ಬಿಡುಗಡೆಯಾಯ್ತು ಕನ್ನಡದ ಕಂಪಿನ ಲಿರಿಕಲ್ ವೀಡಿಯೋ!

[adning id="4492"]

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರೋ ಗೀತಾ ಚಿತ್ರವೀಗ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ಗಣೇಶ್ ಈವರೆಗಿನ ಇಮೇಜಿಗಿಂತಲೂ ಭಿನ್ನವಾದ ಪಾತ್ರದಲ್ಲಿ ನಟಿಸಿರೋ ಸುಳಿವಿನೊಂದಿಗೆ ಗೋಲ್ಡನ್ ಸ್ಟಾರ್ ಅಭಿಮಾನಿಗಳಲ್ಲಿಯೂ ಗೀತಾ ಭಾರೀ ನಿರೀಕ್ಷೆ ಮೂಡಿಸಿದೆ. ಇನ್ನೇನು ಬಿಡುಗಡೆಗೆ ರೆಡಿಯಾಗಿರೋ ಈ ಸಿನಿಮಾದ ಲಿರಿಕಲ್ ವೀಡಿಯೋವೊಂದು ಇದೀಗ ಬಿಡುಗಡೆಯಾಗಿದೆ. ಕನ್ನಡತನವೇ ತುಂಬಿಕೊಂಡಂತಿರೋ ರಿರಿಕಲ್ ಸಾಂಗ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ ಕನ್ನಡಿಗರೆಲ್ಲ ಖುಷಿಗೊಳ್ಳುವಂತೆ, ಕನ್ನಡಾಭಿಮಾನಕ್ಕೆ ಮತ್ತಷ್ಟು ಮೆರುಗು ಕೊಡುವಂತೆ ಮೂಡಿ ಬಂದಿದೆ.


ಈ ಚಿತ್ರದಲ್ಲಿ ಗಣೇಶ್ ಕನ್ನಡಪರ ಹೋರಾಟಗಾರನಾಗಿಯೂ ನಟಿಸಿದ್ದಾರೆ. ಅದಕ್ಕೆ ಪೂರಕವಾಗಿಯೇ ಈ ಹಾಡು ಮೂಡಿ ಬಂದಿದೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಬರೆದಿರೋ ಈ ಹಾಡಿಗೆ ನೊಬಿನ್ ಪೌಲ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡವೇ ಸತ್ಯ ಎಂದು ಶುರುವಾಗೀ ಈ ಹಾಡು ಆಗಸ್ಟ್ ತಿಂಗಳಲ್ಲಿಯೇ ಕನ್ನಡ ರಾಜ್ಯೋತ್ವವದ ಛಾಯೆಯನ್ನು ಹರಡುವಷ್ಟು ಚೆಂದಗೆ ಮೂಡಿ ಬಂದಿದೆ.


ಈ ಚಿತ್ರ ಸೈಯದ್ ಸಲಾಮ್ ನಿರ್ಮಾಣ ಮತ್ತು ಶಿಲ್ಪಾ ಗಣೇಶ್ ಅವರ ಸಹ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ವಿಜಯ್ ನಾಗೇಂದ್ರ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಗಣೇಶ್ ಅವರ ವಿಶಿಷ್ಟವಾದ ಗೆಟಪ್ಪುಗಳು ಆಗಾಗ ಅನಾವರಣಗೊಳ್ಳುವ ಮೂಲಕವೇ ಒಂದಷ್ಟು ಸುದ್ದಿಯಾಗುತ್ತಿತ್ತು. ಆದರೀಗ ಬಿಡುಗಡೆಯಾಗಿರೋ ಕನ್ನಡದ ಘಮ ಹೊದ್ದುಕೊಂಡಿರೋ ಹಾಡು ಗೀತಾ ಚಿತ್ರದ ಕಥೆಯ ಹೊಸಾ ಆಯಾಮವೊಂದನ್ನು ಪ್ರೇಕ್ಷಕರೆದುರು ತೆರೆದಿಟ್ಟಿದೆ. ಗೋಕಾಕ್ ಚಳುವಳಿಯ ಛಾಯೆಯೂ ಈ ಸಿನಿಮಾದಲ್ಲಿರೋ ಸ್ಪಷ್ಟ ಸೂಚನೆಯೂ ಸಿಕ್ಕಿದೆ. ಈ ಸಿನಿಮಾದಲ್ಲಿ ಶಾನ್ವಿ ಶ್ರೀವತ್ಸ, ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ಗಣೇಶ್‌ಗೆ ಜೋಡಿಯಾಗಿ ನಟಿಸಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here