ಸಾಹೋ ಸವಾಲಿಗೆ ಸೆಡ್ಡು ಹೊಡೆದು ಗೆದ್ದ ‘ನನ್ನಪ್ರಕಾರ’! ಪರಭಾಷಾ ಚಿತ್ರದ ಮುಂದೆ ಮಂಡಿಯೂರಲು ಬಿಡಲಿಲ್ಲ ಕನ್ನಡಿಗರು!

[adning id="4492"]

ಪರಭಾಷಾ ಚಿತ್ರದ ಮುಂದೆ ಮಂಡಿಯೂರಲು ಬಿಡಲಿಲ್ಲ ಕನ್ನಡಿಗರು!
ರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳು ಕಂಗಾಲಾಗಿ ನಿಲ್ಲುವಂತಾಗೋ ದುರಂತ ಇಂದು ನಿನ್ನೆಯದ್ದಲ್ಲ. ಅದ್ಯಾವುದೋ ಭಾಷೆಯ ಸಿನಿಮಾಗಳಿಗಾಗಿ ಕನ್ನಡದ ನೆಲದಲ್ಲಿಯೇ ಕನ್ನಡ ಚಿತ್ರಗಳ ತಲ್ಲಣಿಸೋದರ ವಿರುದ್ಧ ಅದೇನೇ ಚರ್ಚೆ, ಹೋರಾಟಗಳು ನಡೆದರೂ ಎಲ್ಲವೂ ಯಥಾ ಪ್ರಕಾರವಾಗಿಯೇ ಮುಂದುವರೆಯುತ್ತಿವೆ. ಇದೀಗ ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕೂಡಾ ಕನ್ನಡ ಚಿತ್ರಗಳಿಗೆ ಅಂಥಾದ್ದೇ ಗಂಡಾಂತರ ತಂದಿಟ್ಟಿತ್ತು. ಆದರೆ ಒಂದೊಳ್ಳೆ ಕಂಟೆಂಟು ಹೊಂದಿರೋ ಚಿತ್ರಗಳು ಅದೆಂಥಾ ಗಂಡಾಂತರಗಳನ್ನಾದರೂ ಹಿಮ್ಮೆಟ್ಟಿಸಿ ಗೆದ್ದು ಬೀಗಬಲ್ಲವೆಂಬುದಕ್ಕೆ ‘ನನ್ನಪ್ರಕಾರ’ ಚಿತ್ರ ಸಾಕ್ಷಿಯಾಗಿ ನಿಂತಿದೆ.


ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರ ನನ್ನಪ್ರಕಾರ. ಹೊಸತನದಿಂದ ಕೂಡಿದ ಸಸ್ಪೆನ್ಸ್ ಥ್ರಿಲ್ಲಲ್ ಕಥಾಹಂದರ ಹೊಂದಿದ್ದ ಈ ಚಿತ್ರಕ್ಕೆ ಭರ್ಜರಿಯಾಗಿಯೇ ಓಪನಿಂಗ್ ಸಿಕ್ಕಿತ್ತು. ಮೊದಲ ಶೋನಿಂದಲೇ ನೋಡುಗರೆಲ್ಲ ಥ್ರಿಲ್ ಆಗಿಯೇ ಒಳ್ಳೆ ಮಾತುಗಳನ್ನಾಡಲಾರಂಭಿಸಿದ್ದರು. ಇದನ್ನು ರೂಪಿಸಿರೋದು ಹೊಸಾ ನಿರ್ದೇಶಕನೆಂಬುದನ್ನೂ ಮರೆಮಾಚುವಂತೆ ಅಬ್ಬರಿಸಲಾರಂಭಿಸಿದ್ದ ಈ ಚಿತ್ರ ನೋಡಿ ಬಂದವರು ಹರಡಿಸಿದ ಒಳ್ಳೆ ಮಾತುಗಳಿಂದಲೇ ಹೌಸ್‌ಫುಲ್ ಪ್ರದರ್ಶನ ಕಾಣಲಾರಂಭಿಸಿತ್ತು. ಆದರೆ ಇಂಥಾ ಯಶಸ್ಸಿನ ನಾಗಾಲೋಟಕ್ಕೆ ಬ್ರೇಕ್ ಹಾಕುವಂತೆ, ಕಂಟಕದಂತೆ ದಾಳಿ ನಡೆಸಿದ್ದು ಸಾಹೋ!


ಅಷ್ಟಕ್ಕೂ ಸಾಹೋ ಆರ್ಭಟದ ಮುಂದೆ ಯಶಸ್ವೀ ಪ್ರದರ್ಶನ ಕಾಣುತ್ತಿದ್ದ ಕುರುಕ್ಷೇತ್ರವೇ ಥಿಯೇಟರಿಲ್ಲದೆ ತತ್ತರಿಸುವಂತಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂಥಾ ಘಟಾನುಘಟಿಗಳ ತಾರಾಗಣದ ಆ ಚಿತ್ರಕ್ಕೇ ಅಂಥಾ ಗತಿ ಬಂದಿತ್ತೆಂದರೆ, ನನ್ನಪ್ರಕಾರ ಚಿತ್ರಕ್ಕೆ ಏಟು ಬೀಳದಿರುತ್ತಾ? ಈ ಕಾರಣದಿಂದಲೇ ಒಂದಷ್ಟು ಕಂಗಾಲಾದಂತೆ ಕಂಡರೂ ನನ್ನಪ್ರಕಾರವೀಗ ಸಾಹೋಗೇ ಸೆಡ್ಡು ಹೊಡೆದು ಗೆದ್ದಿದೆ. ಇದು ಸಾಧ್ಯವಾದದ್ದು ಅದರೊಳಗಿನ ಕಸುವಿನಿಂದ. ಅದು ರೂಪಿಸಲ್ಪಟ್ಟಿರೋ ಹೊಸತನದಿಂದ. ಇದೀಗ ಸಾಹೋ ಥೇಟರುಗಳಿಂದ ಕಣ್ಮರೆಯಾಗುತ್ತಿದೆ. ನನ್ನಪ್ರಕಾರ ಮತ್ತೆ ಭರ್ಜರಿ ಪ್ರದರ್ಶನ ಕಾಣುತ್ತಾ ಮುಂದುವರೆಯುತ್ತಿದೆ.

[adning id="4492"]

LEAVE A REPLY

Please enter your comment!
Please enter your name here