ದೈತ್ಯ ಕಲಿಗಳೆದುರು ಪೊಗರು ತೋರಿಸಿದ ಧ್ರುವ ಸರ್ಜಾ!

[adning id="4492"]

ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರೋ ಪೊಗರು ಚಿತ್ರದ ಚಿತ್ರೀಕರಣ ಕಡೆಗೂ ಅಚಿತಿಮ ಹಂತ ತಲುಪಿಕೊಂಡಿದೆ. ಧ್ರುವ ಚಿತ್ರಗಳೆಂದರೆ ಚಿತ್ರಮಂದಿರ ತಲುಪೋದು ಎರಡ್ಮೂರು ವರ್ಷ ಕಳೆದ ನಂತರವಷ್ಟೇ ಅನ್ನೋದು ಪಕ್ಕಾ. ಆದರೆ ಬೇಗನೆ ಚಿತ್ರೀಕರಣ ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಬೇಕೆಂಬ ನಿರ್ಧಾರದೊಂದಿಗೇ ಶುರುವಾದರೂ ಪೊಗರು ಚಿತ್ರ ಕೂಡಾ ಒಂದಷ್ಟು ತಡವಾಗಿರೋದು ಸುಳ್ಳಲ್ಲ. ಆದರೆ ಈ ಸಿನಿಮಾ ಮೂಲಕ ಧ್ರುವ ಮತ್ತಷ್ಟು ಪೊಗರು ತುಂಬಿಕೊಂಡೇ ಅಭಿಮಾನಿಗಳನ್ನು ಮುಖಾಮುಖಿಯಾಗಲಿದ್ದಾರೆ. ಅವರ ಪೊಗರು ಎಂಥಾದ್ದೆಂಬುದಕ್ಕೆ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿಯೇ ಜಾಹೀರಾಗಿದೆ!


ಹೆಸರಿಗೆ ತಕ್ಕಂಥಾ ಕಥೆ ಹೊಂದಿರೋ ಚಿತ್ರ ಪೊಗರು. ಇದರ ಕ್ಲೈಮ್ಯಾಕ್ಸ್ ಚಿತ್ರೀಕರಣವೀಗ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ನೆರವೇರುತ್ತಿದೆ. ಈ ದೃಷ್ಯಗಳಲ್ಲಿ ಇಡೀ ಜಗತ್ತಿನ ದೈತ್ಯ ಸ್ವರೂಪಿ ಬಾಡಿ ಬಿಲ್ಡರುಗಳ ಜೊತೆ ಧ್ರುವ ಸೆಣೆಸಿದ್ದಾರೆ. ಗಜಗಾತ್ರದ ಈ ಬಾಡಿ ಬಿಲ್ಡರುಗಳೆದುರೋ ಧ್ರುವ ಪೊಗರು ತುಂಬಿಕೊಂಡು ಸೆಡ್ಡು ಹೊಡೆಯೋ ದೃಷ್ಯಾವಳಿಗಳನ್ನು ಸೆರೆಹಿಡಿಯಲಾಗುತ್ತಿದೆ. ಈ ಬಗೆಗಿನ ಒಂದಷ್ಟು ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರತಂಡ ಹಂಚಿಕೊಂಡಿದೆ.


ಡಬ್ಲ್ಯೂ ಡಬ್ಲ್ಯೂ ಇ ಖ್ಯಾತಿಯ ಖ್ಯಾತ ಬಾಡಿಬಿಲ್ಡರ್ ಮೋರ್ಗನ್ ಆಸ್ಟೆ, ಕೈಗ್ರಿನ್, ಜಾನ್ ಲುಕಾಸ್ ಮುಂತಾದವರು ಧ್ರುವಾಗೆ ಟಾಂಗ್ ಕೊಡೋ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಕನ್ನಡ ಚಿತ್ರಗಳ ಮಟ್ಟಿಗೆ ಇದು ಹೊಸಾ ಬೆಳವಣಿಗೆ. ಈ ಮೂಲಕ ಪುಗರು ಚಿತ್ರದ ಮೂಲಕ ಈ ಅಂತಾರಾಷ್ಟ್ರೀಯ ಬಾಡಿ ಬಿಲ್ಡರುಗಳು ಕನ್ನಡಕ್ಕೂ ಪರಿಚಯವಾಗುತ್ತಿದ್ದಾರೆ. ಈ ಕಲಿಗಳೆಲ್ಲರೂ ಈ ಸಿನಿಮಾದ ಪ್ರಧಾನ ಆಕರ್ಷಣೆಯೂ ಹೌದು. ಈ ಕಲಿಗಳ ಜೊತೆಗಿನ ಕಾಳಗದ ದೃಷ್ಯಾವಳಿಗಳೊಂದಿಗೆ ಪೊಗರು ಚಿತ್ರೀಕರಣವೂ ಅಚಿತಿಮ ಹಂತಕ್ಕೆ ಬಂದಿದೆ. ಇಷ್ಟರಲ್ಲಿಯೇ ಇದರ ಬಿಡುಗಡೆ ದಿನಾಂಕವೂ ಘೋಶಣೆಯಾಗಲಿದೆ.

[adning id="4492"]

LEAVE A REPLY

Please enter your comment!
Please enter your name here