ಲಂಗದಾವಣಿ ತೊಟ್ಟ ಬಿಕಿನಿ ಬೇಬಿ ಪೂಜಾ ಹೆಗ್ಡೆ!

ಮೂಲತಃ ಕರುನಾಡಿದ ಹುಡುಗಿಯಾದ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಲ್ಲಿ ಮಿಂಚಿ ಬಾಲಿವುಡ್ಡಲ್ಲಿಯೂ ಹೆಜ್ಜೆ ಗುರುತು ಮೂಡಿಸಿರುವಾಕೆ. ಈಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಿರೋ ಪೂಜಾ ಚೂರು ಪುರಸೊತ್ತು ಸಿಕ್ಕರೂ ಬಿಕಿನಿ ತೊಟ್ಟು ಪೋಸು ಕೊಟ್ಟ ಆ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸೋ ಹವ್ಯಾಸ ಹೊಂದಿರೋ ನಟಿ. ಇದರಿಂದಾಗಿ ಪೂಜಾ ಹೆಗ್ಡೆ ಅಂದರೆ ಬಿಕಿನಿ ಪೋಸಿನ ಚಿತ್ರಗಳೇ ನೆನಪಾಗುವಂತಾಗಿ ಹೋಗಿತ್ತು. ಸಿನಿಮಾಗಳಲ್ಲಿಯೂ ಬೋಲ್ಡ್ ಅವತಾರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಈಕೆಯನ್ನು ಮೈ ತುಂಬಾ ಬಟ್ಟೆ ತೊಟ್ಟ ಅವತಾರದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಅನ್ನುವಂಥಾ ವಾತಾವರಣವಿತ್ತು.


ಆದರೆ, ಹೊಸಾ ಚಿತ್ರವೊಂದಕ್ಕಾಗಿ ಈಕೆಯ ಹೊಸಾ ಗೆಟಪ್ಪು ಕಂಡು ಎಲ್ಲರೂ ಹೌಹಾರಿದ್ದಾರೆ. ಅದರಲ್ಲಿ ಲಂಗ ದಾವಣಿ ತೊಟ್ಟು ಸೈಕಲ್ ಸವಾರಿ ನಡೆಸೋ ಪಕ್ಕಾ ಹಳ್ಳಿ ಹುಡುಗಿಯಂತೆ ಪೂಜಾ ಕಾಣಿಸಿಕೊಂಡಿದ್ದಾಳೆ. ಈ ಫೋಟೋ ಈಗ ಆಕೆಯ ಬಿಕಿನಿ ಅವತಾರಗಳನ್ನೇ ಸೈಡಿಗಟ್ಟವಂತೆ ಸದ್ದು ಮಾಡುತ್ತಿದೆ. ಈ ಲುಕ್ಕು ಕಂಡು ತೆಲುಗು ಮಾತ್ರವಲ್ಲದೇ ಇತರೇ ಭಾಷೆಗಳಲ್ಲಿರೋ ಪೂಜಾಭಿಮಾನಿಗಳೂ ಬೆರೆಗಾಗಿದ್ದಾರೆ. ಅಂದಹಾಗೆ ಪೂಜಾ ಹೀಗೆ ಏಕಾಏಕಿ ಗೆಟಪ್ಪು ಬದಲಾಯಿಸಿಕೊಂಡಿರೋದು ತೆಲುಗಿನ ವಾಲ್ಮೀಕಿ ಎಂಬ ಚಿತ್ರಕ್ಕಾಗಿ. ಈ ಸಿನಿಮಾದಲ್ಲಿ ಈಕೆ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಿದ್ದಾಳಂತೆ. ಅಂತೂ ಪೂಜಾಳ ಹಳ್ಳಿ ಶೈಲಿಯ ಪಾತ್ರದ ಫಸ್ಟ್ ಲುಕ್ ಮೂಲಕವೇ ಈ ಚಿತ್ರ ಜನಮನ ಸೆಳೆದಿದೆ.


ವಾಲ್ಮೀಕಿ ಚಿತ್ರವೀಗ ಸಂಪೂಣ್ ಚಿತ್ರೀಕರಣ ಮುಗಿಸಿಕೊಂಡಿದೆ. ಇದರಲ್ಲಿ ವರುಣ್ ತೇಜ್ ನಾಯಕನಾಗಿ ನಟಿಸಿದ್ದಾರೆ. ವಾಲ್ಮೀಕಿಯನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈವರೆಗೂ ಪೂಜಾ ದಕ್ಕಿಸಿಕೊಂಡಿದ್ದ ಇಮೇಜಿಗೆ ವಿರುದ್ಧವಾಗಿದೆ ಅನ್ನೋದಕ್ಕೆ ಫಸ್ಟ್ ಲುಕ್ ಪೋಸ್ಟರ್‌ಗಿಂತಾ ಬೇರೆ ಸಾಕ್ಷಿ ಬೇಕಿಲ್ಲ. ಹೃತಿಕ್ ರೋಶನ್ ಜೊತೆ ಮೊಹೆಂಜದಾರೋ ಚಿತ್ರದಲ್ಲಿ ನಾಯಕಿಯಾಗಿ ನಟಿಸೋ ಮೂಲಕ ಬಾಲಿವುಡ್ ಮಟ್ಟದಲ್ಲಿಯೂ ಮಿಂಚಿದ್ದ ಪೂಜಾ ಮೂಲರ್ತ ಮಂಗಳೂರಿನ ಹುಡುಗಿ. ಆಕೆಯೀಗ ಹಳ್ಳಿ ಹುಡುಗಿಯಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾಳೆ.

LEAVE A REPLY

Please enter your comment!
Please enter your name here