ಮನಸಿಗೆ ಮುತ್ತಿಡೋ ಹಾಡುಗಳೊಂದಿಗೆ ಮತ್ತೇರಿಸಿದ ಕಿಸ್!

[adning id="4492"]

.ಪಿ ಅರ್ಜುನ್ ನಿರ್ದೇಶನದ ಚಿತ್ರವೆಂದ ಮೇಲೆ ಪ್ರೇಕ್ಷಕರು ಬೇರೆಲ್ಲದಕ್ಕಿಂತ ಮುಂಚೆಯೇ ಹಾಡುಗಳತ್ತ ಕಣ್ಣು ನೆಟ್ಟು ಕೂರುತ್ತಾರೆ. ಅಂಬಾರಿ ಚಿತ್ರದಿಂದಲೇ ಅಂಥಾದ್ದೊಂದು ಕ್ರೇಜ್‌ಗೆ ಕಾರಣವಾಗಿರೋ ಅರ್ಜುನ್ ಈ ವರೆಗೂ ಅದೇ ಹಾದಿಯಲ್ಲಿ ಸಾಗಿ ಬಂದಿದ್ದಾರೆ. ತಾವು ನಿರ್ದೇಶನ ಮಾಡೋ ಸಿನಿಮಾದ ಪ್ರತೀ ಹಾಡುಗಳೂ ಟ್ರೆಂಡ್ ಸೆಟ್ ಮಾಡಬೇಕನ್ನೋ ತಹತಹಿಕೆ ಹೊಂದಿದಿರೋ ಎ.ಪಿ ಅರ್ಜುನ್ ಅಂಥಾದ್ದೇ ಆಸ್ಥೆಯಿಂದ ಕಿಸ್ ಹಾಡುಗಳನ್ನೂ ರೂಪಿಸಿದ್ದಾರೆ. ಈ ಕಾರಣದಿಂದಲೇ ಈಗಾಗಲೇ ಲಾಂಚ್ ಆಗಿರೋ ಮೂರು ಹಾಡುಗಳೂ ಸೂಪರ್ ಹಿಟ್ ಆಗಿವೆ.


ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ನಟಿಸಿರೋ ಕಿಸ್ ಸದ್ದು ಮಾಡಿದ್ದೇ ಹಾಡಿನ ಮೂಲಕ. ಶೀಲ ಸುಶೀಲಾ ಯೂ ಡೋಂಟುವರಿ ಎಂಬ ಹಾಡನ್ನು ಅರ್ಜುನ್ ಮೊದಲು ಬಿಡುಗಡೆ ಮಾಡಿದ್ದರು. ಅದ್ದೂರಿಯಾಗಿ ರೂಪಿಸಲ್ಪಟ್ಟಿದ್ದ ಆ ಹಾಡು ವಿ ಹರಿಕೃಷ್ಣರ ಸಮ್ಮೋಹಕ ಸಂಗೀತದೊಂದಿಗೆ ಸಾರ್ವಕಾಲಿಕ ದಾಖಲೆಯನ್ನೇ ಮಾಡಿತ್ತು. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ಸೂಪರ್ ಹಿಟ್ ಆಗಿಯೂ ದಾಖಲಾಗಿತ್ತು.


ಅದರ ಹಿಂದೆಯೇ ಶ್ರೀಲೀಲಾ ಮತ್ತು ವಿರಾಟ್ ಕಾಂಬಿನೇಷನ್ನಿನ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿ ಅದೂ ಕೂಡಾ ಹಿಟ್ ಆಗಿ ದಾಖಲಾಗುತ್ತಲೇ ಇದೀಗ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಹಾಡು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಹಾಡಿ ಬಿಡುಗಡೆಗೊಳಿಸಿರೋ ಈ ಹಾಡೀಗ ಟ್ರೆಂಡಿಂಗ್‌ನಲ್ಲಿದೆ. ಸ್ವತಃ ಅರ್ಜುನ್ ಅವರೇ ಸಾಹಿತ್ಯ ಬರೆದಿರೋ ಈ ಹಾಡಿಗೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೂಲಕ ಕಿಸ್ ಚಿತ್ರದ ಮೂರು ಹಾಡುಗಳೂ ಸೂಪರ್ ಹಿಟ್ ಆದಂತಾಗಿದೆ.


ಅಂಬಾರಿಯಿಂದ ಆರಂಭವಾಗಿ ಇಲ್ಲಿಯವರೆಗೂ ಮಧುರವಾದ ಪ್ರೇಮ ಕಥಾನಕಗಳ ಮೂಲಕವೇ ಗೆಲ್ಲುತ್ತಾ ಬಂದಿರುವವರು ಎ.ಪಿ ಅರ್ಜುನ್. ಪ್ರೀತಿಯ ಮೂಲಕವೇ ಹೃದಯಸ್ಪರ್ಶಿ ಕಥೆ ಹೇಳೋ ಕಲೆ ಹೊಂದಿರೋ ಅರ್ಜುನ್ ಈ ಬಾರಿಯೂ ಕಿಸ್ ಮೂಲಕ ಅಂಥಾದ್ದೇ ಪ್ರೇಮ ಕಥೆಯೊಂದಿಗೆ ಬಂದಿದ್ದಾರೆ. ಕಿಸ್ ಅಂದಾಕ್ಷಣ ಥರ ಥರದ ಭಾವಗಳು ಮೂಡಿಕೊಳ್ಳೋದು ಸಹಜ. ಆದರೆ ಈ ಕಿಸ್ ವಲ್ಗಾರಿಟಿಯ ಸೋಂಕಿಲ್ಲದ ಕಥೆಯನ್ನು, ಅದಕ್ಕೆ ತಕ್ಕುದಾದ ದೃಷ್ಯಾವಳಿಗಳನ್ನು ಹೊಂದಿದೆಯಂತೆ. ಪ್ರತೀ ಹಾಡು ಬಿಡುಗಡೆಯಾದಾಗಲೂ ಒಂದೊಂದು ಹೊಸತನಗಳು ಅನಾವರಣಗೊಳ್ಳುತ್ತಾ ಬಂದಿವೆಯಲ್ಲಾ? ಅದೆಲ್ಲವನ್ನು ಮೀರಿಸುವಂಥಾ ಹೊಸತನಗಳು ಕಿಸ್ ಮೂಲಕ ಸರ್‌ಪ್ರೈಸ್ ಕೊಡಲು ಕಾದು ಕೂತಿವೆ.

[adning id="4492"]

LEAVE A REPLY

Please enter your comment!
Please enter your name here