ಪೈಲ್ವಾನನ ಕಣ್ಮಣಿಯ ಜಾಲಿ ಮೂಡ್!

[adning id="4492"]


ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಬಿಡುಗಡೆಗೆ ರೆಡಿಯಾಗುತ್ತಿದೆ. ಮೊದ ಮೊದಲು ಪೋಸ್ಟರ್‌ಗಳ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿದ್ದ ಈ ಚಿತ್ರವೀಗ ಒಹಾಡುಗಳ ಮೂಲಕ ಅಭಿಮಾನಿಗಳನ್ನು, ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಮೊದಲು ಬಿಡುಗಡೆಯಾದ ಥೀಮ್ ಸಾಂಗ್ ಬಿಸಿಯಲ್ಲಿಯೇ ರೊಮ್ಯಾಂಟಿಕ್ ಸಾಂಗ್ ಒಂದು ತಂಗಾಳಿಯಂತೆ ಬೀಸಿ ಬಂದಿದೆ. ಇದರಲ್ಲಿ ಸುದೀಪ್ ಮತ್ತು ನಾಯಕಿ ಆಕಾಂಕ್ಷಾ ಮೋಹಕವಾಗಿ ಕಾಣಿಸಿಕೊಂಡಿರೋ ರೀತಿ ಎಲ್ಲರ ಮೆಚ್ಚುಗೆ ಗಳಿಸಿದೆ.


ತಾನು ನಟಿಸಿದ ಮೊದಲ ಕನ್ನಡ ಚಿತ್ರದಲ್ಲಿಯೇ ಈ ಪಾಟಿ ಪಬ್ಲಿಸಿಟಿ, ಪ್ರೀತ್ಯಾಧರಗಳು ಸಿಕ್ಕಿರೋದರಿಂದ ಆಕಾಂಕ್ಷಾ ಕೂಡಾ ಥ್ರಿಲ್ ಆಗಿದ್ದಾರೆ. ಕಣ್ಣುಮಣಿಯೇ ಕಣ್ಣು ಹೊಡಿಯೇ ಎಂಬ ಈ ಹಾಡಿನ ಮೇಲೆ ಖುದ್ದು ಆಕಾಂಕ್ಷಾ ಮೋಹಗೊಂಡಿದ್ದಾರೆ. ಇದೀಗ ಅದೇ ಹಾಡಿನೊಂದಿಗೆ ಜಾಲಿ ಡ್ರೈವ್ ಮಾಡಿ ಖುಷಿ ಪಟ್ಟಿದ್ದಾರೆ. ಕಣ್ಣುಮಣಿಯೆ ಕಣ್ಣು ಹೊಡಿಯೆ ಎಂಬ ಈ ಹಾಡಿನ ಜೊತೆಗಿನ ಜಾಲಿ ಡ್ರೈವ್ ವೀಡಿಯೋವನ್ನ ಆಕಾಂಕ್ಷಾ ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳೆಲ್ಲ ಮುದಗೊಂಡಿದ್ದಾರೆ.

On the loop 😎 what about you guys 😁?? #kanmaniye #pailwaan #diljaaniye #pehlwaan #driveexperience with @mercedesbenz @mercedesbenzind

Gepostet von Aakanksha singh am Freitag, 19. Juli 2019

ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರ ಆಗಮನ ಹೊಸತೇನೂ ಅಲ್ಲ. ಆದರೆ ಅದರಲ್ಲಿ ಕೆಲವರು ಮೊದಲ ಚಿತ್ರದಲ್ಲಿಯೇ ಟೇಕಾಫ್ ಆಗಿ ಕನ್ನಡವೂ ಸೇರಿದಂತೆ ಎಲ್ಲೆಡೆ ಲಕಲಕಿಸಿ ಬಿಡುತ್ತಾರೆ. ಒಂದೇ ಒಂದು ಹಾಡಿನ ಮೂಲಕ ಈ ಹುಡುಗಿ ಸೃಷ್ಟಿಸಿರೋ ಕ್ರೇಜ್ ನೋಡಿದರೆ ಈಕೆಯೂ ಕನ್ನಡದಲ್ಲಿಯೇ ನೆಲೆಗಾಣುವ ಸೂಚನೆಗಳು ದಟ್ಟವಾದಂತಿವೆ. ಹೀಗೆ ಪೈಲ್ವಾನನ ಕಣ್ಮಣಿಯಾಗಿ ಫೇಮಸ್ ಆಗಿರೋ ಆಕಾಂಕ್ಷಾ ಮೂಲರ್ತ ರಾಜಸ್ಥಾನದವರು. ಹಿಂದು ಕಿರುತೆರೆಯ ಮೂಲಕವೇ ನಟಿಯಾಗಿ ರೂಪುಗೊಂಡಿರೋ ಆಕಾಂಕ್ಷಾ ಬಾಲಿವುಡ್ ಸಿನಿಮಾವೊಂದರಲ್ಲಿಯೂ ನಟಿಸಿದ್ದಾರೆ.


ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡು ಬಾಲಿವುಡ್‌ನಲ್ಲಿಯೂ ನಟಿಸಿದ ಬಳಿಕ ಆಕಾಂಕ್ಷಾ ಒಂದಷ್ಟು ತೆಲುಗು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಒಂದು ಮಟ್ಟಿಗಿನ ಖ್ಯಾತಿ ಬಂದಿದೆಯೇ ವಿನಃ ದೊಡ್ಡ ಮಟ್ಟದ್ದೊಂದು ಗೆಲುವು ಆಕೆಗೆ ಸಿಕ್ಕಿರಲಿಲ್ಲ. ಆದರೆ ಪೈಲ್ವಾನ್ ಚಿತ್ರ ದೇಶಾಧ್ಯಂತ ಬಿಡುಗಡೆಯಾಗಲಿದೆ. ಈ ಮೂಲಕ ಎಲ್ಲ ಭಶಾಷೆಉಗಳಿಗೂ ಆಕಾಂಕ್ಷಾ ಪರಿಚಯವಾಗಲಿದ್ದಾರೆ. ಇದುವೇ ಈ ರಾಜಸ್ಥಾನಿ ಚೆಲುವೆಗೆ ಅವಕಾಶಗಳ ಹೆಬ್ಬಾಗಿಲು ತೆರೆಯೋ ಲಕ್ಷಣಗಳಿವೆ.

[adning id="4492"]

LEAVE A REPLY

Please enter your comment!
Please enter your name here