ಕ್ರೇಜೀಸ್ಟಾರ್ ಪುತ್ರನಿಗೆ ಸಿಕ್ಕಳು ಮುಂಬೈ ಕನ್ಯೆ!

[adning id="4492"]


ಕ್ರೇಜೀಸ್ಟಾರ್ ರವಿಚಂದ್ರನ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಹೀರೋ ಆಗಿ ಲಾಂಚ್ ಆಗುತ್ತಿರೋದು ಗೊತ್ತೇ ಇದೆ. ವಿಕ್ರಮ್ ಇದೀಗ ಈ ಸಿನಿಮಾಗಾಗಿ ತಯಾರಿಯಲ್ಲಿ ತೊಡಗಿಒಕೊಂಡಿದ್ದಾರೆ. ಅತ್ತ ಈ ಸಿನಿಮಾದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯವೂ ಸಾಂಘವಾಗಿಯೇ ನೆರವೇರುತ್ತಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳಲು ಇಡೀ ತಂಡ ಸಜ್ಜಾಗಿರುವಾಗಲೇ ವಿಕ್ರಮನಿಗೆ ಜೋಡಿಯಾಗಿ ಮುಂಬೈ ಬೆಡಗಿಯೊಬ್ಬಳ ಆಗಮನವಾಗಿದೆ.

ಸಹನಾಮೂರ್ತಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಕುತೂಹಲವಂತೂ ಇದ್ದೇ ಇತ್ತು. ಆರಂಭದಲ್ಲಿ ಕನ್ನಡದ ಹೊಸಾ ಹುಡುಗಿ ನಾಯಕಿಯಾಗೋ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೀಗ ಮುಂಬೈ ಮೂಲದ ಮಾಡೆಲ್ ಆಕಾಂಕ್ಷ ಶರ್ಮಾರನ್ನು ಕರೆತರಲಾಗಿದೆ. ಈ ಮೂಲಕ ರೊಮ್ಯಾಂಟಿಕ್ ಕಥಾ ಹಂದರದ ಈ ಚಿತ್ರದ ಪಾತ್ರಕ್ಕೆ ತಕ್ಕುದಾದ ನಾಯಕಿಯನ್ನು ತಲಾಶ್ ಮಾಡುವಲ್ಲಿ ಚಿತ್ರ ತಂಡ ಯಶ ಕಂಡಿದೆ.

ಮುಂಬೈನವರೇ ಆದ ಆಕಾಂಕ್ಷ ಇತ್ತೀಚೆಗೆ ಬಿಡುಗಡೆಯಾಗಿದ್ದ ದೋ ದಿನ್ ಎಂಬ ಆಲ್ಬಂ ಸಾಂಗ್‌ನ ಮೂಲಕವೇ ಪ್ರವರ್ಧ ಮಾನಕ್ಕೆ ಬಂದಿರುವವರು. ಈ ಹಾಡಿನಿಂದ ನಟಿಯಾಗಿ ಅನಾವರಣಗೊಂಡರೂ ಮಾಡೆಲಿಂಗ್ ಲೋಕದಲ್ಲಿ ಆಕಾಂಕ್ಷ ತುಂಬಾನೇ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ದೇಶಾಧ್ಯಂತ ಗಮನ ಸೆಳೆದಿದ್ದಾರೆ. ಏಕ್ ದಿನ ಸಾಂಗ್‌ನಲ್ಲಿ ಅಕ್ಷಯ್ ರಾವಲ್ ಜೊತೆ ಹೆಜ್ಜೆ ಹಾಕುತ್ತಲೇ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿರೋ ಈ ಸುಂದರಿ ಇದೀಗ ವಿಕ್ರಮ್‌ಗೆ ಜೋಡಿಯಾಗಿದ್ದಾರೆ.

ಸಹನಾ ಮೂರ್ತಿಯವರು ಈ ಚಿತ್ರಕ್ಕೆ ತ್ರಿವಿಕ್ರಮ ಎಂಬ ಶೀರ್ಷಿಕೆಯನ್ನೂ ಅಂತಿಮಗೊಳಿಸಿದ್ದಾರೆ. ರಗಡ್ ಲವ್ ಸ್ಟೋರಿ ಹೊಂದಿರೋ ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ನಾಯಕನಾಗಿ ಲಾಂಚ್ ಆಗಿದ್ದಾರೆ. ಇದೀಗ ವಿಕ್ರಮ್ ಎಂಟ್ರಿಗಾಗಿ ರವಿಮಾಮ ಅದ್ಭುತವಾದೊಂದು ಪ್ರೇಮ ಕಥೆಯನ್ನೇ ಆಯ್ಕೆ ಮಾಡಿದ್ದಾರಂತೆ.

[adning id="4492"]

LEAVE A REPLY

Please enter your comment!
Please enter your name here