ಅಮಲಾಗೆ ಬೆತ್ತಲಾಗಿ ಪ್ರಚಾರ ಗಿಟ್ಟಿಸಿಕೊಳ್ಳೋ ಕಾಯಿಲೆ


ಒಂದು ಚಿತ್ರವನ್ನು ಕಂಟೆಂಟಿನ ಮೂವಲವೇ ನೆಲೆನಿಲ್ಲಿಸುವ ಕಸುವಿಲ್ಲದಿದ್ದಾಗ ಪ್ರಚಾರಕ್ಕಾಗಿನ ನವರಂಗೀ ನಾಟಕಗಳು ಶುರುವಾಗುತ್ತವೆ. ಇದಕ್ಕೆ ಕನ್ನಡವೂ ಸೇರಿದಂತೆ ಯಾವ ಚಿತ್ರರಂಗಗಳೂ ಹೊರತಾಗಿಲ್ಲ. ಏನೂ ಇಲ್ಲದಿದ್ದರೆ ನಟಿಯರನ್ನು ಬಟ್ಟೆ ಬಿಚ್ಚಿಸಿ ನಿಲ್ಲಿಸೋದು ಕೆಲವರಿಗಂಟಿದ ಪ್ರಚಾರದ ಖಯಾಲಿ. ಆದರೆ ಕೆಲ ಸಂದರ್ಭದಲ್ಲಿ ನಟಿಯರೇ ಇಂಥಾ ಬೆತ್ತಲೆ ಪ್ರಚಾರಕ್ಕೆ ಅಂಟಿಕೊಂಡು ಬಿಡುತ್ತಾರೆ. ಸದ್ಯ ಹೆಬ್ಬುಲಿ ಖ್ಯಾತಿಯ ನಟಿ ಅಮಲಾ ಪೌಲ್ ಕೂಡಾ ಇಂಥಾ ಬಿಟ್ಟ ಪ್ರಚಾರದ ಅಮಲೇರಿಸಿಕೊಂಡಳಾ ಅಂತೊಂದು ಸಂಶಯ ಸ್ವತಃ ಆಕೆಯ ಅಭಿಮಾನಿಗಳನ್ನೇ ಕಾಡಲಾರಂಭಿಸಿದೆ.
ಅಮಲಾ ಪೌಲ್ ಅಡೈ ಎಂಬ ಚಿತ್ರದಲ್ಲಿ ನಟಿಸಿರೋದು, ಆ ಚಿತ್ರಕ್ಕಾಗಿ ಸಂಪೂರ್ಣವಾಗಿ ಬೆತ್ತಲೆ ಪೋಸು ನೀಡಿದ್ದೆಲ್ಲವೂ ಈಗಾಗಲೇ ರಾಣಾ ರಂಪವಾಗಿ ಬಿಟ್ಟಿದೆ. ಇಂಥಾ ವಿವಾದದ ಮೂಲಕವೇ ಭರಪೂರ ಪ್ರಚಾರ ಗಿಟ್ಟಿಸಿಕೊಂಡ ಈ ಚಿತ್ರವೀಗ ಬಿಡುಗಡೆಯಾಗಿ ಪ್ರದರ್ಶನವನ್ನೂ ಕಾಣುತ್ತಿದೆ. ಈ ನಡುವೆ ರಾಜೇಶ್ವರಿ ಪ್ರಿಯಾ ಎಂಬ ರಾಜಕಾರಣಿಯೊಬ್ಬರು ಅಮಲಾ ವಿರುದ್ಧ ಕೇಸು ದಾಖಲಿಸಿದ್ದೂ ಆಗಿದೆ. ಇಷ್ಟಾದರೂ ಅಮಲಶಾ ಈಗ ಮತ್ತೊಂದು ಬೆತ್ತಲೆ ಸೀನಿನ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ.
ಈ ವೀಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ. ಅದನ್ನು ಶೇರ್ ಮಾಡಿರೋ ಅಮಲಾ ತನ್ನ ಬೆತ್ತಲೆ ಸಾಹಸಗಳನ್ನು ಒಂದಷ್ಟು ಹೇಳಿಕೊಂಡಿದ್ದಾಳೆ.

ಆದರೆ ಅಡೈ ಸಿನಿಮಾ ಮಾತ್ರ ಆರಂಭಿಕವಾಗಿ ಸೃಷ್ಟಿಸಿದ್ದ ಹವಾಕ್ಕೆ ಸರಿಸಮನಾಗೇನೂ ಪ್ರದರ್ಶನ ಕಾಣುತ್ತಿಲ್ಲ. ಹೀಗಿರೋದರಿಂದಲೇ ಚಿತ್ರತಂಡ ಅಮಲಾ ಬೆತ್ತಲೆ ಸೀನಿನ ಮತ್ತೊಂದು ವೀಡಿಯೋ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಳ್ಳೋ ಗಿಮಿಕ್ಕು ನಡೆಸುತ್ತಿದೆ ಎಂಬ ಅಸಹನೆ ತಮಿಳು ಪ್ರೇಕ್ಷಕರೊಳಗೆ ಹಬೆಯಾಡುತ್ತಿದೆ.
ಚಿತ್ರತಂಡ ಅದೇನೇ ನಿರ್ಧಾರ ತೆಗೆದುಕೊಂಡರೂ ಆ ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾಳೆಂದರೆ ಅಮಲಾಗೂ ಈ ಬಿಟ್ಟಿ ಪ್ರಚಾರದ ಅಮಲು ಹತ್ತಿದೆಯೆಂದೇ ಅರ್ಥ. ಈ ಸಮಾಜದಲ್ಲಿ ಹೆಣ್ಣು ಆಕಾರದ ಸೆರಗು ಜಾರಿದರೂ ಜೊಲ್ಲು ಸುರಿಸೋ ಮಂದಿಯ ಸಂಖ್ಯೆ ದೊಡ್ಡದಿದೆ. ಅಂಥವರಿಗೆ ಇಂಥಾ ಬೆತ್ತಲೆ ಪುರಾಣಗಳು ಆಕರ್ಷಣೆಯಾಗಿ ಕಂಡರೂ ಕಾಣಬಹುದು. ಆದರೆ ಅಂಥವರನ್ನು ಆಕರ್ಷಿಸುವ ತಲುಬಿಗೆ ಬಿದ್ದು ಸಿನಿಮಾ ಮಾಧ್ಯಮದ ಘನತೆ ಮತ್ತು ಪ್ರೇಕ್ಷಕರ ಅಭಿರುಚಿಯನ್ನು ಹಾಳುಗೆಡವೋದು ಯಾವ ಭಾಷೆಯ ಚಿತ್ರರಂಗಕ್ಕೂ ಶೋಭೆ ತರುವ ಸಂಗತಿಯಲ್ಲ.

LEAVE A REPLY

Please enter your comment!
Please enter your name here