ನೆರೆಪೀಡಿತ ಜನರಿಗೆ ನೆರವಾಗಲು ಹೋರಟ ರಾಂಧವ ಟೀಂ! ಭುವನ್ ಸಾರಥ್ಯದಲ್ಲಿ ಚಾಚಿಕೊಂಡಿದೆ ಸಹಾಯಹಸ್ತ!

ಭುವನ್ ಸಾರಥ್ಯದಲ್ಲಿ ಚಾಚಿಕೊಂಡಿದೆ ಸಹಾಯಹಸ್ತ!
ಡೀ ಕರ್ನಾಟಕದಲ್ಲಿ ಎಂದೂ ಕಂಡು ಕೇಳರಿಯದ ಜಲಗಂಡಾಂತರ ತಲೆದೋರಿದೆ. ಅದರಲ್ಲಿಯೂ ಉತ್ತರಕರ್ನಾಟಕದಲ್ಲಿರೋ ಪರಿಸ್ಥಿತಿ ಮಾತ್ರ ತೀರಾ ವ್ಯತಿರಿಕ್ತ. ಹೀಗೆ ಆ ಭಾಗದಲ್ಲಿ ನೆಲೆಗೆ ಸಿಕ್ಕಿ ಕಂಗಾಲಾಗಿ ನಿಂತಿರೋ ಜನ ಜಾನುವಾರುಗಳಿಗೆ ಸಿನಿಮಾ ರಂಗದ ಕಡೆಯಿಂದಲೂ ನೆರವಿನ ಮಹಾಪೂರ ಹರಿದು ಹೋಗುತ್ತಿದೆ. ಇದೀಗ ರಾಂಧವ ಚಿತ್ರತಂಡ ಕೂಡಾ ಈ ಸಹಾಯದ ಅಖಾಡಕ್ಕಿಳಿದಿದೆ. ಮೆಚ್ಚಿಕೊಳ್ಳಬೇಕಾದ ವಿಚಾರವೆಂದರೆ, ಉತ್ತರಕರ್ನಾಟಕದ ನೆರೆಪೀಡಿತ ಪ್ರದೇಶಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು, ಅಲ್ಲಿನ ಜನರ ಅವಶ್ಯಕತೆಗಳೇನೆಂಬುದನ್ನು ಅಮೂಲಾಗ್ರವಾಗಿ ಪತ್ತೆಹಚ್ಚಿ ಪಟ್ಟಿಮಾಡಿ, ಈಗ ಮಾಧ್ಯಮಗಳಲ್ಲಿ ಫೋಕಸ್ ಆಗಿರೋ ಪ್ರದೇಶಗಳನ್ನು ಬಿಟ್ಟು ಬೇರ‍್ಯಾವ ಜಾಗಗಳಲ್ಲಿ ಸಹಾಯದ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ರಾಂಧವ ತಂಡ ಸಹಾಯಹಸ್ತ ಚಾಚಿದೆ.


ಇಂಥಾದ್ದೊಂದು ಪೂರ್ವತಯಾರಿಯೊಂದಿಗೆ ಒಂದಷ್ಟು ಸಾಮಾಗ್ರಿಗಳನ್ನು ಸಂಗ್ರಹಿಸಿರುವ ರಾಂಧವ ತಂಡವೀಗ ಗೋಕಾಕ್‌ನತ್ತ ಪತೆರಳುತ್ತಿದೆ. ಭುವನ್ ಪೊನ್ನಣ್ಣ ಸಾರಥ್ಯದಲ್ಲಿ ಈ ತಂಡ ಪ್ರವಾಹಪೀಡಿತರ ನೆರವಿಗೆ ಧಾವಿಸಿದೆ. ಸದ್ಯಕ್ಕೆ ಬೇಪಕಾದ ಅಗತ್ಯ ವಸ್ತುಗಳನ್ನಿಟ್ಟುಕೊಂಡಿರೋ ಈ ತಂಡ ಜನರೊಂದಿಗೆ ಬೆರೆತು ಅವರಿಗೆ ನಿಜಕ್ಕೂ ಯಾವುದರ ಅಗತ್ಯವಿದೆ ಎಂಬುದನ್ನು ಮನಗಂಡು ತಕ್ಷಣಣವೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿರೋ ರಾಂಧವ ಚಿತ್ರದ ಮತ್ತೊಂದು ತಂಡಕ್ಕೆ ಮಾಹಿತಿ ನೀಡಲಿದೆ. ಶೀಘ್ರದಲ್ಲಿಯೇ ಆ ತಂಡ ಅಂಥಾ ಸಾಮಾಗ್ರಿಗಳನ್ನು ಸಂಗ್ರಹಿಸಿ ಕಳಿಸಲಿದೆ.


ಇದೀಗ ಉತ್ತರಕರ್ನಾಟಕದ ಬೆಳಗಾವಿ ಮತ್ತಿತರೆಡೆಗಳ ಪ್ರವಾಹ ಪೀಡಿತ ಪ್ರದೇಶಗಳತ್ತಲೇ ಹೆಚ್ಚಾಗಿ ಗಮನಹರಿಸಲಾಗುತ್ತಿದೆ. ವಾಸ್ತವವೆಂದರೆ ಅದರಾಚೆಗೂ ಒಂದಷ್ಟು ಪ್ರದೇಶಗಳಲ್ಲಿ ನೆರೆ ಹಾವಳಿಯಿಂದ ಅಗತ್ಯ ವಸ್ತುಗಳೂ ಇಲ್ಲದೇ ಜನ ಕಂಗೆಟ್ಟಿದ್ದಾರೆ. ಗೋಕಾಕ್, ನಿಪ್ಪಾಣಿ, ಚಿಕ್ಕೋಡಿ ಮುಂತಾದ ಪ್ರದೇಶಗಳಲ್ಲಿ ಇಂಥಾದ್ದೇ ವಾತಾವರಣವಿದೆ. ಸದ್ಯಕ್ಕೆ ಚಿಕ್ಕೋಡಿಯತ್ತ ತೆರಳಲಿರೋ ರಾಂಧವ ತಂಡ ಆ ನಂತರದಲ್ಲಿ ಇಂಥಾ ಇನ್ನಷ್ಟು ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನರಿಗೆ ಬೇಕಾದ ವಸ್ತುಗಳನ್ನು ಪೂರೈಕೆ ಮಾಡಲು ಯೋಜನೆ ಹಾಕಿಕೊಂಡಿದೆ.


ಅಷ್ಟಕ್ಕೂ ಕಳೆದ ಬಾರಿ ಭುವನ್ ಪೊನ್ನಣ್ಣರ ಊರಾದ ಕೊಡಗು ಭೂಕುಸಿತ, ಪ್ರವಾಹದಿಂದ ಕಂಗೆಟ್ಟಿತ್ತು. ಆ ಸಂದರ್ಭದಲ್ಲಿ ಇಡೀ ಕರ್ನಾಟಕದ ಮೂಲೆ ಮೂಲೆಯಿಂದಲೂ ಸಹಾಯಹಸ್ತ ಚಾಚಿ ಬಂದಿತ್ತು. ಆದರೆ ಹಾಗೆ ಜನ ಉದಾರವಾಗಿ ಕಳಿಸಿದ್ದ ಕೆಲ ಸಾಮಾಗ್ರಿಗಳು ಹೇಗೆ ವ್ಯರ್ಥವಾದವೆಂಬುದನ್ನು ಭುವನ್ ಕಣ್ಣಾರೆ ನೋಡಿದ್ದಾರೆ. ಆ ಸಂದರ್ಭದಲ್ಲಿ ಜನ ಇನ್ನೂರು ಚಿಲ್ಲರೆ ಲೋಡುಗಳಿಗೂ ಹೆಚ್ಚು ಬಿಸ್ಕೆಟ್‌ಗಳನ್ನು ಕಳಿಸಿದ್ದರಂತೆ. ಅದರಲ್ಲಿ ಬಹುಭಾಗ ಬಳಕೆ ಮೀರಿ ಹಾಳಾಗಿತ್ತು. ಹೀಗೆ ಒಂದೇ ಬಗೆಯ ಸಾಮಾಗ್ರಿಗಳನ್ನು ಕಳಿಸೋದಕ್ಕಿಂತ ನೆರೆ ಪೀಡಿತ ಪ್ರದೇಶದ ಜನರನ್ನೇ ಕೇಳಿ ಅವರಿಗೆ ಏನು ಅವಶ್ಯಕತೆ ಇದೆಯೋ ಅದನ್ನು ಮಾತ್ರವೇ ಸಂಗ್ರಹಿಸಿ ವಿತರಿಸೀ ನೀಲನಕ್ಷೆಯನ್ನು ರಾಂಧವ ಟೀಂ ರೆಡಿ ಮಾಡಿಕೊಂಡಿದೆ.


ಇದೀಗ ಈ ಟೀಮು ಚಿಕ್ಕೋಡಿಗೆ ಎಂಟ್ರಿ ಕೊಡುತ್ತಿದೆ. ರೂಪುರೇಷೆಯಂತೆಯೇ ಅಲ್ಲಿನ ಹಲವಾರು ಪ್ರದೇಶಗಳ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿ ಕೊಡಗಿನತ್ತಲೂ ಸಹಾಯಹಸ್ತ ನೀಡೀ ಇಂಗಿತ ಈ ತಂಡಕ್ಕಿದೆ. ಇಂಥಾ ಪೂರ್ವತಯಾರಿಯೊಂದಿಗೆ ಸಹಾಯಕ್ಕಿಳಿಯೋದರಿಂದ ಯಾವ ಸಾಮಾಗ್ರಿಗಳೂ ವ್ಯರ್ಥವಾಗೋದಿಲ್ಲ. ಜೊತೆ ಜನರಿಗೆ ಏನು ಬೇಕೋ ಅದೇ ಸಿಕ್ಕರೆ ಅವರ ಬವಣೆಯೂ ನೀಗಿದಂತಾಗುತ್ತದೆ. ಇನ್ನೇನು ಬಿಡುಗಡೆ ದಿನ ಹತ್ತಿರದಲ್ಲಿದ್ದರೂ, ಆ ಒತ್ತಡ ಅತಿಯಾಗಿದ್ದರೂ ನೊಂದ ಜನರ ನೆರವಿಗೆ ನಿಂತಿರೋ ರಾಂಧವ ಚಿತ್ರತಂಡವನ್ನು ಅಭಿನಂದಿಸಲೇಬೇಕಿದೆ.

LEAVE A REPLY

Please enter your comment!
Please enter your name here