ಕುರುಕ್ಷೇತ್ರ ನೋಡಿಬಂದ ಸುಮಲತಾ ನಿಖಿಲ್ ಬಗ್ಗೆ ಹೇಳಿದ್ದೇನು?

[adning id="4492"]

ನ್ನಡದಮಟ್ಟಿಗೆ ಬಿಗ್ ಬಜೆಟ್ ಚಿತ್ರವಾಗಿ ಬಿಂಬಿತವಾಗಿದ್ದ ಕುರುಕ್ಷೇತ್ರ ಬಿಡುಗಡೆಯಾಗಿದೆ. ಅದೆಷ್ಟೇ ತಡವಾದರೂ ಸಹ ಈ ಸಿನಿಮಾ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲೊಂದು ಸೆಂಟಿಮೆಂಟ್ ಇದ್ದೇ ಇತ್ತು. ಅದು ಚಿತ್ರಮಂದಿರಗಳೆಲ್ಲ ತುಂಬಿತುಳುಕೋ ಮೂಲಕ ಕನ್ನಡಿಗರ ಪ್ರೀತಿಯೇನೆಂಬುದೂ ಗೊತ್ತಾಗಿದೆ. ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಕುರುಕ್ಷೇತ್ರದ ಬಗ್ಗೆ ಎಂಥಾ ಕ್ರೇಜ್ ಇತ್ತೋ ಅದು ಸಿನಿಮಾ ತಾರೆಯಯಲ್ಲಿಯೂ ಇತ್ತು. ಈ ಕಾರಣದಿಂದಲೇ ಹಲವು ನಟನಟಿಯರು ಮೊದಲ ಶೋ ನೋಡಿದ್ದಾರೆ. ಸಂಸದೆ ಸುಮಲತಾ ಕೂಡಾ ಕುರುಕ್ಷೇತ್ರವನ್ನು ನೋಡಿ ಅದರಲ್ಲಿ ಪಾತ್ರ ನಿರ್ವಹಿಸಿರೋ ಅನೇಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸುಮಲತಾ ಪಾಲಿಗೂ ಕುರುಕ್ಷೇತ್ರ ತುಂಬಾನೇ ಮುಖ್ಯವಾದ ಚಿತ್ರ. ಅದರ ಮೇಲೆ ಅವರಿಗೆ ಭಾವನಾತ್ಮಕವಾದ ಸೆಳೆತವಿದೆ. ಯಾಕೆಂದರೆ ಕುರುಕ್ಷೇತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಭೀಷ್ಮನಾಗಿ ನಟಿಸಿದ್ದಾರೆ. ಇದು ಅಂಬಿ ನಟಿಸಿರೋ ಕಡೇಯ ಚಿತ್ರವೂ ಹೌದು. ಈ ಕಾರಣದಿಂದ ಕುರುಕ್ಷೇತ್ರವನ್ನು ಕಣ್ತುಂಬಿಕೊಂಡಿರೋ ಸುಮಲತಾ ಖುಷಿಗೊಂಡಿದ್ದಾರೆ. ದರ್ಶನ್ ಸೇರಿದಂತೆ ಅನೇಕ ಕಲಾವಿದರನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ನಿಖಿಲ್ ಕುಮಾರಸ್ವಾಮಿಯ ನಟನೆಯನ್ನಂತೂ ಮನದುಂಬಿ ಮೆಚ್ಚಿಕೊಂಡಿದ್ದಾರೆ.


ನಿಖಿಲ್ ಅಭಿನಯ ಸೂಪರ್. ಅವನು ತುಂಬಾ ಚೆನ್ನಾಗಿ ನಟಿಸಿದ್ದಾನೆ ಎಂಬಂಥಾ ಅಭಿಪ್ರಾಯವನ್ನು ಸುಮಲತಾ ವ್ಯಕ್ತಪಡಿಸಿದ್ದಾರೆ. ನಿಖಿಲ್ ಮತ್ತು ಸುಮಲತಾ ಮಂಡ್ಯಲೋಕಸಭಾ ಚುನಾವಣಾ ಕಣದಲ್ಲಿ ಎದುರಾಳಿಗಳಾಗಿದ್ದರು. ಆ ಸಂದರ್ಭದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ, ಮುನಿಸುಗಳೆಲ್ಲವೂ ಬಂದು ಹೋಗಿದ್ದವು. ಆದರೆ ಇದೀಗ ಸುಮಲತಾ ನಿಖಿಲ್‌ರನ್ನು ಓರ್ವ ಕಲಾವಿದನಾಗಿ ನೋಡಿ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನುಳಿದಂತೆ ಪ್ರೇಕ್ಷಕರ ಕಡೆಯಿಂದಲೂ ಕೂಡಾ ನಿಖಿಲ್‌ಗೆ ಮೆಚ್ಚುಗೆಗಳ ಸುರಿಮಳೆಯಾಗುತ್ತಿದೆ. ಅವರು ಅಭಿಮನ್ಯವಾಗಿ ಆ ಪಾತ್ರಕ್ಕೆ ಜೀವ ತುಂಬಿದ ರೀತಿ ನಿಖಿಲ್ ಓರ್ವ ಅಪ್ಪಟ ಕಲಾವಿದನಾಗೋ ಲಕ್ಷಣವಾಗಿಯೂ ಕಾಣಿಸಿದೆ.


ಕುರುಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರವಿಚಂದ್ರನ್, ರೆಬೆಲ್ ಸ್ಟಾರ್ ಅಂಬರೀಶ್, ಶಶಿಕುಮಾರ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಆದರೆ ಇವರೆಲ್ಲರೂ ಚಿತ್ರರಂಗದಲ್ಲಿ ಹತ್ತಾರು ವರ್ಷಗಳ ಕಾಲ ಪಳಗಿಕೊಂಡಿದ್ದಾರೆ. ಎಂಥಾ ಪಾತ್ರವನ್ನಾದರೂ ನುಂಗಿಕೊಂಡು ನಟಿಸೋ ಕಸುವನ್ನೂ ಹೊಂದಿದ್ದಾರೆ. ಆದರೆ ಇಂಥಾ ಘಟನಾನುಘಟಿಗಳ ನಡುವೆ ಇನ್ನೂ ಒಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದ ನಿಖಿಲ್ ನಟಿಸೋದೆಂದರೆ ಸುಮ್ಮನೆ ಮಾತಲ್ಲ. ಆದರೆ ಅದನ್ನು ಅವರು ಚೆಂದಗೆ ನಿರ್ವಹಿಸಿದ್ದಾರೆಂಬ ಮೆಚ್ಚುಗೆ ವ್ಯಾಪಕವಾಗಿ ಕೇಳಿ ಬರುತ್ತಿದೆ

[adning id="4492"]

LEAVE A REPLY

Please enter your comment!
Please enter your name here