ಕೊಲೆ ಮಾಡಿ ಜೈಲುಪಾಲಾದ ಕೆಜಿಎಫ್೨ ಸ್ಟಂಟ್‌ಮ್ಯಾನ್! ಕೊಲೆಯ ಹಿಂದೆ ಬೆತ್ತಲೆ ಫೋಟೋ ಪುರಾಣ!

[adning id="4492"]

ಕೊಲೆಯ ಹಿಂದೆ ಬೆತ್ತಲೆ ಫೋಟೋ ಪುರಾಣ!
ಕೆಜಿಎಫ್ ಚಿತ್ರ ದೇಶಾಧ್ಯಂತ ಕನ್ನಡದ ಘನತೆಯನ್ನು ಮಿರುಗಿಸಿ ಅದ್ಭುತ ಯಶ ಗಳಿಸಿದ್ದೀಗ ಇತಿಹಾಸ. ಈ ಅಮೋಘ ಗೆಲುವಿನ ಪ್ರಭೆಯಲ್ಲಿಯೇ ಕೆಜಿಎಫ್ ಚಾಪ್ಟರ್೨ ಚಿತ್ರೀಕರಣವೂ ಈಗ ಭರದಿಂದ ಸಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಬೃಹತ್ ತಾರಾಗಣ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಜನರೆಲ್ಲ ಬಾಲಿವುಡ್ ಖಳನಾಯಕ್ ಸಂಜಯ್ ದತ್ ಯಾವಾಗ ಚಿತ್ರೀಕರಣಕ್ಕೆ ಹಾಜರಾಗ್ತಾರೆ, ಶೂಟಿಂಗ್ ಸ್ಪಾಟಿಂದ ಮತ್ಯಾವ ಸ್ವಾರಸ್ಯಕರ ಸುದ್ದಿ ಹೊರಬರಬಹುದೆಂಬ ಕಾತರದಿಂದ ಕಾಯುತ್ತಿದ್ದರು. ಆದರೆ ಇದೀಗ ಆ ದಿಕ್ಕಿಂದ ಹೊರಬಂದಿರೋದು ಆಘಾತಕರ ಸುದ್ದಿ!


ಕೆಜಿಎಫ್ ಛಾಪ್ಟರ್ ೨ನಲ್ಲಿ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ರಘು ಎಂಬಾತ ಕೊಲೆ ಕೇಸೊಂದರಲ್ಲಿ ತಗುಲಿಕೊಂಡು ಜೈಲುಪಾಲಾದದ್ದನ್ನು ಕಂಡು ಕೆಜಿಎಫ್ ಚಿತ್ರತಂಡ ಶಾಕ್ ಆಗಿದೆ. ಈಗಾಗಲೇ ಕನ್ನಡದ ಸಾಕಷ್ಟು ಚಿತ್ರಗಳಿಗೆ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದವನು ರಘು. ಕೆಜಿಎಫ್ ಛಾಪ್ಟರ್೨ಗೂ ಸ್ಟಂಟ್ ಮಾಸ್ಟರ್ ಆಗಿ ಬಂದಿದ್ದ ಈತ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದವನು. ಈತ ಕೊಲೆಯಂಥಾ ಅನಾಹುತಕಾರಿ ಕೆಲಸವನ್ನು ಮಾಡಿಬಿಟ್ಟಿದ್ದಾನೆಂಬ ಸಣ್ಣ ಸೂಚನೆಯೂ ಜೊತೆಗಾರರಿಗೇ ಇರಲಿಲ್ಲ. ಆದರೀಗ ಈತನನ್ನು ಪಟಾಲಮ್ಮಿನ ಸಮೇತ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್೨ ಚಿತ್ರತಂಡ ಈ ವಿಚಾರವನ್ನು ಅರಗಿಸಿಕೊಳ್ಳಲಾರದೆ ಕಂಗಾಲಾಗಿದೆ.


ಹಾಗಾದರೇ ಏನೀ ಪ್ರಕರಣ, ಸ್ಟಂಟ್ ಮಾಸ್ಟರ್ ರಘು ಯಾಕೆ ಕೊಲೆ ಮಾಡುವಂಥಾ ನೀಚ ಮಟ್ಟಕ್ಕಿಳಿದ ಎಂಬ ಪ್ರಶ್ನೆಗಳಿಗೆ ಪೊಲೀಸರ ಕಡೆಯಿಚಿದ ಒಚಿದಷ್ಟು ವಿಚಾರಗಳು ಹೊರಬೀಳುತ್ತವೆ. ಸ್ಟಂಟ್ ಮಾಸ್ಟರ್ ರಘು ಕೊಲೆಗಡುಕನಾಗಲು ಕಾರಣವಾಗಿದ್ದದ್ದು ಆತನ ಆತ್ಮೀಯ ಗೆಳತಿಯೊಬ್ಬಳಿಗಾಗಿದ್ದ ಮೋಸ. ಈ ಗೆಳತಿಯೊಂದಿಗೆ ವ್ಯಕ್ತಿಯೋರ್ವ ಅನೈತಿಕ ಸಂಬಂಧ ಹೊಂದಿದ್ದನಂತೆ. ಒಂದಷ್ಟು ಕಾಲ ಇದು ಮುಂದುವರೆದು ಆ ನಂತರ ಆತ ಬೆತ್ತಲೆ ಫೋಟೋ ಒಂದನ್ನು ಇಟ್ಟುಕೊಂಡು ರಘು ಗೆಳತಿಯನ್ನು ಬ್ಲಾಕ್‌ಮೇಲ್ ಮಾಡಲಾರಂಭಿಸಿದ್ದ. ಬೇರೆ ದಾರಿ ಕಾಣದೆ ಆಕೆ ಈ ವಿಚಾರವನ್ನು ರಘು ಬಳಿ ಹೇಳಿಕೊಂಡಿದ್ದಳು.


ಹೀಗೊಂದು ವಿಚಾರ ಗೊತ್ತಾದಾಕ್ಷಣ ರಘು ಸಮಚಿತ್ತದಿಂದ ಯೋಚಿಸಿದ್ದರೆ ಅ ಅನಾಹುತ ಸಂಭವಿಸುತ್ತಿರಲಿಲ್ಲವೇನೋ. ಆದರೆ ಆತ ಥೇಟು ಸಿನಿಮಾ ಶೈಲಿಯಲ್ಲಿ ರೊಚ್ಚಿಗೆದ್ದು ಗೆಳತಿಯೊಂದಿಗೆ ಸೇರಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಂದುಬಿಟ್ಟಿದ್ದನಂತೆ. ಅದಾದ ನಂತರ ಏನೂ ಆಗೇ ಇಲ್ಲವೆಂಬಂತೆ ಕೆಜಿಎಫ್ ೨ ತಂಡದ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರಘು ಈಗ ತನ್ನ ಗೆಳತಿ ಹಾಗೂ ಕೊಲೆಗೆ ಸಹಾಯ ಮಾಡಿದ ಮತ್ತೋರ್ವನೊಂದಿಗೆ ಜೈಲುಪಾಲಾಗಿದ್ದಾನೆ. ಕೆಜಿಎಫ್‌ನಂಥಾ ದೊಡ್ಡ ಚಿತ್ರ ಮಾಡಿದರೂ ಈ ಚಿತ್ರತಂಡ ವಿವಾದಗಳಿಂದ ಸದಾ ದೂರವಿತ್ತು. ಇದೀಗ ಸ್ಟಂಟ್ ಮಾಸ್ಟರ್ ರಘು ಪ್ರಕರಣ ಇಡೀ ತಂಡವನ್ನು ಕೊಂಚ ವಿಚಲಿತವಾಗಿಸಿದೆ.

[adning id="4492"]

LEAVE A REPLY

Please enter your comment!
Please enter your name here