ನನ್ನಪ್ರಕಾರ: ಸತ್ಯಾನ್ವೇಷಣೆಗಿಳಿದ ಡಾಕ್ಟರ್ ಪ್ರಿಯಾಮಣಿ!

[adning id="4492"]

ರಭಾಷೆಗಳಲ್ಲಿಯೂ ಛಾಪು ಮೂಡಿಸಿದ ಕನ್ನಡದ ಪ್ರತಿಭಾನ್ವಿತ ನಟಿಯರ ಸಾಲಿನಲ್ಲಿ ಪ್ರಿಯಾಮಣಿಯ ಹೆಸರೂ ಕೂಡಾ ಖಂಡಿತಾ ದಾಖಲಾಗುತ್ತದೆ. ಅವರು ಕಳೆದ ವರ್ಷ ಮದುವೆಯಾದ ನಂತರದಲ್ಲಿ ಸಾಂಸಾರಿಕ ಜೀವನದಲ್ಲಿ ಹಾಯಾಗಿದ್ದರು. ಆದರೆ ಅವರೆಲ್ಲ ಅಲ್ಲಿಯೇ ಕಳೆದು ಹೋಗುತ್ತಾರೋ ಎಂಬಂತಿದ್ದ ಅಭಿಮಾನಿಗಳ ಆತಂಕವನ್ನು ವಿನಯ್ ಬಾಲಾಜಿ ನಿರ್ದೇಶನದ ನನ್ನಪ್ರಕಾರ ಚಿತ್ರ ಹೋಗಲಾಡಿಸಿದೆ. ಯಾಕೆಂದರೆ ಈ ಸಿನಿಮಾ ಮೂಲಕವೇ ಪ್ರಿಯಾಮಣಿ ಮದುವೆ ನಂತರದಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ. ನಾಳೆ ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿ ಪ್ರಿಯಾಮಣಿ ಡಿಫರೆಂಟ್ ಡಾಕ್ಟರ್ ಆಗಿ ನಟಿಸಿದ್ದಾರೆ!


ಪ್ರಿಯಾಮಣಿ ಈ ಸಿನಿಮಾದಲ್ಲಿ ಯಾವ ಥರದ ಪಾತ್ರ ಮಾಡಿದ್ದಾರೆಂಬ ಕುತೂಹಲವಂತೂ ಎಲ್ಲರಲ್ಲಿಯೂ ಇದೆ. ಟ್ರೇಲರ್ ಮೂಲಕ ಅದರ ಝಲಕ್‌ಗಳು ಅನಾವರಣಗೊಂಡ ನಂತರವೂ ಅದು ಹಾಗೆಯೇ ಉಳಿದುಕೊಂಡಿದೆ. ಆದರೆ ಇಲ್ಲಿ ಪ್ರಿಯಾಮಣಿ ಡಾಕ್ಟರ್ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಡಾಕ್ಟರ್ ಅಂದಾಕ್ಷಣ ಕಾಯಿಲೆಗೆ ಮದ್ದು ಹುಡುಕೋ ದೇವರಂಥಾ ಪಾತ್ರ ಕಣ್ಮುಂದೆ ಬಂದರೆ ಇಲ್ಲಿ ಪ್ರಿಯಾಮಣಿಯ ಪಾತ್ರ ಕೊಂಚ ಭಿನ್ನವಾಗಿದೆ. ಆಕೆ ಇಲ್ಲಿ ಒಂದು ಗೋಜಲಾದ ಪ್ರಕರಣದ ಸಿಕ್ಕು ಬಿಡಿಸುವಲ್ಲಿ ಪ್ರಧಾನ ಪಾತ್ರ ವಹಿಸೋ ಶೇಡಿನಲ್ಲಿಯೂ ನಟಿಸಿದ್ದಾರೆ. ಅವರ ಪಾತ್ರಕ್ಕೊಂದು ರೋಚಕ ಆಯಾಮ ಸಿಕ್ಕಿರೋದೇ ಆ ಶೇಡಿನಿಂದಂತೆ.


ನನ್ನ ಪ್ರಕಾರ ಸಿನಿಮಾವನ್ನು ವಿನಯ್ ಬಾಲಾಜಿ ಪಕ್ಕಾ ಡಿಫರೆಂಟಾಗಿಯೇ ಕಟ್ಟಿ ಕೊಟ್ಟಿದ್ದಾರಂತೆ. ಇಲ್ಲಿ ಅಚ್ಚರಿದಾಯಕ ತಿರುವುಗಳಿವೆ. ತುದಿಸೀಟಿಗೆ ಬಂದು ಕೂತರೂ ತಣಿಯದಂಥಾ ಕುತೂಹಲವಿದೆ. ಅದೆಲ್ಲದರ ಜೊತೆಗೆ ಚಿತ್ರ ವಿಚಿತ್ರವಾದ ಪಾತ್ರಗಳು ಮುದ ನೀಡಿವಂತೆ, ಕಾಡಿ ಕಂಗಾಲಾಗಿಸುವಂತೆ ಮೂಡಿ ಬಂದಿವೆಯಂತೆ. ಇಲ್ಲಿ ಪ್ರತೀ ಪಾತ್ರಗಳಿಗೂ ಪ್ರಾಧಾನ್ಯತೆ ಇದೆಯಾದರೂ ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಪಾತ್ರಗಳಲ್ಲಿ ಕಥಾ ಸೂತ್ರ ಅಡಕವಾಗಿರಲಿದೆ. ಇನ್ನುಳಿದಂತೆ ಇಂಥಾ ಆವೇಗದ ಕಥೆಗೆ ಸಂಕಲನ ಸೇರಿದಂತೆ ಪ್ರತೀ ವಿಭಾಗಗಳೂ ಸಾಥ್ ಕೊಟ್ಟಿವೆ. ಸ್ಕ್ರೀನ್‌ಪ್ಲೇನಲ್ಲಂತೂ ಕ್ನ್ನಡಕ್ಕೆ ತೀರಾ ಹೊಸತಾದ ಪ್ರಯೋಗವೂ ಇಲ್ಲಿದೆ. ತಾಂತ್ರಿಕವಾಗಿಯೂ ವಿಶೇಷತೆಗಳಿಂದ ಕೂಡಿರೋ ಈ ಚಿತ್ರ ನಾಳೆ ಬಿಡುಗಡೆಯಾಗಲಿದೆ.

[adning id="4492"]

LEAVE A REPLY

Please enter your comment!
Please enter your name here