ಕನ್ನಡಾಭಿಮಾನದ ಬಗ್ಗೆ ಕಡೆಯೂ ಬಾಯ್ಬಿಟ್ಟ ಕಿರಿಕ್ ರಶ್ಮಿಕಾ!

ಶ್ಮಿಕಾ ಮಂದಣ್ಣ ಪರಭಾಷೆಯಲ್ಲಿ ನೆಲೆ ಸಿಗುತ್ತಲೇ ಬೆಂಕೆಂದೇ ಕನ್ನಡವನ್ನು ಕಡೆಗಳಿಸುತ್ತಿದ್ದಾಳಾ… ಇಂಥಾದ್ದೊಂದು ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿತ್ತು. ಕನ್ನಡದಿಂದ ತಮಿಳುನಾಡಿಗೆ ಹೋಗಿ ಸೂಪರ್ ಸ್ಟಾರ್ ಆಗಿರೋ ರಜನೀಕಾಂತ್‌ರಂಥವರೇ ಕನ್ನಡದ ಬಗ್ಗೆ ಅಭಿಮಾನ ಹೊಂದಿದ್ದಾರೆ. ಈವತ್ತಿಗೂ ಅಚ್ಚ ಕನ್ನಡದಲ್ಲಿಯೇ ಮಾತಾಡುತ್ತಾರೆ. ಅಂಥಾದ್ದರಲ್ಲಿ ಸಾಧನೆಯ ಹಾದಿಯಲ್ಲಿ ಒಂದೆರಡು ಹೆಜ್ಜೆಯಿಡುತ್ತಲೇ ರಶ್ಮಿಕಾಗೆ ಈ ಪಾಟಿ ಅಸಡ್ಡೆ ಶುರುವಾಯಿತಾ ಎಂಬಂಥಾ ಹಲವು ಭಾವಗಳೂ ಕಾಡಿದ್ದವು. ಆದರೆ ವಿವಾದದ ಕಿಚ್ಚು ಹೊತ್ತಿಸಿ ತನ್ನ ಪಾಡಿಗೆ ತಾನಿದ್ದ ರಶ್ಮಿಕಾ ಈಗ ಕಡೆಗೂ ಸಾಮಾಜಿಕ ಜಾಲತಾಣದ ಮೂಲಕ ತನ್ನ ಕನ್ನಡಾಭಿಮಾನದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾಳೆ.


ಒಂದು ಕಾಲದಲ್ಲಿ ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರಕ್ಕೆ ಫಿದಾ ಆಗಿ ರಶ್ಮಿಕಾಳ ಅಭಿಮಾನಿಗಳಾಗಿದ್ದರಲ್ಲಾ? ಅಂಥವರೇ ಕನ್ನಡದ ವಿಚಾರದಲ್ಲಿ ಆಕೆ ತೋರಿದ್ದ ಉದ್ಧಟತನದ ಬಗ್ಗೆ ಅಸಹನೆ ಹೊಂದಿದ್ದರು. ಆದ್ದರಿಂದಲೇ ಖುದ್ದು ಅಭಿಮಾನಿಗಳಿಂದಲೇ ಕರ್ನಾಟಕದಲ್ಲಿ ವಿರೋಧ ಎದುರಿಸೋ ದುಃಸ್ಥಿತಿ ರಶ್ಮಿಕಾಗೆ ಬಂದೊದಗಿತ್ತು. ಇತ್ತೀಚೆಗೆ ರಶ್ಮಿಕಾ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷಳಾದಾಗಲೂ ಜನ ಮುಗಿಬಿದ್ದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಅದೆಲ್ಲವಕ್ಕೂ ಸಾವಕಾಶದಿಂದಲೇ ಉತ್ತರಿಸಿರೋ ಆಕೆ ಈ ಮೂಲವೇ ತನ್ನೊಳಗೆ ಇನ್ನೂ ಕನ್ನಡದ ಬಗ್ಗೆ. ಕನ್ನಡದಲ್ಲಿರೋ ತನ್ನ ಅಭಿಮಾನಿಗಳ ಪ್ರೀತಿ ಜೀವಂತವಿದೆ ಅನ್ನೋದನ್ನ ಸಾಬೀತುಗಗೊಳಿಸಿದ್ದಾಳೆ.


ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಪ್ರತ್ಯಕ್ಷಳಾಗುತ್ತಲೇ ಹಲವರು ಹಲವು ಬಗೆಯ ಪ್ರಶ್ನೆ ಕೇಳಿದ್ದರು. ವಿಜಯ್ ದೇವರಕೊಂಡನ ವಿಚಾರವಾಗಿ ಮೊದಲ್ಗೊಂಡು, ಬಾಲಿವುಡ್‌ಗೆ ಹಾರೋದರ ಕುರಿತಾಗಿಯೂ ಪ್ರಶ್ನೆಗಳು ತೂರಿ ಬಂದಿದ್ದವು. ಆದರೆ ಪ್ರಧಾನವಾಗಿ ಈ ಪ್ರಶ್ನೆಗಳು ತೂರಿ ಬಂದಿದ್ದು ಕನ್ನಡಾಭಿಮಾನದ ಕುರಿತಾಗಿದೆ. ಅದರಲ್ಲಿಯೂ ಓರ್ವರು ಕನ್ನಡದಲ್ಲಿರೋ ನಿಮ್ಮ ಅಭಿಮಾನಿಗಳ ಬಗ್ಗೆ ಒಂದು ಪದದಲ್ಲಿ ಹೇಳಿ ಎಂಬ ಸವಾಲನ್ನು ಮುಂದಿಟ್ಟಿದ್ದರು. ಇದಕ್ಕೆ ರಶ್ಮಿಕಾ ಯಾರೇನೇ ಅಂದರೂ ಕನ್ನಡವನ್ನು, ಕನ್ನಡದ ತನ್ನ ಅಭಿಮಾನಿಗಳನ್ನು ಸದಾ ಪ್ರೀತಿಸೋದಾಗಿ ಹೇಳಿಕೊಂಡಿದ್ದಾಳೆ. ಈ ಪ್ರತಿಕ್ರಿಯೆ ಕಂಡು ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ.


ಈ ಪ್ರತಿಕ್ರಿಯೆಯನ್ನೀಗ ರಶ್ಮಿಕಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ವೈರಲ್ ಮಾಡಿ ಬಿಟ್ಟಿದ್ದಾರೆ. ಅಂತೂ ತನಗೆ ಆರಂಭದಲ್ಲಿಯೇ ಅತೀವ ಪ್ರೀತಿ ತೋರಿದ್ದ ಕನ್ನಡಿಗರು ಮುನಿಸಿಕೊಂಡರೆ ಎಂಥಾ ಪರಿಣಾಮವಾಗಬಹುದೆಂಬ ಬಗ್ಗೆ ರಶ್ಮಿಕಾಗೆ ಮನವರಿಕೆಯಾದಂತಿದೆ. ತಾನು ತಮಿಳು, ತೆಲುಗು ಸೇರಿದಂತೆ ಯಾವ ಭಾಷೆಯಲ್ಲಿಯೇ ಪ್ರಸಿದ್ಧಿ ಪಡೆದರೂ ಕನ್ನಡಿಗರು ತೋರಿದ ಬೆಚ್ಚಗಿನ ಪ್ರೀತಿ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಅನ್ನೋದೂ ಆಕೆಗೆ ಗೊತ್ತಾದಂತಿದೆ. ಒಟ್ಟಾರೆಯಾಗಿ ರಶ್ಮಿಕಾ ಮಂದಣ್ಣನಿಗೆ ಪರಿಸ್ಥಿತಿಯೆಲ್ಲ ಕೈ ಮೀರಿ ಹೋಗೋ ಸಂಧಿಕಾಲದಲ್ಲಿಯೇ ಜ್ಞಾನೋದಯವಾದಂತಿದೆ!

LEAVE A REPLY

Please enter your comment!
Please enter your name here