ಕೋಟಿಗೊಬ್ಬನ ಜೊತೆ ಕ್ರೇಜಿಸ್ಟಾರ್!

ಇತ್ತ ಪೈಲ್ವಾನ್ ಚಿತ್ರದೆಡೆಗಿನ ನಿರೀಕ್ಷೆ ರಾಜ್ಯ ಮಾತ್ರವಲ್ಲದೆ ದೇಶಾಧ್ಯಂತ ಹಬ್ಬಿಕೊಂಡಿದೆ. ಈ ಚಿತ್ರದಲ್ಲಿ ತಮ್ಮ ಭಾಗದ ಕೆಲಸ ಕಾರ್ಯ ಮುಗಿಸಿಕೊಂಡ ತಕ್ಷಣವೇ ಸುದೀಪ್ ಕೋಟಿಗೊಬ್ಬ ೩ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಪೈಲ್ವಾನ್ ತೆರೆ ಕಂಡ ಕೆಲವೇ ತಿಂಗಳಲ್ಲಿ ಕೋಟಿಗೊಬ್ಬ 3 ಚಿತ್ರವನ್ನೂ ಬಿಡುಗಡಗೊಳಿಸಬೇಕೆಂಬ ನಿರ್ಧಾರದೊಂದಿಗೆ ಕೋಟಿಗೊಬ್ಬನ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ.


ಸದ್ಯ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಿಚ್ಚಾ ಸುದೀಪ್ ಅದರಲ್ಲಿ ಪಾಲೊಂಡಿರೋದರಿಂದ ಅನೇಕ ನಟರು ಸೆಟ್ಟಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಕೋಟಿಗೊಬ್ಬ ೩ ಸೆಟ್‌ಗೆ ಭೇಟಿ ನೀಡಿದ್ದಾರೆ. ಖುದ್ದು ಸುದೀಪ್ ಹೇಳಿಕೊಂಡಿರೋ ಪ್ರಕಾರ್ ಇದು ಸರ್‌ಪ್ರೈಸ್ ವಿಸಿಟ್. ಹೀಗೆ ದಿಢೀರನೆ ಸೆಟ್ಟಿಗೆ ಭೇಟಿ ನೀಡಿರೋ ಕ್ರೇಜಿಸ್ಟಾರ್ ಒಂದಷ್ಟು ಹೊತ್ತು ಸುದೀಪ್ ಅವರೊಂದಿಗೆ ಮಾತುಕತೆ ನಡೆಸಿ ಚಿತ್ರೀಕರಣದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರಂತೆ.


ಈ ಭೇಟಿ ಅನಿರೀಕ್ಷಿತ ಎಂಬರ್ತದಲ್ಲಿ ಬಿಂಬಿತವಾಗಿದ್ದರೂ ಕ್ರೇಜಿಸ್ಟಾರ್ ರವಿಚಂದ್ರನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಕ್ಯೂರಿಯಾಸಿಟಿಯೂ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ ಈಗಾಗಲೇ ಕಿಚ್ಚಾ ಸುದೀಪ್ ಮತ್ತು ರವಿಚಂದ್ರನ್ ಯಶಸ್ವಿ ಜೋಡಿಯಾಗಿ ಹೊರ ಹೊಮ್ಮಿದ್ದಾರೆ. ಈ ಹಿಂದೆ ಮಾಣಿಕ್ಯ ಚಿತ್ರದ ಮೂಲಕ ಇವರಿಬ್ಬರೂ ಮೋಡಿಯನ್ನೇ ಮಾಡಿದ್ದರು. ಹೆಬ್ಬುಲಿ ಚಿತ್ರದಲ್ಲಿಯೂ ರವಿಮಾಮಾ ಕಿಚ್ಚನಿಗೆ ಸಾಥ್ ಕೊಟ್ಟಿದ್ದರು. ಇದೀಗ ಕೋಟಿಗೊಬ್ಬ ೩ ಚಿತ್ರದಲ್ಲಿಯೂ ಮತ್ತೊಮ್ಮೆ ಇವರಿಬ್ಬರ ಸಮಾಗಮವಾಗಿರೋ ಲಕ್ಷಣಗಳೇ ಕಾಣಿಸುತ್ತಿವೆ

LEAVE A REPLY

Please enter your comment!
Please enter your name here