ರಾಬರ್ಟ್‌ಗೆ ಜೋಡಿಯಾದ ಮೆಹರೀನ್ ಫಿರ್ಜಾದಾ!

[adning id="4492"]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರದ ನಂತರ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಫಸ್ಟ್ ಲುಕ್ ಮೂಲಕವೇ ಅಭಿಮಾನಿಗಳನ್ನು ಥ್ರಿಲ್ ಆಗಿಸಿರೋ ಈ ಸಿನಿಮಾ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಅತ್ತ ಕುರುಕ್ಷೇತ್ರದ ಯಶಸ್ಸಿನ ಖುಷಿಯಲ್ಲಿರೋ ದರ್ಶನ್, ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಗೊಳ್ಳುತ್ತಿದ್ದಾರೆ. ಆದರೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದರೂ ಕೂಡಾ ನಾಯಕಿ ಯಾರೆಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಆದರೀಗ ಎರನೇ ಹಂತದ ಚಿತ್ರೀಕರಣದ ಆರಂಭದಲ್ಲಿಯೇ ರಾಬರ್ಟ್‌ಗೆ ಜೊತೆಯಾಗಲು ದಕ್ಷಿಣದ ಚೆಲುವೆಯೊಬ್ಬಳು ತಯಾರಾಗಿದ್ದಾಳೆ.


ರಾಬರ್ಟ್ ಚಿತ್ರದಲ್ಲಿ ದರ್ಶನ್‌ಗೆ ನಾಯಕಿ ಯಾರಾಗ್ತಾರೆಂಬ ಬಗ್ಗೆ ಅಭಿಮಾನಿಗಳ ನಡುವೆ ಚರ್ಚೆ ಶುರುವಾಗಿ ಬಹಳಷ್ಟು ಕಾಲವೇ ಸರಿದು ಹೋಗಿದೆ. ಈ ಸಾಲಿನಲ್ಲಿ ಕನ್ನಡ ಮತ್ತು ಪರಭಾಷಾ ನಟಿಯರ ಒಂದಷ್ಟು ಹೆಸರುಗಳು ತೇಲಿ ಬಂದಿದ್ದವು. ಅದೇ ರೀತಿ ತಿಂಗಳ ಹಿಂದೆ ತೆಲುಗು ನಟಿ ಮೆಹರೀನ್ ಫಿರ್ಜಾದಾ ಕೂಡಾ ಕೇಳಿ ಬಂದಿತ್ತು. ಆದರೆ ಅದಾಗಲೇ ಸಾಕಷ್ಟು ನಟಿಯರ ಹೆಸರು ಕೇಳಿ ಅದ್ಯಾವುದೂ ನಿಜವಾಗದ್ದರಿಂದ ಅಭಿಮಾನಿಗಳು ಮೆಹರೀನ್ ಆಗಮನದ ಸುದ್ದಿಯನ್ನೂ ನಂಬಿರಲಿಲ್ಲ. ಆದರೀಗ ರಾಬರ್ಟ್‌ಗೆ ಜೋಡಿಯಾಗಿ ಮೆಹರಿಷ್ ಆಗಮನ ಪಕ್ಕಾ ಆಗಿದೆ.


ನಾಯಕಿಯೇ ಇಲ್ಲದೇ ರಾಬರ್ಟ್ ಮೊದಲ ಹಂತದ ಚಿತ್ರೀಕರಣ ಸಮಾಪ್ತಿಗೊಂಡಿದೆ. ಇದೀಗ ಕೊಂಚ ಬಿಡುವಿನ ಬಳಿಕ ಸೆಪ್ಟೆಂಬರ್ ಎರಡನೇ ವಾರದಿಂದ  ಎರಡನೇ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ದರ್ಶನ್ ಕೂಡಾ ಅದಕ್ಕಾಗಿ ರೆಡಿಯಾಗುತ್ತಿದ್ದಾರೆ. ಈ ಎರಡನೇ ಹಂತದ ಚಿತ್ರೀಕರಣ ಹೈದ್ರಾಬಾದಿನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ನಡೆಯಲಿದೆ. ಈ ಹಂತದಲ್ಲಿಯೇ ಟಾಲಿವುಡ್ ಸುಂದರಿ ಮೆಹರೀನ್ ರಾಬರ್ಟ್‌ಗೆ ಜೋಡಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.


ರಾಬರ್ಟ್ ಮೂಲಕ ಕನ್ನಡಕ್ಕೆ ಆಗಮಿಸುತ್ತಿರೋ ಮೆಹರೀನ್ ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ನಟಿ. ಮೂಲತಃ ಪಂಜಾಬಿನ ಹುಡುಗಿ ಮೆಹರೀನ್ ಪಾಲಿಗೆ ನಟಿಯಾಗಿ ಅವಕಾಶ ತೆರೆದುಕೊಂಡಿದ್ದು ತೆಲುಗು ಚಿತ್ರರಂಗದ ಮೂಲಕವೇ. ಹಾಗೆ ತೆಲುಗಿನಲ್ಲಿ ಮಿಂಚುತ್ತಲೇ ತಮಿಳು ಚಿತ್ರಗಳಲ್ಲಿಯೂ ನಟಿಸಿರೋ ಈಕೆ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಅನುಷ್ಕಾ ಶರ್ಮಾ ನಟಿಸಿದ್ದ ಫಿಲೌರಿ ಚಿತ್ರದಲ್ಲಿ ಮೆಹರೀನ್ ಕೂಡಾ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಆಕೆ ಕನ್ನಡಕ್ಕೂ ಪಾದಾರ್ಪಣೆ ಮಾಡೋ ಕಾಲ ಕೂಡಿ ಬಂದಿದೆ.

[adning id="4492"]

LEAVE A REPLY

Please enter your comment!
Please enter your name here