ನೇಪಾಳಕ್ಕೂ ನುಗ್ತಾನೆ ನೋಡಿ ಪೈಲ್ವಾನ್!

[adning id="4492"]


ಬಿಡುಗಡೆ ಯಾವತ್ತು ಎಂಬ ಪ್ರಶ್ನೆಯನ್ನು ಮನಸಲ್ಲಿಟ್ಟುಕೊಂಡೇ ಸಮಸ್ತ ಕಿಚ್ಚನ ಅಭಿಮಾನಿಗಳೂ ಪೈಲ್ವಾನ್ ಕ್ರೇಜ್‌ನಲ್ಲಿ ಕಳೆದು ಹೋಗಿದ್ದಾರೆ. ಟೀಸರ್ ಮತ್ತು ಥೀಮ್ ಸಾಂಗ್ ಮೂಲಕವೇ ಮತ್ತಷ್ಟು ಅಬ್ಬರ ಶುರುವಿಟ್ಟುಕೊಂಡಿರೋ ಈ ಚಿತ್ರ ಎರಡೂವರೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೇಳಿಯೇ ಬಹುತೇಕರು ಹೌಹಾರಿದ್ದರು. ಆದರೆ ಆ ಸಂಖ್ಯೆ ಮತ್ತೂ ಹೆಚ್ಚಿಕೊಳ್ಳಲಿದೆ. ಪೈಲ್ವಾನ ಬಿಡುಗಡೆಯಾಗಲಿರೋ ಪ್ರದೇಶಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿಕೊಳ್ಳುವ ಸಾಧ್ಯತೆಗಳಿದ್ದಾವೆ.

ಪೈಲ್ವಾನ್ ಚಿತ್ರದ ವಿರತಣಾ ಹಕ್ಕುಗಳನ್ನು ಜಿ ಸಿನಿಮಾಸ್ ಪಡೆದುಕೊಂಡಾಗಲೇ ಮಹತ್ತರವಾದೊಂದು ಕಮಾಲ್ ನಡೆಯೋ ನಿರೀಕ್ಷೆಗಳೆದ್ದಿದ್ದವು. ಇದೀಗ ಅಖಾಡಕ್ಕಿಳಿದಿರೋ ಈ ಸಂಸ್ಥೆ ದೇಶ ವಿದೇಶಗಳಲ್ಲಿಯೂ ಹೆಚ್ಚು ಪ್ರದೇಶಗಳಲ್ಲಿ ಪೈಲ್ವಾನ್ ತೆರೆ ಗಾಣುವಂತೆ ಮಾಡಲು ರೆಡಿಯಾಗಿದೆ. ಅದರನ್ವಯ ನೇಪಾಳ ಮತ್ತು ಭೂತಾನ್‌ಗಳಲ್ಲಿಯೂ ಪೈಲ್ವಾನ್ ನುಗ್ಗಿ ಅಬ್ಬರಿಸೋ ಸೂಚನೆಯೊಂದು ಸಿಕ್ಕಿದೆ.
ಇದರೊಂದಿಗೆ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿಯೂ ಪೈಲ್ವಾನ್ ಚಿತ್ರವನ್ನು ತೆರೆ ಗಾಣಿಸಲು ಸದರಿ ಸಂಸ್ಥೆ ಶ್ರಮವಹಿಸುತ್ತಿದೆಯಂತೆ. ಸಾಮಾನ್ಯವಾಗಿ ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ಕೆಲ ಚಿತ್ರಗಳು ವಿದೇಶದ ಕೆಲವೇ ಕೆಲ ಸ್ಥಳಗಳಲ್ಲಿ ಬಿಡುಗಡೆಯಾಗುತ್ತವೆ. ಅದೊಂದು ಪ್ರತಿಷ್ಠೆ ಎಂಬಂತೆ ನಡೆದುಕೊಂಡು ಬಂದಿದೆ. ಆದರೆ ಪೈಲ್ವಾನ್ ಬಾಲಿವುಡ್ ಚಿತ್ರಗಳನ್ನೇ ಮೀರಿಸುವಂತೆ ವಿದೇಶಗಳಲ್ಲಿಯೂ ಅಬ್ಬರಿಸಲಿದೆ.

ಪೈಲ್ವಾನ್ ಚಿತ್ರ ಆಗಸ್ಟ್ ಕಡೇಯಲ್ಲಿ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ತೆರೆ ಕಾಣೋದು ಪಕ್ಕಾ. ಸದ್ಯ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯದಲ್ಲಿ ನಿರ್ದೇಶಕ ಕೃಷ್ಣ ಬ್ಯುಸಿಯಾಗಿದ್ದಾರೆ. ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಿಡುಗಡೆಗೆ ಬಾಕಿ ಇರೋದರಿಂದ ಎಲ್ಲವನ್ನೂ ಬೇಗನೆ ಮುಗಿಸಿಕೊಳ್ಳಲು ಚಿತ್ರತಂಡ ಟೊಂಕ ಕಟ್ಟಿ ನಿಂತಿದೆ. ಇದೇ ಇಪ್ಪತ್ತೇಳನೇ ತಾರೀಕು ಆಡಿಯೋ ರಿಲೀಸ್ ಆದ ಬೆನ್ನಿಗೇ ಬಿಡುಗಡೆ ದಿನಾಂಕವೂ ಅಧಿಕೃತವಾಗಿ ಘೋಷಣೆಯಾಗಲಿದೆ.

[adning id="4492"]

LEAVE A REPLY

Please enter your comment!
Please enter your name here