ಮತ್ತೆ ತಾರಕ್ ಸಾರಥಿಯ ಚಿತ್ರದಲ್ಲಿ ನಟಿಸಲಿದ್ದಾರೆ ದರ್ಶನ್!

[adning id="4492"]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದರ ಬೆನ್ನಿಗೇ ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳಲು ಶುರುಮಾಡಿ ವರ್ಷಗಳೇ ಕಳೆದಿವೆ. ಈ ವರ್ಷವಂತೂ ಯಜಮಾನನಾಗಿ ಮನಗೆದ್ದಿರೋ ದರ್ಶನ್ ಕುರುಕ್ಷೇತ್ರ ಚಿತ್ರದ ಕೌರವೇಂದ್ರನಾಗಿ ಅಬ್ಬರಿಸಿದ್ದಾರೆ. ಅದರ ಜೊತೆಗೇ ಈಗ ರಾಬರ್ಟ್ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ. ಇದೂ ಸೇರಿ ಮತ್ತೆರಡು ಚಿತ್ರ ಕೈಲಿರುವಾಗಲೇ ಮತ್ತೊಂದು ಹೊಸಾ ಚಿತ್ರಕ್ಕೂ ದರ್ಶನ್ ಒಪ್ಪಿಗೆ ನೀಡಿದ್ದಾರೆ.


ಈ ಹಿಂದೆ ತಾರಕ್ ಎಂಬ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರದ ಮೂಲಕ ಮಿಲನ ಪ್ರಕಾಶ್ ಮತ್ತು ದರ್ಶನ್ ಜೋಡಿ ಗೆಲುವು ದಕ್ಕಿಸಿಕೊಂಡಿತ್ತು. ಈ ಸಿನಿಮಾದಲ್ಲಿನ ದರ್ಶನ್ ಅವರ ಭಾವಪೂರ್ಣ ನಟನೆಗೆ ಪ್ರೇಕ್ಷಕರು ಮನಸೋತಿದ್ದರು. ಈ ಸಿನಿಮಾದ ಕಥೆ, ನಿರೂಪಣೆಗಳೆಲ್ಲವೂ ದರ್ಶನ್ ಅಭಿಮಾನಿಗಳು ಮಾತ್ರವಲ್ಲದೇ ಎಲ್ಲ ಪ್ರೇಕ್ಷಕರನ್ನೂ ಸೆಳೆದುಕೊಂಡಿತ್ತು. ಚಾಲೆಂಜಿಂಗ್ ಸ್ಟಾರ್ ಮಾಸ್ ಚಿತ್ರಗಳಲ್ಲಿಯೇ ಸಾಲು ಸಾಲಾಗಿ ನಟಿಸುತ್ತಾ ಬಂದಿದ್ದ ಘಳಿಗೆಯಲ್ಲಿಯೇ ತೆರೆಕಂಡಿದ್ದ ತಾರಕ್‌ಗೆ ಒಲಿದದ್ದು ಪುಷ್ಕಳ ಗೆಲುವು. ಇದೀಗ ಮತ್ತೆ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರವೊಂದಪಕ್ಕೆ ದರ್ಶನ್ ಹಸಿರು ನಿಶಾನೆ ತೋರಿಸಿದ್ದಾರೆ.


ದರ್ಶನ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುತ್ತಲೇ ಮಿಲನಾ ಪ್ರಕಾಶ್ ಒಂದು ಸಮರ್ಥವಾದ ತಂಡದೊಂದಿಗೆ ಕಾರ್ಯಾರಂಭ ಮಾಡಿ ಬಿಟ್ಟಿದ್ದಾರೆ. ಇದೀಗ ಸ್ಕ್ರಿಫ್ಟ್ ವರ್ಕ್ ವೇಗವಾಗಿ ನಡೆಯುತ್ತಿದೆ. ಇದರ ಜೊತೆ ಜೊತೆಗೇ ತಾರಾಗಣದ ಬಗ್ಗೆಯೂ ಪ್ರಕಾಶ್ ಆಲೋಚಿಸುತ್ತಿದ್ದಾರೆ. ಆದಷ್ಟು ಬೇಗನೆ ಈ ಚಿತ್ರದ ಟೈಟಲ್ ಅನೌನ್ಸ್ ಮಾಡಿ ಆ ಬಳಿಕೆ ಬೇರೆ ತಯಾರಿ ನಡೆಸೋ ತೀರ್ಮಾನ ಪ್ರಕಾಶ್ ಅವರದ್ದು. ದರ್ಶನ್ ಈಗಾಗಲೇ ಒಪ್ಪಿಕೊಂಡಿರೋ ಸಿನಿಮಾ ಮುಗಿಸಿಕೊಂಡು ತಕ್ಷಣವೇ ಪ್ರಕಾಶ್ ಸಾರಥ್ಯದ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.


ಇದೀಗ ದರ್ಶನ್ ರಾಬರ್ಟ್ ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ. ಸೆಪ್ಟೆಂಬರ್ ಎರಡನೇ ವಾರದಿಂದ ಈ ಚಿತ್ರೀಕರಣ ಚಾಲೂ ಆಗಲಿದೆ. ಅದು ಮುಗಿಯುತ್ತಲೇ ಒಡೆಯ ಚಿತ್ರದ ಚಿತ್ರೀಕರಣವನ್ನೂ ಸಮಾಪ್ತಿ ಮಾಡಿಕೊಳ್ಳಲಿದ್ದಾರೆ. ಅದಾದ ನಂತರ ಗಂಡುಗಲಿ ಮದಕರಿ ನಾಯಕ ಅವರಿಗಾಗಿ ಕಾದಿದೆ. ಅದಾದ ನಂತರದಲ್ಲಿ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ವಿದ್ಯಕ್ತ ಚಾಲನೆ ಸಿಗಲಿದೆ.

[adning id="4492"]

LEAVE A REPLY

Please enter your comment!
Please enter your name here