ಸಮುದ್ರ ತೀರದಲ್ಲಿ ತಾಪಮಾನ ಹೆಚ್ಚಿಸಿದ ನಿಕೇಷಾ ಪಟೇಲ್!

ಕಿಚ್ಚ ಸುದೀಪ್‌ಗೆ ವರದನಾಯಕ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಕೆ ನಿಕೇಷಾ ಪಟೇಲ್. ಅದಾದ ನಂತರವೂ ಮತ್ತೊಂದಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಿಕೇಷಾ ಇದೀಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈಕೆ ಸಿನಿಮಾಗಳ ಮೂಲಕ ಅಷ್ಟಾಗಿ ಸುದ್ದಿ ಮಾಡಿರಲಿಲ್ಲ. ಆದರೀಗ ಸ್ವಿಮ್ ಸೂಟ್‌ನ ಹಾಟ್ ಫೋಟೋಗಳ ಮೂಲಕ ನಿಕೇಷಾ ನಡು ಮಳೆಗಾಲದಲ್ಲಿಯೂ ತಾಪಮಾನ ಹೆಚ್ಚಿಸಿದ್ದಾಳೆ!


ನಿಕೇಷಾ ಪಟೇಲ್ ರೆಡ್ ಸ್ವಿಮ್ ಸೂಟ್‌ನಲ್ಲಿರೋ ಹಾಟ್ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ಮೂಲಕವೇ ಬಹು ಕಾಲದ ನಂತರ ಈ ನಟಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾಳೆ. ಅವಕಾಶಗಳು ಕಡಿಮೆಯಾಗುತ್ತಿದ್ದಂತೆಯೇ ಯಾವುದಾದರೂ ಬೀಚು ಹುಡುಕಿಕೊಂಡು ಹೋಗಿ ಸ್ವಿಮ್ ಸೂಟಲ್ಲಿ ಫೋಟೋ ತೆಗೆಸಿಕೊಂಡು ಹರಿಯ ಬಿಡೋದು, ಆ ಮೂಲಕ ಮತ್ತೆ ಗಮನ ಸೆಳೆಯೋದು ನಟಿಯರು ಅನುಸರಿಸೋ ಮಾಮೂಲಿ ಟ್ರಿಕ್ಸು. ನಿಕೇಷಾ ಕೂಡಾ ಈ ಮೂಲಕ ಮತ್ತದೇ ಟ್ರಿಕ್ಸ್ ಅನ್ನು ಪ್ರಯೋಗಿಸಿರಲೂ ಬಹುದು. ಆದರೆ ಈ ಮೂಲಕ ಆಕೆ ಭರ್ಜರಿ ಸುದ್ದಿ ಮಾಡಿರೋದಂತೂ ಸತ್ಯ!


ನಿಕೇಷಾ ಪಟೇಲ್ ಕಿಚ್ಚನ ಜೋಡಿಯಾಗಿ ಕನ್ನಡಕ್ಕೆ ಬಂದು ಆ ನಂತರದಲ್ಲಿ ನರಸಿಂಹ, ಡಕೋಟ ಪಿಕ್ಚರ್, ನಮಸ್ತೆ ಮೇಡಂ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಳು. ವರ್ಷಾಂತರಗಳ ಹಿಂದೆ ತೆರೆಕಂಡಿದ್ದ ಅಲೋನ್ ನಿಕೇಷಾ ನಟಿಸಿರೋ ಕೊನೆಯ ಕನ್ನಡ ಚಿತ್ರ. ಆ ಬಳಿಕ ತೆಲುಗಿಗೂ ತೆರಳಿದ್ದ ನಿಕೇಷಾ ತಮಿಳಿನಲ್ಲಿ ಮಾತ್ರ ದೊಡ್ಡ ಹೆಸರು ಮಾಡಿದ್ದಳು. ತಲೈವನ್, ಕರೈಯೋರಂ, ನಾರದನ್ ಮುಂತಾದ ಚಿತ್ರಗಳಲ್ಲಿ ಈಕೆ ನಾಯಕಿಯಾಗಿ ಮಿಂಚಿದ್ದಳು. ಇದೀಗ ಸಮುದ್ರ ತೀರದಲ್ಲಿ ಹಾಟ್ ಲುಕ್ಕಿನ ಫೋಟೋ ಶೂಟ್ ಮೂಲಕ ನಿಕೇಷಾ ಸುದ್ದಿಯಲ್ಲಿದ್ದಾಳೆ.

LEAVE A REPLY

Please enter your comment!
Please enter your name here