ಜಗ್ಗಿ ಜಗನ್ನಾಥನ ಟ್ರೇಲರ್‌ನಲ್ಲಿ ನಿಗಿನಿಗಿಸಿದ ಅಗ್ನಿ!

[adning id="4492"]

ಕ್ತಿಪ್ರಧಾನ ಮತ್ತು ಭಾವತೀವ್ರತೆಯ ಕೌಟುಂಬಿಕ ಚಿತ್ರಗಳ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡಿರುವವರು ಓಂ ಸಾಯಿ ಪ್ರಕಾಶ್. ಇಂಥಾ ಚಿತ್ರಗಳ ಮೂಲಕವೇ ಅಭಿಮಾನಿ ಬಳಗವನ್ನೂ ಹೊಂದಿರುವ ಸಾಯಿಪ್ರಕಾಶ್ ಇದೀಗ ಏಕಾಏಕಿ ಪಕ್ಕಾ ಆಕ್ಷನ್ ಮೂಡಿಗೆ ಜಾರಿದ್ದಾರೆ. ಅದರ ಫಲವಾಗಿಯೇ ಜಗ್ಗಿ ಜಗನ್ನಾಥ ಎಂಬ ಚಿತ್ರ ತಯಾರಾಗಿ ನಿಂತಿದೆ. ಇದೀಗ ಈ ಸಿನಿಮಾದ ಜಬರ್ಧಸ್ತ್ ಟ್ರೇಲರ್ ಬಿಡುಗಡೆಯಾಗಿದೆ. ಅದರಲ್ಲಿನ ಪಕ್ಕಾ ಮಾಸ್ ಸ್ವರೂಪದ ಕಥೆಯ ಚಹರೆ ಕಂಡು ನೋಡುಗರೆಲ್ಲ ಖುಷಿಗೊಂಡಿದ್ದಾರೆ.


ಜಗ್ಗಿ ಜಗನ್ನಾಥ ಚಿತ್ರದ ಮೂಲಕ ನಿರ್ದೇಶಕ ಓಂ ಸಾಯಿಪ್ರಕಾಶ್ ಲಿಖಿತ್ ಎಂಬ ಹೊಸಾ ಹುಡುಗನನ್ನು ಹೀರೋ ಆಗಿ ಲಾಂಂಚ್ ಮಾಡುತ್ತಿದ್ದಾರೆ. ಒಂದು ಸುರ್ದೀರ್ಘ ಗ್ಯಾಪಿನ ನಂತರ ದುನಿಯಾ ರಶ್ಮಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಪ್ರಧಾನ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ಅಗ್ನಿ ಐಪಿಎಸ್ ಚಿತ್ರದ ಖದರ್ ಅನ್ನೇ ನೆನಪಿಸುವಂಥಾ ಪಾತ್ರಕ್ಕೆ ಜೀವ ತುಂಬಿರೋದು ಈ ಟ್ರೇಲರ್ ಮೂಲಕ ಸ್ಪಷ್ಟವಾಗಿದೆ.


ಸಾಮಾನ್ಯ ಹುಡುಗನೊಬ್ಬ ಅಘೋರಿಯಾಗುವಂಥಾ ಅಸಾಧಾರಣ ಕಥೆಯನ್ನು ಜಗ್ಗಿ ಜಗನ್ನಾಥ ಚಿತ್ರ ಹೊಂದಿದೆಯಂತೆ. ಅದರೊಂದಿಗೇ ಭೂಗತ ಜಗತ್ತು ಮತ್ತು ಖಡಕ್ ಖಾಕಿ ಮುಖಾಮುಖಿಯಾಗೋ ಮಾಸ್ ಕಥನವನ್ನೂ ಈ ಸಿನಿಮಾ ಒಳಗೊಂಡಿದೆ. ಪೆಟ್ರೋಲ್ ಪ್ರಸನ್ನ ಬಹು ಕಾಲದ ನಂತರ ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ಅಬ್ಬರಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಈ ಟ್ರೇಲರ್‌ನಲ್ಲಿ ಸಾಯಿಕುಮಾರ್ ಅವರ ಖಡಕ್ ಪಾತ್ರವನ್ನು ಪ್ರಧಾನವಾಗಿ ರಿವೀಲ್ ಮಾಡಿದಂತಿದೆ. ಅವರ ಡೈಲಾಗ್‌ಗಳಿಗೂ ಮೆಚ್ಚುಗೆಯ ಕಮೆಂಟುಗಳೇ ಹರಿದು ಬರಲಾರಂಭಿಸಿವೆ.


ಓಂ ಸಾಯಿಪ್ರಕಾಶ್ ಜನರ ಭಾವನೆ ಮತ್ತು ಕಣ್ಣೀರನ್ನೇ ಕಲಾತ್ಮಕವಾಗಿ ಬಳಸುತ್ತಾ ಗೆದ್ದು ಬಂದವರು. ಈವರೆಗೂ ಹಲವಾರು ಭಕ್ತಿಪ್ರಧಾನ ಚಿತ್ರಗಳನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಅವರು ಏಕಾಏಕಿ ಪಕ್ಕಾ ಆಕ್ಷನ್ ಮೂವಿಯೊಂದನ್ನು ನಿರ್ದೇಶನ ಮಾಡುತ್ತಾರೆಂದರೆ ಅಚ್ಚರಿಯಾಗದೇ ಇರಲು ಸಾಧ್ಯವಿಲ್ಲ. ಸಾಯಿಪ್ರಕಾಶ್ ಸದ್ದೇ ಇಲ್ಲದೆ ಈ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಆದರೀಗ ಜಗ್ಗಿ ಜನಾರ್ಧನ ಟ್ರೇಲರ್ ಮೂಲಕ ನಿರ್ಣಾಯಕವಾಗಿಯೇ ಸದ್ದು ಮಾಡಲಾರಂಭಿಸಿದ್ದಾನೆ.

[adning id="4492"]

LEAVE A REPLY

Please enter your comment!
Please enter your name here