ರಶ್ಮಿಕಾಗೆ ಟಾಂಗ್ ಕೊಡಲು ರೆಡಿಯಾದಳು ಜಾನ್ಹವಿ ಕಪೂರ್!

[adning id="4492"]

ನ್ನಡದ ಕಿರಿಕ್ ಪಾರ್ಟಿ ಚಿತ್ರದಿಂದಲೇ ನಟಿಯಾಗಿ ಕಣ್ಬಿಟ್ಟಿದ್ದಾಕೆ ರಶ್ಮಿಕಾ ಮಂದಣ್ಣ. ನಂತರ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿಯೂ ಗೆದ್ದು ಇದೀಗ ಆಕೆ ತಮಿಳಿನಲ್ಲಿಯೂ ಪಾರುಪತ್ಯ ಸಾಧಿಸುವ ಹಂಬಲದಲ್ಲಿದ್ದಾಳೆ. ಈ ಮೂಲಕವೇ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರೋ ರಶ್ಮಿಕಾ ಬಾಲಿವುಡ್‌ನತ್ತಲೂ ಕಣ್ಣಿಟ್ಟಿದ್ದಾಳೆ. ತೆಲುಗಿನಲ್ಲಿಯಂತೂ ಸಮಂತಾ, ತಮನ್ನಾಳಂಥಾ ನಟಿಯರನ್ನೇ ಥಂಡಾ ಹೊಡೆಸಿರೋ ರಶ್ಮಿಕಾಗೀಗ ಬಾಲಿವುಡ್ ಕಡೆಯಿಂದ ಸಮರ್ಥ ಪ್ರತಿಸ್ಪರ್ಧಿಯೊಬ್ಬಳ ಆಗಮನವಾಗೋ ಲಕ್ಷಣಗಳಿವೆ.


ಹಾಗೆ ರಶ್ಮಿಕಾ ಮಂದಣ್ಣಗೆ ಸ್ಪರ್ಧೆಯೊಡ್ಡಲು ಆಗಮಿಸುತ್ತಿರುವಾಕೆ ಶ್ರೀದೇವಿಯ ಮಗಳು ಜಾನ್ಹವಿ ಕಪೂರ್. ಜಾನ್ಹವಿ ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿ ಒಂದಷ್ಟು ಕಾಲ ಸರಿದಿದೆ. ಅಲ್ಲಿ ಸಾಕಷ್ಟು ಅವಕಾಶ ಹೊಂದಿರೋ ಜಾನ್ಹವಿಯೀಗ ತೆಲುಗು ಚಿತ್ರರಂಗಕ್ಕೆ ಎಂಟರಿ ಕೊಡೋ ಸನ್ನಾಹದಲ್ಲಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾನೆಂಬ ಬಗ್ಗೆ ಸುದ್ದಿಯಾಗಿತ್ತಲ್ಲಾ? ಆ ಚಿತ್ರದಲ್ಲಿ ಮತ್ತೆ ಮೂರನೇ ಬಾರಿ ರಶ್ಮಿಕಾ ಮಂದಣ್ಣ ದೇವರಕೊಂಡಗೆ ಜೊತೆಯಾಗುತ್ತಾಳಾ ಎಂಬ ಕುತೂಹಲವಿತ್ತು. ಆದರೆ ಆ ಸ್ಥಾನವೀಗ ಜಾನ್ಹವಿ ಕಪೂರ್ ಪಾಲಾಗಿದೆ.


ಈಗಾಗಲೇ ಪೂರಿ ಜಗನ್ನಾಥ್ ಜಾನ್ಹವಿ ಕಪೂರ್ ಜೊತೆ ಮಾತುಕತೆ ನಡೆಸಿದ್ದಾರೆ. ಅದಕ್ಕೆ ಆಕೆಯ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆಯಂತೆ. ಈ ಮೂಲಕ ಜಾನ್ಹವಿ ದಕ್ಷಿಣದತ್ತ ಪಯಣ ಆರಂಭಿಸಿದ್ದಾಳೆ. ಶ್ರೀದೇವಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿ ನಂತರ ಬಾಲಿವುಡ್ ಪ್ರವೇಶ ಮಾಡಿದ್ದರು. ಆದರೆ ಅವರ ಮಗಳು ಬಾಲಿವುಡ್ಡಲ್ಲಿ ಮಿಂಚುತ್ತಿರುವಾಗಲೇ ದಕ್ಷಿಣದತ್ತ ಗಮನ ನೆಟ್ಟಿದ್ದಾಳೆ. ಬಾಲಿವುಡ್‌ನಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರೋ ಜಾನ್ಹವಿ ತೆಲುಗಿನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡೋದರಲ್ಲಿ ಯಾವ ಸಂದೇಹವೂ ಇಲ್ಲ. ಈ ಮೂಲಕ ರಶ್ಮಿಕಾ ಮಂದಣ್ಣಗೊಬ್ಬಳು ಪ್ರಭಲ ಪ್ರತಿಸ್ಪರ್ಧಿಯ ಆಗಮನವಾದಂತಿದೆ!

[adning id="4492"]

LEAVE A REPLY

Please enter your comment!
Please enter your name here