ಡಿಂಪಲ್ ಕ್ವೀನ್‌ಗೆ ಸೈಮಾ ಅವಾರ್ಡ್ ಸಂತಸ!

ಬಾರಿಯ ಸೈಮಾ ಅವಾರ್ಡ್ ಕನ್ನಡ ಚಿತ್ರರಂಗಕ್ಕೆ ಮಹಾ ಸಂತೋಷವನ್ನು ತಂದು ತುಂಬಿದೆ. ಅದರಲ್ಲಿಯೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮತ್ತು ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿ ಬಾಚಿಕೊಂಡಿವೆ. ದೊಡ್ಡಮಟ್ಟದಲ್ಲಿ ಗೆಲುವು ದಾಖಲಿಸಿದ್ದ ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಅತ್ಯುತ್ತಮ ನವ ನಿರ್ದೇಶಕ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿದೆ.


ಈಗ ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರೋ ರಚಿತಾ ಪಾಲಿಗೆ ಈ ಸೈಮಾ ಅವಾರ್ಡ್ ಮತ್ತಷ್ಟು ಹುರುಪು ತುಂಬಿದೆ. ಅಯೋಗ್ಯ ಚಿತ್ರದಲ್ಲಿ ರಚಿತಾ ರಾಮ್ ಪಾತ್ರ ಎಲ್ಲರ ಮನಗೆದ್ದಿತ್ತು. ನೀನಾಸಂಗೆ ಜೋಡಿಯಾಗಿ ನಟಿಸುತ್ತಲೇ ವರ್ಷದ ಸೂಪರ್ ಹಿಟ್ ಚಿತ್ರವೊಂದರ ಭಾಗವಾಗಿದ್ದ ರಚಿತಾಗೆ ಅದರ ಬೆನ್ನಲ್ಲಿಯೇ ಐ ಲವ್ ಯೂ ಚಿತ್ರದ ಗೆಲುವೂ ಕೈ ಹಿಡಿದಿದೆ. ಇದಾದ ನಂತರವೀಗ ಒಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಂತದಲ್ಲಿಯೇ ಅತ್ಯುತ್ತನ ನಟಿ ವಿಭಾಗದ ಸೈಮಾ ಪ್ರಶಸ್ತಿಯನ್ನೂ ರಚಿತಾ ತನ್ನಗಾಗಿಸಿಕೊಂಡಿದ್ದಾರೆ.


ಧಾರಾವಾಹಿಗಳಲ್ಲಿ ನಟಿಸುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಹಿರಿತೆರೆಗೆ ಅಡಿಯಿರಿಸಿದ್ದವರು ರಚಿತಾ ರಾಮ್. ಆ ಚಿತ್ರವೇ ಹಿಟ್ ಆದ ನಂತರದಲ್ಲಿ ಎಂದೂ ತಿರುಗಿ ನೋಡದ ಅವರ ಮುಂದೀಗ ಅವಕಾಶಗಳ ದಂಡೇ ನೆರೆದಿದೆ. ಓರ್ವ ಪರಿಪೂರ್ಣ ನಟಿ ಒಂದು ಹಂತ ತಲುಪಿದ ಮೇಲೆ ತನ್ನ ನಟನಾ ಚಾತುರ್ಯಕ್ಕೆ ಸವಾಲೊಡ್ಡುವಂಥಾ ಪಾತ್ರಗಳಿಗಾಗಿ ಅರಸುತ್ತಾರೆ. ಇದೀಗ ಅಂಥಾ ಕಾಲಘಟ್ಟ ತಲುಪಿಕೊಂಡಿರೋ ರಚಿತಾ ವರ್ಷದ ಹಿಂದೆಯೇ ಆ ಸೂಚನೆ ನೀಡಿದ್ದರು. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸೋ ಇಂಗಿತವನ್ನೂ ಹೊರಹಾಕಿದ್ದರು. ಬಹುರ್ಶ ಅತ್ಯುತ್ತಮ ನಟಿಯೆಂಬ ಪ್ರಶ್ತಿ ಬಂದ ಸಡಗರದಲ್ಲಿ ರಚಿತಾ ಅಂಥಾ ರೂಪಾಂತರದತ್ತ ಮನಸು ಮಾಡಬಹುದೇನೋ…

LEAVE A REPLY

Please enter your comment!
Please enter your name here