ನಭಾ ನಟೇಶ್ ಮೈಮೇಲೆ ಬಿಯರ್ ಸುರಿದು ಸಂಭ್ರಮಿಸಿದ ವರ್ಮಾ!

ರಾಮ್‌ಗೋಪಾಲ್ ವರ್ಮಾ ಎಂಬ ಹೆಸರು ಕೇಳಿದಾಕ್ಷಣವೇ ವಿಕ್ಷಿಪ್ತ ಚಾಯೆಯೊಂದು ಬಹುತೇಕರನ್ನು ಆವರಿಸಿಕೊಳ್ಳುತ್ತದೆ. ಎಲ್ಲದರಲ್ಲಿಯೂ ಡಿಫರೆಂಟಾಗಿರೋ ವರ್ಮಾ ಅದೆಷ್ಟು ನಿಷ್ಠುರವಾದಿಯೋ ಅಷ್ಟೇ ತಿಕ್ಕಲು ಆಸಾಮಿಯೂ ಹೌದು. ಸದಾ ಒಂದಷ್ಟು ವಿವಾದವನ್ನು ಮೈ ಮೇಲೆಳೆದುಕೊಳ್ಳದಿದ್ದರೆ ಅದು ರಾಮ್ ಗೋಪಾಲ್ ವರ್ಮಾ ಎಂಬ ಹೆಸರಿಗೇ ಅಪಮಾನ. ಇಂಥಾ ವರ್ಮಾ ಘನ ಗಂಭೀರ ವ್ಯಕ್ತಿತ್ವದವರು. ಆದರೀಗ ಅಂಥಾ ವರ್ಮಾ ಕುಣಿದು ಕುಪ್ಪಳಿಸಿ ನಟಿ ನಭಾ ನಟೇಶನ್ ಮೈ ಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ್ದಾರೆ!

ಹಾಗಂತ ವರ್ಮಾ ಮತ್ತೊಂದು ರಂಖಲು ಸೃಷ್ಟಿಸಿಕೊಂಡರು ಅಂದುಕೊಳ್ಳುವಂತಿಲ್ಲ. ಈ ವಿಡಿಯೋವನ್ನು ಖುದ್ದು ವರೇ ಶೇರ್ ಮಾಡಿಕೊಂಡಿದ್ದಾರೆ. ಆರ‍್ಜಿವಿ ಈ ಪಾಟಿ ಸಂಭ್ರಮದಿಂದ ಕುಪ್ಪಳಿಸಿ ಕುಣಿದಾಡಲು ಕಾರಣವಾಗಿದ್ದು ಅವರ ಶಿಷ್ಯ ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಚಿತ್ರ ಗೆದ್ದಿರೋದು. ಈ ಖುಷಿಗಾಗಿ ಖುದ್ದು ಆರ‍್ಜಿವಿ ಒಂದು ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಚಾರ್ಮಿ ಕೌರ್, ನಭಾ ನಟೇಶನ್ ಮುಂತಾದವರು ಭಾಗಿಯಾಗಿದ್ದರು. ಅದರಲ್ಲಿ ಕುಣಿದಾಡಿದ ಆರ್‌ಜಿವಿ ನಭಾ ಮೈ ಮೇಲೆ ಬಿಯರ್ ಪ್ರೋಕ್ಷಣೆ ಮಾಡಿದ್ದಾರೆ.

ಪೂರಿ ಜಗನ್ನಾಥ್ ನಿರ್ದೇಶನ ಮಾಡಿ ಚಾರ್ಮಿ ಕೌರ್ ಜೊತೆಗೂಡಿ ನಿರ್ಮಾಣ ಮಾಡಿರೋ ಚಿತ್ರ ಇಸ್ಮಾರ್ಟ್ ಶಂಕರ್. ಈ ಚಿತ್ರದಲ್ಲಿ ರಾಮ್ ನಾಯಕನಾಗಿದ್ದರೆ ನಿಧಿ ಅಗರ್ವಾಲ್ ಮತ್ತು ನಭಾ ನಟೇಶನ್ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆಗಳು ಬಂದು ಸೂಪರ್ ಹಿಟ್ ಆಗಿದೆ. ತನ್ನ ಆಪ್ತ ವಲಯದ ಗೆಲುವುಗಳನ್ನು ತನ್ನದೆಂದೇ ಸಂಭ್ರಮಿಸೋ ಆರ್‌ಜಿವಿ ಈ ಗೆಲುವನ್ನು ತಾವೇ ಪಾರ್ಟಿ ಆಯೋಜಿಸುವ ಮೂಲಕ ಸಂಭ್ರಮಿಸಿದ್ದಾರೆ. ಅಪರೂಪಕ್ಕೆಂಬಂತೆ ಖುಷಿಯ ಅವತಾರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here