ಮೋಷನ್ ಪೋಸ್ಟರ್‌ನಲ್ಲಿ ಮೂಡಿಕೊಂಡ ಥ್ರಿಲ್ಲರ್ ರೈನ್ ಬೋ!

[adning id="4492"]

ಗ್ಗೆ ವರ್ಷಗಳ ಹಿಂದಿನ ವರೆಗೂ ಕೃಷ್ಣಾವತಾರದ ಹಲವು ಮಜಲುಗಳ ಲವರ್ ಬಾಯ್ ಲುಕ್ಕಿನಲ್ಲಿಯೇ ಕಾಣಿಸಿಕೊಳ್ಳುತ್ತಾ ಬಂದಿದ್ದವರು ಅಜೇಯ್ ರಾವ್. ಆದರೆ ಈಗೊಂದೆರಡು ಚಿತ್ರಗಳ ಮೂಲಕ ಅವರು ಪಕ್ಕಾ ಆಕ್ಷನ್ ಲುಕ್‌ನಲ್ಲಿ ಗೆದ್ದಿದ್ದಾರೆ. ಇದೀಗ ಅಜೇಯ್ ರಾವ್ ರೈನ್ ಬೋ ಚಿತ್ರದ ಮೂಲಕ ಸೂಪರ್ ಕಾಪ್ ಆಗಿ ಅವತರಿಸೋ ಸನ್ನಾಹದಲ್ಲಿದ್ದಾರೆ. ಗುರುದೇಶಪಾಂಡೆ ನಿರ್ಮಾಣ ಮಾಡಿರೋ ಈ ಸಿನಿಮಾದ ಮೋಷನ್ ಪೋಸ್ಟರ್ ಈಗ ಬಿಡುಗಡೆಯಾಗಿದೆ.


ಎಸ್ ರಾಜವರ್ಧನ್ ರೈನ್ ಬೋವನ್ನು ನಿರ್ದೇಶನ ಮಾಡಿದ್ದಾರೆ. ಇದುವರೆಗೂ ಕನ್ನಡದಲ್ಲಿ ಹೆಚ್ಚಾಗಿ ಗಮನ ಹರಿಸದಂಥಾ ಕ್ರೈಂ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್‌ನಲ್ಲಿಯೂ ಸ್ಪಷ್ಟವಾಗಿಯೇ ಅದರ ಝಲಕ್‌ಗಳು ಅನಾವರಣಗೊಂಡಿವೆ. ಈ ಸಿನಿಮಾ ನಿರ್ಮಾಪಕರೂ ಆಗಿರುವ ಗುರು ದೇಶಪಾಂಡೆಯವರ ಜೊತೆ ಹಲವಾರು ವರ್ಷಗಳಿಂದ ಕೆಲಸ ಮಾಡಿದ್ದವರು ರಾಜವರ್ಧನ್. ಅವರ ಪಾಲಿಗೆ ರೈನ್ ಬೋ ಮೊದಲ ಚಿತ್ರ. ಈಗ ಎಲ್ಲೆಡೆ ಜನಸಾಮಾನ್ಯರಿಗೆ ಸುಳಿವೇ ಕೊಡದಂತೆ ಸೈಬರ್ ಕ್ರೈಂನ ನಾನಾ ಮುಖಗಳು ಹಬ್ಬಿಕೊಂಡಿವೆಯಲ್ಲಾ? ಅಂಥಾ ರೋಚಕ ಕಥೆಯನ್ನು ರಾಜವರ್ಧನ್ ರೈನ್ ಬೋಗಾಗಿ ಆರಿಸಿಕೊಂಡಿದ್ದಾರೆ.


ಈ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕವೇ ಅವರು ತಮ್ಮ ಶಿಷ್ಯನ ಮೊದಲ ಹೆಜ್ಜೆಗೆ ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಮಿಂಚಲಿರೋ ಅಜೇಯ್ ರಾವ್‌ಗೆ ಕೆಂಡಸಂಪಿಗೆ ಮಾನ್ವಿತಾ ಕಾಮತ್ ನಾಯಕಿಯಾಗಿದ್ದಾರೆ. ಈಗ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಮಾನ್ವಿತಾ ಇಲ್ಲಿ ಹೊಸಾ ಥರದ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ರೈನ್ ಬೋದ ಮುಹೂರ್ತ ಸಮಾರಂಭ ನೆರವೇರಿತ್ತು. ಇದೀಗ ಮೋಷನ್ ಪೋಸ್ಟರ್ ಹೊರ ಬಂದಿದೆ. ಇದು ಈ ಸಿನಿಮಾ ಬಗ್ಗೆ ಪ್ರೇಕ್ಷಕರ ಆಸಕ್ತಿಯನ್ನು ಹೊರಳಿಸುವಂತೆ ರೂಪಿಸಲ್ಪಟ್ಟಿದೆ.

[adning id="4492"]

LEAVE A REPLY

Please enter your comment!
Please enter your name here