ಧೂಮಲೀಲೆಯೊಂದಿಗೆ ನಾಟ್ಯವಾಡಿದ ಮಯೂರಿ!

[adning id="4492"]


ಜಯಕಾರ್ತಿಕ್‌ಗೆ ಜೋಡಿಯಾಗಿ ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್ಲಿನಲ್ಲಿ ನಟಿಸೋ ಮೂಲಕವೇ ನಟಿಯಾಗು ಗುರುತಿಸಿಕೊಂಡವರು ಮಯೂರಿ. ಆ ಧಾರಾವಾಹಿಯ ನಟನೆಯ ಮೂಲಕವೇ ಮನೆ ಮಾತಾಗಿದ್ದ ಅವರು ನಂತರದಲ್ಲಿ ಹಿರಿತೆರೆಗೂ ಪರಿಚಯವಾಗಿ ಇದೀಗ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಸಾಗಿ ಬಂದ ಮಯೂರಿ ಈವರೆಗೂ ಹೋಮ್ಲಿ ಲುಕ್ಕಿನಲ್ಲಿಯೇ ಪ್ರೇಕ್ಷಕರಿಗೆ ಹತ್ತಿರಾಗಿದ್ದರು. ಆದರೀಗ ಮೊದಲ ಸಲ ಅಂಥಾ ಇಮೇಜಿಗೆ ತದ್ವಿರುದ್ಧವಾದ ಪಾತ್ರವೊಂದರಲ್ಲಿ ನಟಿಸೋ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಮಯೂರಿ ಹೀಗೆ ಹಠಾತ್ತನೆ ಬೋಲ್ಡ್ ಪಾತ್ರಕ್ಕೆ ಒಡ್ಡಿಕೊಂಡಿರೋದು ನನ್ನ ಪ್ರಕಾರ ಚಿತ್ರದ ಮೂಲಕ. ಇದೀಗ ಹೊರ ಬಂದಿರೋ ಒಂದಷ್ಟು ಫೋಟೋಗಳೇ ಅವರೆಷ್ಟು ಬೋಲ್ಡ್ ಆಗಿರೋ ಪಾತ್ರದಲ್ಲಿ ನಟಿಸಿದ್ದಾರೆಂಬುದನ್ನು ಸಾರಿ ಹೇಳುವಂತಿವೆ. ಇಲ್ಲಿ ಮಯೂರಿ ಬಾರು ಪಬ್ಬುಗಳಲ್ಲಿ ಬಿಡುಬೀಸಾಗಿ ಕಾಲ ಕಳೆಯುತ್ತಾ ಬಿಂದಾಸಾಗಿಯೇ ಧಮ್ ಹೊಡೆಯೋ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.

ಸಾಮಾನ್ಯವಾಗಿ ಹೋಮ್ಲಿ ಲುಕ್ಕನ್ನು ಕಾಪಾಡಿಕೊಂಡು ಬಂದ ಯಾರೇ ನಟಿಗಾದರು ಹೀಗೆ ಏಕಾಏಕಿ ರೂಪಾಂತರ ಹೊಂದುವುದು ಕಷ್ಟದ ಕೆಲಸ. ತನ್ನನ್ನು ಹೋಮ್ಲಿ ಲುಕ್ಕಿನಲ್ಲಿ ಮೆಚ್ಚಿಕೊಂಡು ಬಂದ ಪ್ರೇಕ್ಷಕರು ಏನೆಂದುಕೊಳ್ಳುತ್ತಾರೋ ಎಂಬ ಅಳುಕು ಇದ್ದೇ ಇರುತ್ತದೆ. ಆದರೆ ಮಯೂರಿ ಅಂಥಾ ಅಳುಕನ್ನೆಲ್ಲ ಮೀರಿಕೊಂಡು ಇಂಥಾ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಕ್ಕೆ ಕಾರಣ ಕಥೆಯಂತೆ. ಇಲ್ಲಿ ಅವರ ಪಾತ್ರ ಕಥೆಗೆ ಪೂರಕವಾಗಿದೆ. ಅದು ಇಡೀ ಚಿತ್ರದ ಪ್ರಧಾನ ಅಂಶದಂಥಾ ಪಾತ್ರವೂ ಹೌದು. ಆ ಕಾರಣದಿಂದಲೇ ಮಯೂರಿ ಇಂಥಾ ಸವಾಲು ಸ್ವೀಕರಿಸಿದ್ದಾರೆ.

ಈ ಪಾತ್ರ ಅದೇನೇ ಬೋಲ್ಡ್ ಆಗಿದ್ದರೂ ಪ್ರತೀ ಪ್ರೇಕ್ಷಕರೂ ಅದನ್ನು ಅಚ್ಚರಿಯಿಂದ ಕಣ್ತುಂಬಿಕೊಂಡು ಬರ ಮಾಡಿಕೊಳ್ಳುತ್ತಾರೆಂಬ ಅಚಲ ನಂಬಿಕೆ ಮಯೂರಿಯವರಲ್ಲಿದೆ. ನನ್ನ ಪ್ರಕಾರ ಚಿತ್ರ ವಿಶೇಷವಾದ ಕಥೆಯನ್ನು ಹೊಂದಿದೆ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಮಯೂರಿಯ ಪಾತ್ರದ ಝಲಕ್ ನೋಡಿದ ಪ್ರೇಕ್ಷಕರಲ್ಲಿ ಈ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವೂ ಮೂಡಿಕೊಂಡಿದೆ.

[adning id="4492"]

LEAVE A REPLY

Please enter your comment!
Please enter your name here