ಭಾನು ವೆಡ್ಸ್ ಭೂಮಿ ಎಂಬ ಮಧುರ ಪ್ರೇಮಕಾವ್ಯ!

[adning id="4492"]

ಪ್ರೀತಿಯೆಂಬೋ ಮಾಯೆಯನ್ನು ಸಂಪೂರ್ಣವಾಗಿ ಹಿಡಿದಿಡೋದು ಯಾವ ಕಾಲಕ್ಕೂ ಸಾಧ್ಯವಾಗದ ಮಾತು. ಸಿನಿಮಾಗಳ ಪಾಲಿಗಂತೂ ಇದು ಮೊಗದಷ್ಟೂ ಉಕ್ಕುವ ಮಾಯೆಯಂಥಾದ್ದು. ಆದ್ದರಿಂದಲೇ ಸಾವಿರ ಚಿತ್ರಗಳಲ್ಲಿ ಸಾವಿರಾರು ರೀತಿಯಲ್ಲಿ ತೋರಿಸಿದ ಮೇಲೂ ಪ್ರೀತಿಯೆಂಬುದು ತಾಜಾತನ ಕಳೆದುಕೊಳೊದಿಲ್ಲ. ಇಂಥಾ ಪ್ರೀತಿಯ ಮತ್ತೊಂದು ಆಯಾಮವನ್ನು ನೈಜ ಘಟನೆಯನ್ನಾಧರಿಸಿ ಕಟ್ಟಿ ಕೊಟ್ಟಿರೋ ಚಿತ್ರ ಭಾನು ವೆಡ್ಸ್ ಭೂಮಿ. ಶೀರ್ಷಿಕೆಯಲ್ಲಿಯೇ ಪ್ರೇಮದ ಕಂಪು ಬಚ್ಚಿಟ್ಟುಕೊಂಡಂತಿರೋ ಈ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ.


ಜೆಕೆ ಆದಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈವರೆಗೂ ಕಲಾ ಸಾಮ್ರಾಟ್ ಎಸ್ ನಾರಾಯಣ್ ಸೇರಿದಂತೆ ಅನೇಕ ನಿರ್ದೇಶಕರ ಜೊತೆ ಕಾರ್ಯ ನಿರ್ವಹಿಸಿರುವ ಆದಿ, ಹದಿಮೂರು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ವರ್ಷಗಳಿಂದ ಕಥೆ ಬರೆದಿಟ್ಟುಕೊಂಡು ಅದಕ್ಕಾಗಿ ತಯಾರಾಗುತ್ತಾ ಬಂದಿದ್ದ ಅವರ ಪಾಲಿಗೆ ಬಾನು ವೆಡ್ಸ್ ಭೂಮಿ ಚೊಚ್ಚಲ ಚಿತ್ರ. ನೈಜ ಘಟನೆಯೊಂದರಿಂದ ಪ್ರೇರಿತರಾಗಿ ಅವರು ಈ ಚಿತ್ರದ ಕಥೆಯನ್ನು ರೂಪಿಸಿದ್ದಾರೆ.


ಗಂಡು ಹೆಣ್ಣಿನ ಸಂಬಂಧವನ್ನು ಬಾನು ಭೂಮಿಗೆ ಸಮೀಕರಿಸೋದಿದೆ. ಅದು ಅರ್ಥ ಪೂರ್ಣವೂ ಹೌದು. ಅದೇ ಫಾರ್ಮುಲಾವನ್ನು ಹೊಸಾ ರೀತಿಯಲ್ಲಿ ಈ ಸಿನಿಮಾ ಮೂಲಕ ನಿರೂಪಿಸಲಾಗಿದೆ. ಇಲ್ಲಿ ಪ್ರೀತಿಯೇ ಪ್ರಧಾನವಾದರೂ ಕೂಡಾ ಅದರೊಂದಿಗೆ ಬದುಕಿಗೆ ಹತ್ತಿರಾದ ಕಥನವೂ ಬಿಚ್ಚಿಕೊಳ್ಳುತ್ತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಮತ್ತು ಪೋಸ್ಟರ್‌ಗಳ ಮೂಲಕವಂತೂ ಭಾನು ವೆಡ್ಸ್ ಭೂಮಿ ಬಗ್ಗೆ ಪ್ರೇಕ್ಷಕರು ಕಾತರರಾಗುವಂತಾಗಿದೆ. ಅದ್ದೂರಿ ತಾರಾಗಣ, ಹೊಸತನದ ತಾಂತ್ರಿಕ ಲೇಪನ ಮತ್ತು ಕಣ್ಣಿಗೆ ಹಬ್ಬವೆಂಬಂಥಾ ದೃಷ್ಯ ವೈಣವಗಳೊಂದಿಗೆ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ.


ಇನ್ಫೋಸಿಸ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರೋ ಸೂರ್ಯಪ್ರಭ್ ಭಾನು ವೆಡ್ಸ್ ಭೂಮಿ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಶಿವಮೊಗ್ಗದ ಹುಡುಗಿ ರಿಷಿತಾ ಮಲ್ನಾಡ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಶೋಭ ರಾಜ್ ಮತ್ತು ರಂಗಾಯಣ ರಘು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಂ ಎಂ ನೀಲ್ ಸಂಗೀತ, ಗಣೇಶ್ ಹೆಗಡೆ ಛಾಯಾಗ್ರಹಣ, ಶ್ರೀನಿವಾಸ ಪಿ ಬಾಬು ಸಂಕಲನ, ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

[adning id="4492"]

LEAVE A REPLY

Please enter your comment!
Please enter your name here