ಕರಾವಳಿ ಭೂಗತ ಜಗತ್ತಿನತ್ತ ಕಣ್ಣಿಟ್ಟ ವಸಿಷ್ಠ ಸಿಂಹ!


ಬೇಸ್ ವಾಯ್ಸ್ ಮತ್ತು ಅದಕ್ಕೆ ತಕ್ಕುದಾದ ಅಬ್ಬರದ ನಟನೆಯ ಮೂಲಕವೇ ಖಳ ನಟನಾಗಿ ನೆಲೆ ಕಂಡುಕೊಳ್ಳುತ್ತಿರುವವರು ವಸಿಷ್ಠ ಸಿಂಹ. ಟಗರು ಚಿತ್ರದ ಚಿಟ್ಟೆ ಪಾತ್ರದಿಂದ ಮತ್ತಷ್ಟು ಮೆರುಗುಇ ಪಡೆದುಕೊಂಡಿರೋ ವಸಿಷ್ಠರ ಸಿನಿಮಾ ಯಾನವೀಗ ಮತ್ತೊಂದು ಮಜಲಿನತ್ತಲೂ ಹೊರಳಿಕೊಂಡಿದೆ. ಅವರೀಗ ಭಿನ್ನ ಕಥೆಗಳ ಮೂಲಕ ನಾಯಕನಾಗಿ ನೆಲೆ ನಿಲ್ಲುವತ್ತಲೂ ದೃಷ್ಟಿ ಹಾಯಿಸಿದಂತಿದೆ.

ಇತ್ತೀಚೆಗಷ್ಟೇ ವಸಿಷ್ಠ ಸಿಂಹ ನಾಯಕನಾಗಿರೋ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರವೊಂದರ ಸುದ್ದಿ ಹೊರ ಬಿದ್ದಿತ್ತು. ಇಂಡಿಯಾ ವರ್ಸಸ್ ಇಂಗ್ಲೆಂಡ್ ಎಂಬ ಶೀರ್ಷಿಕೆಯೂ ಅದಕ್ಕೆ ನಿಗಧಿಯಾಗಿತ್ತು. ಈ ಶೀರ್ಷಿಕೆಯೇ ಸದರಿ ಸಿನಿಮಾದ ಕಥೆ ಮಾಮೂಲಿ ಜಾಡಿನದ್ದಲ್ಲ ಎಂಬ ಸೂಚನೆಯಂತಿದೆ. ವಸಿಷ್ಠ ಮತ್ತು ಮಾನ್ವಿತಾ ಹರೀಶ್ ನಾಯಕ ನಾಯಕಿಯರಾಗಿರೋ ಈ ಚಿತ್ರ ಸಂಪೂರ್ಣ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಈ ಹೊತ್ತಿನಲ್ಲಿಯೇ ವಸಿಷ್ಠ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರೋ ಸುದ್ದಿ ಹೊರಬಿದ್ದಿದೆ!

ಈ ಹಿಂದೆ ಮಡಮಕ್ಕಿ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದರಲ್ಲಾ ವಿನಯ್ ಪ್ರೀತಮ್ ಅವರೇ ವಸಿಷ್ಠ ನಾಯಕನಾಗಲಿರೋ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅದಕ್ಕೆ ಮಂಜರನ್ ಎಂಬ ಹೆಸರೂ ನಿಗಧಿಯಾಗಿದೆ. ಇದು ಎಂಬತ್ತರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆದಿದ್ದ ಭೂಗತ ಕಥೆಯಾಧಾರಿತ ಚಿತ್ರವಂತೆ. ಮಡಮಕ್ಕಿ ಚಿತ್ರದ ಮೂಲಕವೂ ಆ ಭಾಗದ ಕಥೆ ಹೇಳಿದ್ದ ವಿನಯ್ ಈ ಚಿತ್ರದಲ್ಲಿಯೂ ಕರಾವಳಿಯತ್ತಲೇ ಕಣ್ಣು ನೆಟ್ಟಿದ್ದಾರೆ. ಮಂಜರನ್ ಅನ್ನೋ ಹೆಸರೇ ಕುತೂಹಲ ಕೆರಳಿಸುವಂತಿದೆ

LEAVE A REPLY

Please enter your comment!
Please enter your name here