ನನ್ನಪ್ರಕಾರ: ದರ್ಶನ್ ಲಾಂಚ್ ಮಾಡಿರೋ ಟ್ರೇಲರ್ ಬೆಚ್ಚಿಬೀಳಿಸುತ್ತೆ!

[adning id="4492"]

ನಿರೀಕ್ಷೆಯಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನಪ್ರಕಾರ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಎಲ್ಲ ಕದಲಿಕೆಗಳನ್ನೂ ಗಮನಿಸುತ್ತಾ ಬಂದಿದ್ದ ದರ್ಶನ್ ಟ್ರೈಲರ್ ಲಾಂಚ್ ಮಾಡೋ ಮೂಲಕ ಹೊಸಬರ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಇದನ್ನು ಮೆಚ್ಚಿಕೊಂಡೇ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಬಿಡುಗೆಗೊಳಿಸುತ್ತಾರೆಂಬ ಕಾರಣವೂ ಸೇರಿಕೊಂಡಿದ್ದರಿಂದ ಈ ಟ್ರೈಲರ್‌ಗಾಗಿ ಅನೇಕರು ಕಾದು ಕೂತಿದ್ದರು. ಕುತೂಹಲವನ್ನು ಕೊತಗುಟ್ಟುವಂತೆ ಮಾಡೋ ಸಸ್ಪೆನ್ಸ್, ರೋಮಾಂಚನಗೊಳಿಸೋ ಥ್ರಿಲ್ಲರ್ ಅಂಶಗಳೊಂದಿಗೆ ಬೆಚ್ಚಿ ಬೀಳಿಸುವಷ್ಟು ಪರಿಣಾಮಕಾರಿಯಾಗಿ ಈ ಟ್ರೇಲರ್ ಮೂಡಿ ಬಂದಿದೆ.


ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರ ನನ್ನಪ್ರಕಾರ. ಇದು ಮೊದಲ ಚಿತ್ರವಾದರೂ ಕೂಡಾ ಅವರಉ ಹಂತ ಹಂತವಾಗಿ ಹೇಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳಬೇಕೆಂಬ ಜಾಣ್ಮೆಯೊಂದಿಗೆ ಗಮನ ಸೆದಿದ್ದಾರೆ. ಬಹುಶಃ ಅಂಥಾ ಸೂಕ್ಷ್ಮತೆ ಇಲ್ಲದಿದದಿದ್ದರೆ ನನ್ನಪ್ರಕಾರ ಈ ಪಾಟಿ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲವೇನೋ. ಹೀಗೆ ಎಲ್ಲಡೆ ಸದ್ದು ಮಾಡುತ್ತಾ ಸಾಗಿ ಬಂದ ನನ್ನಪ್ರಕಾರವೀಗ ದರ್ಶನ್ ಅವರ ಸಾಥ್‌ನಿಂದ, ಬಿಡುಗಡೆಗೊಂಡಿರೋ ಟ್ರೇಲರ್‌ನ ಖದರ್‌ನಿಂದ ಮತ್ತೆ ಸುದ್ದಿಯಾಗುತ್ತಿದೆ.


ಮಯೂರಿ ಪಾತ್ರದ ಸುಳಿವು ಕೊಡುತ್ತಲೇ ಬಿಚ್ಚಿಕೊಳ್ಳೋ ಈ ಟ್ರೇಲರ್ ಎಲ್ಲ ತೆರೆದಿಟ್ಟಂಥಾ ಭಾವ ಮೂಡಿಸುತ್ತಲೇ ಯಾವ ಸಿಕ್ಕುಗಳನ್ನೂ ಬಿಟ್ಟುಕೊಡದ ಕಲಾವಂತಿಕೆಯಿಂದಲೇ ರೂಪುಗೊಂಡಿದೆ. ಆ ಕಾರಣದಿಂದಲೇ ಅದು ನನ್ನಪ್ರಕಾರ ಬಿಡುಗಡೆಯಾಗೋದನ್ನೇ ಕಾಯುವಂತೆಯೂ ಮಾಡಿದೆ. ಮಾದಕ ವ್ಯಸನ, ನಶೆ, ಸ್ವೇಚ್ಚಾಚಾರ ಮತ್ತು ಮಹಾ ದುರಂತ… ಇವಿಷ್ಟು ಎಲಿಮೆಂಟುಗಳೊಂದಿಗೆ ಯಾರೂ ಊಹಿಸಲಾಗದಂಥಾ ಮಾದರಿಯಲ್ಲಿ ನನ್ನಪ್ರಕಾರ ಚಿತ್ರ ಮೂಡಿ ಬಂದಿದೆ ಅನ್ನೋದಕ್ಕೆ ಈ ಟ್ರೈಲರ್ ತುಂಬಾ ಸಾಕ್ಷಿಗಳು ಸಿಗುತ್ತವೆ.


ಕಿಶೋರ್ ಮತ್ತು ಪ್ರಿಯಾಮಣಿ ಪಾತ್ರಗಳ ಝಲಕ್ಕುಗಳೊಂದಿಗೇ ಮಯೂರಿ ನಿರ್ವಹಿಸಿರೋ ಪಾತ್ರದ ಸುತ್ತಲೇ ಕಥೆ ಜರುಗುತ್ತದೆ ಎಂಬ ಸೂಚನೆಯನ್ನೂ ಈ ಟ್ರೇಲರ್ ರವಾನಿಸಿದೆ. ಸೀಮಿತ ಅವಧಿಯಲ್ಲಿ ಇಡೀ ಚಿತ್ರದ ಪ್ರತೀ ಪಾತ್ರಗಳನ್ನೂ ಪರಿಚಯ ಮಾಡುತ್ತಾ ಆ ಮೂಲಕವೇ ಕಥೆಯ ಬಿಗುವನ್ನು ನೋಡುಗರ ಮನಸು ಮುಟ್ಟುವಂತೆ, ಕಾಡುವಂತೆ ರೂಪಿಸುವಲ್ಲಿ ಚಿತ್ರತಂಡ ಗೆದ್ದಿದೆ. ಇದನ್ನು ನೋಡಿದವರೆಲ್ಲರೂ ಈ ತಿಂಗಳು ೨೩ರಂದು ನನ್ನಪ್ರಕಾರ ಬಿಡುಗಡೆಯಾಗೋದನ್ನೇ ಎದುರುನೋಡುವಂತಾಗಿದೆ.

[adning id="4492"]

LEAVE A REPLY

Please enter your comment!
Please enter your name here