ಕಿರಿಕ್ ಪಾರ್ಟಿ ನಟ ರಘು ಪಾಂಡೇಶ್ವರರ ಮಗಳು ಆತ್ಮಹತ್ಯೆ ಮಾಡಿಕೊಂಡಳೇ?

[adning id="4492"]

ತುಳು ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುತ್ತಾ, ಕನ್ನಡ ಚಿತ್ರಗಳಲ್ಲಿಯೂ ಮಿಂಚುತ್ತಿರುವವರು ನಟ ರಘು ಪಾಂಡೇಶ್ವರ. ಕಿರಿಕ್ ಪಾರ್ಟಿಯಲ್ಲಿಯೂ ಒಂದು ಪಾತ್ರ ಮಾಡುದ್ದ ರಘು ಪಾಲೀಗೀಗ ಮಹಾ ಆಘಾತವೊಂದು ಎದುರಾಗಿದೆ. ಎದೆಮಟ್ಟ ಬೆಳೆದು ನಿಂತಿದ್ದ ಮಗಳನ್ನು ಕಳೆದುಕೊಂಡ ಸಂಕಟ ಅವರನ್ನಾವರಿಸಿಕೊಂಡಿದೆ.


ರಘು ಪಾಂಡೇಶ್ವರರ ಮಗಳು ರಕ್ಷಾ ನೆನ್ನೆ ಆತ್ಮಹತ್ಯೆಗೆ ಶರಣಾಗಿದ್ದಾಳೆನ್ನಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ರಘು ಬೆಂಗಳೂರಿನಲ್ಲಿಯೇ ವಾಸವಿದ್ದರು. ಅಲ್ಲಿನ ನಿವಾಸದಲ್ಲಿಯೇ ರಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಇದಕ್ಕೆ ಕಾರಣವೇನೆಂಬ ವಿಚಾರ ಮಾತ್ರ ಇನ್ನೂ ತಿಳಿದು ಬಂದಿಲ್ಲ. ದಕ್ಷಿಣ ಕನ್ನಡ ಮೂಲದವರಾದ ರಘು ಪಾಂಡೇಶ್ವರ ತುಳು ಚಿತ್ರರಂಗದ ಮೂಲಕ ನಟನಾಗಿ ರೂಪುಗೊಂಡು ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಗಳಿಸಿಕೊಂಡಿದ್ದರ ಹಿಂದೆ ಕಷ್ಟದ ಕಥೆಯಿದೆ. ಆದರೆ ಅದೆಲ್ಲವನ್ನು ನೀಗಿಕೊಂಡು ಮುಂದಡಿ ಇಡುವಂತೆ ಮಾಡಿದ್ದದ್ದು ಮಗಳು ರಕ್ಷಾ ಎಂಬ ಕನಸು. ಆದರೀಗ ಆಕೆಯೇ ದುರಂತ ಅಂತ್ಯ ಕಂಡಿರೋದು ರಘು ಪಾಲಿಗೆ ಬಂದೆರಗಿರೋ ಮಹಾ ಆಘಾತ.


ರಘು ಪಾಂಡೇಶ್ವರ ಕನ್ನಡದ ಹಲವಾರು ಚಿತ್ರಗಳಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಿರಿಕ್ ಪಾರ್ಟಿ, ಉಳಿದವರು ಕಂಡಂತೆ ಮುಂತಾದ ಚಿತ್ರಗಳ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗಂತೂ ಬಿಡುಗಡೆ ಕಾಣುವ ಒಂದಷ್ಟು ಚಿತ್ರಗಳಲ್ಲಿ ರಘು ಹಾಜರಿ ಇದ್ದೇ ಇರುತ್ತಿತ್ತು. ಕನ್ನಡದ ಜೊತೆಗೇ ತುಳು ಚಿತ್ರರಂಗದಲ್ಲಿಯೂ ರಘು ಸಕ್ರಿಯರಾಗಿದ್ದರು. ಹೀಗೆ ಹಂತ ಹಂತವಾಗಿ ನಟನಾಗಿ ರೂಪುಗೊಂಡಿದ್ದ ರಘು ಪಾಲಿನ ಶಕ್ತಿಯಂತಿದ್ದ, ಸ್ಫೂರ್ತಿಯಂತಿದ್ದ ಮಗಳು ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ದುರಂತ.

[adning id="4492"]

LEAVE A REPLY

Please enter your comment!
Please enter your name here