ಮದಗಜನ ಮನದರಸಿಯಾಗ್ತಾಳಾ ಮಹಾನಟಿ ಕೀರ್ತಿ?

[adning id="4492"]

ರಭಾಷೆಗಳಲ್ಲಿ ಪ್ರಸಿದ್ಧಿ ಪಡೆದಿರೋ ನಟಿಯರು ಕನ್ನಡಕ್ಕೆ ಆಗಮಿಸುತ್ತಾರೆಂಬ ಸುದ್ದಿ ಹರಡಿಕೊಳ್ಳೋದು, ಇನ್ನೇನು ಬಂದೇ ಬಿಟ್ಟರೆಂಬಂತೆ ರೂಮರ್ ಹಬ್ಬಿಸೋದೇನು ಕನ್ನಡಕ್ಕೆ ಹೊಸ ಬೆಳವಣಿಗೆಯಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಚಿತ್ರತಂಡಗಳು ಇಂಥಾ ಹುಳ ಬಿಡುವ ಮೂಲಕವೇ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳೋದು ಸಹ ಅಷ್ಟೇ ಮಾಮೂಲು. ಆದರೆ ಕೆಲವೊಮ್ಮೆ ಅಂಥಾ ನಟಿಯರನ್ನ ಕರೆತರಲು ಗಂಭೀರ ಪ್ರಯತ್ನ ನಡೆದಿರುತ್ತೆ. ಸದ್ಯ ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ರನ್ನು ಮದಗಜ ಚಿತ್ರದ ನಾಯಕಿಯನ್ನಾಗಿ ಕರೆತರಲು ಪ್ರಯತ್ನಿಸುತ್ತಿರೋ ಸುದ್ದಿಯೊಂದು ಹರಿದಾಡುತ್ತಿದೆ!


ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿಯೇ ನಿರ್ದೇಶಕ ಮಹೇಶ್ ಮದಗಜ ಚಿತ್ರವನ್ನು ಆರಂಭಿಸಿದ್ದಾರೆ. ಇದರಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ನಾಯಕನಾಗಿ ನಟಿಸುತ್ತಿದ್ದಾರೆ. ಟೈಟಲ್ ಲಾಂಚ್ ಆದ ಕ್ಷಣದಿಂದಲೇ ಸುದ್ದಿ ಮಾಡಲಾರಂಭಿಸಿದ್ದ ಮದಗಜ ಆ ನಂತರ ಒಂದಷ್ಟು ಸದ್ದು ಮಾಡಿದ್ದು ನಾಯಕಿ ಯಾರೆಂಬ ವಿಚಾರದಲ್ಲಿಯೇ. ಈ ಚಿತ್ರಕ್ಕೆ ನಾಯಕಿಯಾಗೋ ಸಾಲಿನಲ್ಲಿ ಪರಭಾಷಾ ನಟಿಯರ ಹೆಸರೇ ತೇಲಿ ಬಂದಿತ್ತು. ಈಗ ಕಡೆಗೂ ಅದು ಕೀರ್ತಿ ಸುರೇಶ್ ಸುತ್ತ ಗಿರಕಿ ಹೊಡೆಯಲಾರಂಭಿಸಿದೆ.


ಮದಗಜ ಚಿತ್ರತಂಡ ಕೀರ್ತಿ ಸುರೇಶ್ ಅವರನ್ನೇ ಮುರುಳಿಗೆ ಜೋಡಿಯಾಗಿಸ ಬೇಕೆಂಬ ಉತ್ತೇಶದಿಂದ ಪ್ರಯತ್ನ ನಡೆಸಿದೆಯಂತೆ. ಈ ನಿಟ್ಟಿನಲ್ಲಿ ಕೀರ್ತಿಯನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆಗಳೂ ನಡೆದಿವೆ. ಆದರೆ ಈ ಬಗ್ಗೆ ಕೀರ್ತಿ ಕಡೆಯಿಂದ ಗ್ರೀನ್ ಸಿಗ್ನಲ್ ಬರೋದು ಮಾತ್ರ ಬಾಕಿ ಉಳಿದುಕೊಂಡಿದೆ. ಹಾಗೊಂದು ವೇಳೆ ಆಕೆ ನಾಯಕಿಯಾಗಲು ಒಪ್ಪಿಕೊಂಡರೆ ಮದಗಜನಿಗೆ ಮತ್ತಷ್ಟು ಶಕ್ತಿ ಬರೋದರಲ್ಲಿ ಸಂಶಯವೇನಿಲ್ಲ. ಯಾಕೆಂದರೆ, ಕೀರ್ತಿ ಸುರೇಶ್ ಬಗೆಗಿರೋ ಕ್ರೇಜ್ ಅಂಥಾದ್ದಿದೆ.


ಆದರೆ ಬರೀ ಇಂಥಾ ಸುದ್ದಿಗಳನ್ನೇ ನಂಬಿ ಕೀರ್ತಿಯ ಆಗಮನವಾಗೇ ಆಗುತ್ತದೆ ಅನ್ನೋ ಗ್ಯಾರೆಂಟಿ ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿvತ್ರಕ್ಕೆ ಕೀರ್ತಿ ಸುರೇಶ್ ನಾಯಕಿ ಎಂಬ ಬಲವಾದ ಸುದ್ದಿ ಹರಡಿಕೊಂಡಿತ್ತು. ಆದರೆ ನಾಯಕಿಯಾದದ್ದು ಮಾತ್ರ ಸಯೇಶಾ ಸೈಗಲ್. ಆದರೆ, ಮದಗಜ ಚಿತ್ರತಂಡ ಈ ಬಗ್ಗೆ ಗಂಭೀರವಾಗಿಯೇ ಪ್ರಯತ್ನಿಸುತ್ತಿದೆ. ಒಂದು ವೇಳೆ ಕೀರ್ತಿಯ ಆಗಮನವಾದರೆ ಮದಗಜ ಆಕೆ ನಟಿಸಿದ ಮೊದಲ ಕನ್ನಡ ಚಿತ್ರವಾಗಿ ದಾಖಲಾಗುತ್ತದೆ. ಅದು ಸಾಧ್ಯವಾಗುತ್ತಾ ಅನ್ನೋದಕ್ಕೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.

[adning id="4492"]

LEAVE A REPLY

Please enter your comment!
Please enter your name here