಚಿಸಿದ್ದಾರಂತೆ. ಆದ್ದರಿಂದ ಕೆಪಿಎಲ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಾಟಗಳಲ್ಲಿ ದೇವ ಆಟಗಾರರಿಗೆ ಉತ್ತೇಜನ ನೀಡೋ ಅವಕಾಶ ಕಳೆದುಕೊಂಡಿದ್ದಾರೆ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರೋ ದೇವಾ ಶೀಘ್ರದಲ್ಲಿಯೇ ಮತ್ತೆ ಅಖಾಡಕ್ಕಿಳಿಯಲಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here