ಅವಕಾಶದ ಕೊರತೆಯಿಂದ ಇಂಥಾ ಸ್ಥಿತಿಗಿಳಿದಳು ಊರ್ವಶಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗಿದ್ದ ನಟಿ ಊರ್ವಶಿ ರೌಟೇಲಾ. ಅದಾಗಲೇ ಬಾಲಿವುಡ್‌ನಲ್ಲಿ ಒಂದಿಷ್ಟು ಹೆಸರು ಮಾಡಿಕೊಂಡಿದ್ದ ಊರ್ವಶಿ ಮೊದಲ ಚಿತ್ರದಲ್ಲಿಯೇ ಕನ್ನಡ ಪ್ರೇಕ್ಷಕರಿಗೂ ಇಷ್ಟವಾಗಿ ಬಿಟ್ಟಿದ್ದಳು. ಐರಾವತ ಹೇಳಿಕೊಳ್ಳುವಂಥಾ ಸಕ್ಸಸ್ ಕಾಣದಿದ್ದರೂ ದರ್ಶನ್ ಮತ್ತು ಊರ್ವಶಿ ರಾಟೇಲಾ ಜೋಡಿ ಮಾತ್ರ ಅಭಿಮಾನಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಆದರೆ ಆ ನಂತರ ಮತ್ತೆಂದೂ ಊರ್ವಶಿ ಕನ್ನಡದಲ್ಲಿ ಕಾಣಿಸಿಕೊಂಡಿರಲೇ ಇಲ್ಲ.


ಹಾಗಾದರೆ ಊರ್ವಶಿ ಐರಾವತ ಚಿತ್ರದ ನಂತರದಲ್ಲಿ ಮತ್ತೆಲ್ಲಿ ಹೋದಳು, ಬಾಲಿವುಡ್ ಸೇರಿದಂತೆ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾಳಾ ಎಂಬೆಲ್ಲ ಪ್ರಶ್ನೆಗಳು ಒಂದಷ್ಟು ಮಂದಿಯಲ್ಲಾದರೂ ಇರಬಹುದು. ಅಷ್ಟಕ್ಕೂ ಹಾಗೆ ಯಾವುದೇ ಭಾಷೆಯಲ್ಲಿ ಮಿಂಚುವಂಥಾ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿದ್ದ ಊರ್ವಶಿ ಈಗ ಅವಕಾಶಗಳ ಕೊರತೆ ಎದುರಿಸುತ್ತಿದ್ದಾಳೆ. ಆಕೆಗೆ ಒಂದಷ್ಟು ಅವಕಾಶಗಳು ಸಿಗುತ್ತಿವೆಯಾದರೂ ಅದರಲ್ಲಿನ ಪಾತ್ರಗಳು ಬಟ್ಟೆ ಬಿಚ್ಚ ಪೋಸು ಕೊಡೋದಪಕ್ಕೆ ಮಾತ್ರವೇ ಸೀಮಿತವಾಗಿ ಬಿಟ್ಟಿವೆಯಂತೆ.


ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ ೪ ಮುಂತಾದ ಚಿತ್ರಗಳಲ್ಲಿಯೂ ಊರ್ವಶಿ ಬಟ್ಟೆ ಬಿಚ್ಚಿ ನಿಲ್ಲೋ ಮೂಲಕವೇ ಸುದ್ದಿಯಾಗಿದ್ದಳು. ಯಾವಾಗ ಅವಕಾಶದ ತತ್ವಾರದಿಂದಾಗಿ ಊರ್ವಶಿ ಇಂಥಾ ಪಾತ್ರಗಳಲ್ಲಿಯೂ ನಟಿಸಲಾರಂಭಿಸಿದ್ದಳೋ, ಇದೀಗ ಅಂಥಾದ್ದೇ ಸಣ್ಣಪುಟ್ಟ ಪಾತ್ರಗಳು ಆಕೆಯನ್ನು ಹುಡುಕಿ ಬರುತ್ತಿವೆಯಂತೆ. ಇದೀಗ ಪಾಗಲ್ ಪಂತಿ ಅನ್ನೋ ಚಿತ್ರದಲ್ಲಿ ಈಕೆ ನಟಿಸುತ್ತಿದ್ದಾಳದರೂ ಅದರಲ್ಲಿಯೂ ಮಹತ್ವೆದ ಪಾತ್ರವೇನೂ ಸಿಕ್ಕಿಲ್ಲ.


ಬಾಲಿವುಡ್‌ನಿಂದ ಕನ್ನಡಕ್ಕೆ ಬಂದಿದ್ದ ಕಾಲಕ್ಕೆ ಮಿಂಚುಳ್ಳಿಯಂತಿದ್ದವಳು ಊರ್ವಶಿ ರೌಟೇಲಾ. ಆ ಚಿತ್ರದಲ್ಲಿ ಈಕೆಯನ್ನು ನೋಡಿದವರು, ಈಕೆ ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಮಿಂಚುತ್ತಾಳೆಂದೇ ಬಹುತೇಕರು ಅಂದುಕೊಂಡಿದ್ದರು. ಆದರೆ ಬಾಲಿವುಡ್‌ನಲ್ಲಿಯೂ ಊರ್ವಶಿ ಹಂತ ಹಂತವಾಗಿ ಮೂಲೆಗುಂಪಾಗುತ್ತಾ ಬಂದಿದ್ದಳು. ಇದೀಗ ಬರೀ ಬಿಚ್ಚಮ್ಮನಂಥಾ ಪಾತ್ರಗಳಿಗೆ ಮಾತ್ರವೇ ಊರ್ವಶಿ ಸೀಮಿತಳಾಗಿ ಅಭಿಮಾನಿಗಳಲ್ಲಿ ಬೇಸರ ಹುಟ್ಟಿಸಿದ್ದಾಳೆ.

LEAVE A REPLY

Please enter your comment!
Please enter your name here