ತತ್ತರಿಸಿದ ಉತ್ತರಕರ್ನಾಟಕಕ್ಕೆ ನೆರವು ನೀಡಿದಳೇ ಸನ್ನಿ? ನೀಲಿತಾರೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ!

[adning id="4492"]

ನೀಲಿತಾರೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ!
ನೀಲಿತಾರೆಯಾಗಿ ಗುರುತಿಸಿಕೊಂಡು ಇತ್ತೀಚಿನ ದಿನಗಳಲ್ಲಿ ನಟಿಯಾಗಿಯೂ ಮುನ್ನೆಲೆಗೆ ಬಂದಿರುವಾಕೆ ಸನ್ನಿ ಲಿಯೋನ್. ಮಡಿವಂತಿಕೆಯ ಮಡ್ಡು ಹಿಡಿದ ಮನಸುಗಳಿಗೆ ಸನ್ನಿ ಲಿಯೋನ್ ಎಂದರೆ ಬೆತ್ತಲಾಗುತ್ತಲೇ ಕಾಸು ಮಾಡಿಕೊಳ್ಳುವವಳು. ಹೀಗೆ ಮಡಿವಂತಿಕೆಯ ನೆಲೆಗಟ್ಟಿನಲ್ಲಿ ಮಣಗಟ್ಟಲೆ ಪುಂಗುವ ಆಸಾಮಿಗಳೇ ಕದ್ದೂ ಕದ್ದು ಆಕೆಯ ವಿಡಿಯೋಗಳನ್ನು ನೋಡುತ್ತಾ ಬಿಸಿಯೇರಿಸಿಕೊಳ್ಳುತ್ತಾರೆಂಬುದು ಆಕೆಯ ಬೆತ್ತಲಿನಷ್ಟೇ ಸ್ಪಷ್ಟವಾದ ಸತ್ಯ. ಆದರೆ ಕರಣ್‌ಜಿತ್ ಕೌರ್ ಎಂಬ ಹುಡುಗಿ ಪಾರ್ನ್ ತಾರೆಯಾಗಿ ಬದಲಾದದ್ದರ ಹಿಂದೆಯೂ ಒಂದು ಕರುಣ ಕಥೆಯಿದೆ. ಎದೆಯೊಳಗೆ ಅಂಥಾದ್ದೊಂದು ನೋವು ಮಡುಗಟ್ಟಿರೋದರಿಂದಲೇ ಆಕೆ ಅನಾಥ ಮಕ್ಕಳಿಗೆ ಅಮ್ಮನಾಗಿದ್ದಾಳೆ. ಎಲ್ಲಿಯೇ ಕಷ್ಟನಷ್ಟಗಳೆದುರಾದಾಗಲೂ ಕೈಲಾದಷ್ಟು ಸಹಾಯವನ್ನೂ ಮಾಡುತ್ತಾ ಬಂದಿದ್ದಾಳೆ.


ಸನ್ನಿಲಿಯೋನ್‌ಳ ಇಂಥಾ ಮಾನವೀಯತೆಗೆ ಕಳೆದ ಬಾರಿ ಕೇರಳ ಪ್ರವಾಹದಿಂದ ತತ್ತರಿಸಿದ್ದಾಗ ಮಾಡಿದ್ದ ಸಹಾಯವೇ ಸಾಕ್ಷಿ. ದೇವರನಾಡೆಂಬ ಖ್ಯಾತಿ ಹೊಂದಿದ್ದ ಕೇರಳದ ಮಂದಿ ಪ್ರವಾಹದಿಂದ ತತ್ತರಿಸಿದ್ದಾಗ ದೊಡ್ಡ ಮೊತ್ತದ ಧನ ಸಹಾಯ ಮಾತ್ರವಲ್ಲದೇ ಅಗತ್ಯ ಸಾಮಾಗ್ರಿಗಳ ವ್ಯವಸ್ಥೆಯನ್ನೂ ಸನ್ನಿ ಮಾಡಿದ್ದಳೆಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ನಮ್ಮದೇ ರಾಜ್ಯದ ಉತ್ತರಕರ್ನಾಟಕ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ. ಅಲ್ಲಿಯ ಜನ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಹೀಗೆ ನೆರೆಯಿಂದ ಕಂಗಾಲಾಗಿರೋ ಉತ್ತರ ಕರ್ನಾಟಕದ ಮಂದಿಗೂ ಸನ್ನಿ ಲಿಯೋನ್ ಎರಡು ಕೋಟಿಯಷ್ಟು ಧನ ಸಹಾಯ ಮಾಡಿದ್ದಾಳೆಂಬ ಸುದ್ದಿಯೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳ ತುಂಬಾ ಸದ್ದು ಮಾಡುತ್ತಿದೆ.


ಬಹುತೇಕರು ಈ ಸುದ್ದಿಗೆ ಸಂಬಂಧಿಸಿದಂತೆ ಸನ್ನಿಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೆ ಈವರೆಗೂ ಈ ಸುದ್ದಿ ಅಧಿಕೃತಗೊಂಡಿಲ್ಲ. ಸನ್ನಿ ಲಿಯೋನ್ ತಾನು ಮಾಡಿರೋ ಧನ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಕರ್ನಾಟಕದ ಮಾಧ್ಯಮದ ಮಂದಿ ಆಕೆಯ ಬಳಿಯೇ ಈ ಬಗ್ಗೆ ವಿಚಾರಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಒಂದು ದಿಕ್ಕಿನಲ್ಲಿ ಸನ್ನಿಯ ಅಭಿಮಾನಿಗಳ್ಯಾರೋ ಈ ಇಂಥಾದ್ದೊಂದು ಸುದ್ದಿಯನ್ನು ಹರಿಯ ಬಿಟ್ಟಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಸನ್ನಿಯೊಳಗಿನ ಅಮ್ಮನಂಥಾ ಗುಣಗಳನ್ನು ಗಮನಿಸಿದರೆ ಇದು ಸುಳ್ಳಾಗಿರಬಹುದೆಂಬ ತೀರ್ಮಾನಕ್ಕೆ ಬರುವುದಕ್ಕೂ ಸಾಧ್ಯವಾಗುತ್ತಿಲ್ಲ.


ಯಾಕೆಂದರೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರೋ ಸನ್ನಿ ಸಮಾಜ ಸೇವೆಗೆಂದೇ ಅದರಲ್ಲೊಂದಷ್ಟು ಪಾಲನ್ನು ಮೀಸಲಿಟ್ಟಿದ್ದಾಳೆ. ಆಗಾಗ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಗಳಾಗುತ್ತವೆ. ಈಕೆ ಹಲವಾರು ಅನಾಥ ಮಕ್ಕಳನ್ನು ಅಮ್ಮನ ಸ್ಥಾನದಲ್ಲಿ ನಿಂತು ಪೊರೆಯುತ್ತಿದ್ದಾಳೆ. ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಪೊರೆಯುತ್ತಲೂ ಇದ್ದಾಳೆ. ಆದರೆ ಸಾರ್ವಜನಿಕವಾಗಿ ತಾನು ಮಾಡಿದ ಸಹಾಯವನ್ನು ಸನ್ನಿ ಹೇಳಿಕೊಂಡಿದ್ದಿಲ್ಲ. ಆ ಬಗ್ಗೆ ವಿನಾಕಾರಣ ಭಾಷಣ ಬಿಗಿದ ಉದಾಹರಣೆಗಳೂ ಸಿಗುವುದಿಲ್ಲ. ಅದೇ ಮನಸ್ಥಿತಿಯಿಂದ ಸನ್ನಿ ಲಿಯೋನ್ ದೇಶ ಮಟ್ಟದಲ್ಲಿ ಸುದ್ದಿಯಾಗಿರೋ ಉತ್ತರ ಕರ್ನಾಟಕದ ಪ್ರವಾಹದ ಸುದ್ದಿಯನ್ನು ಗಮನಿಸಿ ಸಹಾಯ ಮಾಡಿ ಸುಮ್ಮನಾಗಿದ್ದರೂ ಅಚ್ಚರಿಯೇನಲ್ಲ. ಹಾಗೊಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಅದು ನಿಜಕ್ಕೂ ಸನ್ನಿ ಕಡೆಯಿಂದಾದ ಪುಣ್ಯದ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ.

[adning id="4492"]

LEAVE A REPLY

Please enter your comment!
Please enter your name here