ಇದು ಕೆಂಡಸಂಪಿಗೆ ಮಾನ್ವಿತಾರ ಕ್ರೈಂ ಸ್ಟೋರಿ!

[adning id="4492"]

ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಕೆಂಡಸಂಪಿಗೆ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದವರು ಮಾನ್ವಿತಾ ಹರೀಶ್. ಅಲ್ಲಿಂದಾಚೆಗೆ ಈ ಮಲೆನಾಡ ಹುಡುಗಿಯ ಯಶಸ್ಸಿನ ಯಾತ್ರೆ ಅನೂಚಾನವಾಗಿ ಮುಂದುವರೆದುಕೊಂಡು ಬಂದಿದೆ. ಕನ್ನಡದಲ್ಲಿ ಬ್ಯುಸಿಯಾಗಿರುವಾಗಲೇ ಮರಾಠಿ ಭಾಷೆಯ ಚಿತ್ರದಲ್ಲಿಯೂ ನಟಿಸಿರೋ ಮಾನ್ವಿತಾ ಇದೀಗ ಅಜೇಯ್ ರಾವ್ ಜೊತೆಗೂಡಿ ವಿಶಿಷ್ಟವಾದ ಕ್ರೈಂ ಕಥಾನಕವೊಂದರ ಬೆಂಬಿದ್ದಿದ್ದಾರೆ.


ಅಜೇಯ್ ರಾವ್ ಕೂಡಾ ಇದೀಗ ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ನಡುವೆಯೇ ಮತ್ತೊಂದು ಚಿತ್ರಕ್ಕೂ ಅವರು ಸಹಿ ಹಾಕಿದ್ದಾರೆ. ಎಸ್. ರಾಜವರ್ಧನ್ ನಿರ್ದೇಶನದ ಈ ಚಿತ್ರಕ್ಕೆ ರೈನ್ ಬೋ ಎಂದೂ ಶೀರ್ಷಿಕೆ ನಿಗಧಿಯಾಗಿದೆ. ಇದಕ್ಕೆ ಕಲರ್ ಆಫ್ ಕ್ರೈಂ ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ಇದುವೇ ಈ ಸಿನಿಮಾ ಕ್ರೈಂ ಕಥೆ ಆಧರಿಸಿದೆ ಅನ್ನೋದನ್ನು ಸಾಬೀತು ಮಾಡುವಂತಿದೆ. ಈ ಚಿತ್ರದ ಮೂಲಕ ಮೊದಲ ಸಲ ಮಾನ್ವಿತಾ ಅಜೇಯ್ ರಾವ್ ಜೋಡಿಯಾಗಿ ನಟಿಸುತ್ತಿದ್ದಾರೆ.


ರೈನ್ ಬೋ ಚಿತ್ರವನ್ನು ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಪ್ರಜ್ವಲ್ ದೇವರಾಜ್ ಅಭಿಯದ ಜಂಟಲ್ ಮನ್ ಚಿತ್ರವನ್ನೂ ಅವರು ನಿರ್ಮಾಣ ಮಾಡಿದ್ದಾರೆ. ರೈನ್ ಬೋ ಟ್ಯಾಗ್‌ಲೈನ್ ನೋಡಿದರೇನೇ ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಎಂಬಂಥಾ ಸೂಚನೆ ಸಿಗುವಂತಿದೆ. ಇನ್ನುಳಿದಂತೆ ಈ ಚಿತ್ರದ ಮೂಲಕ ಮತ್ತೊಂದು ಭಿನ್ನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಅಜೇಯ್ ರಾವ್ ಅಣಿಗೊಂಡಿದ್ದಾರೆ. ಇದೇ ಮೊದಲಸಲ ಮಾನ್ವಿತಾ ಹರೀಶ್ ಅಜೇಯ್ ರಾವ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.


ಅಜೇಯ್ ರಾವ್ ಕೂಡಾ ಈಗ ಒಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾನ್ವಿತಾ ಹರೀಶ್ ಕೂಡಾ ಒಟ್ಟೊಟ್ಟಿಗೇ ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದ ಸ್ವಲ್ಪ ಸಮಯದಲ್ಲಿಯೇ ಥರ ಥರದ ಪಾತ್ರಗಳು ಮಾನ್ವಿತಾಗೆ ಸಿಕ್ಕಿವೆ. ಕೆಂಡಸಂಪಿಗೆ ಮೂಲಕ ಟೇಕಾಫ್ ಆಗಿದ್ದ ಮಾನ್ವಿತಾ ದೊಡ್ಡ ಸಿನಿಮಾಗಳಲ್ಲಿಯೇ ಶಿವಣ್ಣನಂಥಾ ನಟರೊಂದಿಗೂ ನಟಿಸಿದ್ದಾರೆ. ಇದೀಗ ಅವರು ಅಜೇಯ್ ರಾವ್‌ಗೆ ಜೊತೆಯಾಗಿರೋ ರೈನ್‌ಬೋ ಬಗ್ಗೆ ಪ್ರೇಕ್ಷಕರು ಕಾತರರಾಗಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here