ಮಂಚ ಹತ್ತಿದರೆ ಮಾತ್ರ ಮನೆಯೊಳಗೆ ಎಂಟ್ರಿ ಅಂದನಂತೆ ಬಿಗ್‌ಬಾಸು!


ಬಿಗ್‌ಬಾಸ್‌ನಂಥಾ ರಿಯಾಲಿಟಿ ಶೋಗಳು ಕನ್ನಡವೂ ಸೇರಿದಂತೆ ಯಾವ ಭಾಷೆಯಲ್ಲಿಯೂ ವಿವಾದ, ಆರೋಪಗಳಿಲ್ಲದೆ ನಡೆದಿಲ್ಲ. ಅದರಲ್ಲಿಯೂ ನೂರು ದಿನಗಳ ಕಾಲ ದಂಡಿ ದಂಡಿ ಕ್ಯಾಮೆರಾಗಳ ಕಣ್ತಪ್ಪಿಸಿ ನಡೆಯ ಬಹುದಾದ ನಾನಾ ಆಟಗಳ ಬಗ್ಗೆ ಪ್ರೇಕ್ಷಕರಲ್ಲಿಯೂ ಗುಮಾನಿಗಳಿವೆ. ಇಂಥಾ ವಾತಾವರಣದಲ್ಲಿಯೇ ತೆಲುಗು ನಟಿಯೊಬ್ಬಳು ನೀಡಿರೋ ಹೇಳಿಕೆ ಅಲ್ಲೋಲಕಲ್ಲೋಲ ಸೃಷ್ಟಿಸಿ ಬಿಟ್ಟಿದೆ!

ಕಳೆದ ಎರಡು ವರ್ಷಗಳಿಂದ ತೆಲುಗಿನಲ್ಲಿಯೂ ಬಿಗ್‌ಬಾಸ್ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಬಾರಿ ಈ ಶೋವನ್ನು ನಾನಿ ನಡೆಸಿಕೊಟ್ಟಿದ್ದರು. ಮೊದಲ ಆವೃತ್ತಿಗೇ ಪೇಲವವಾದ ಪ್ರತಿಕ್ರಿಯೆಗಳು ಬಂದಿದ್ದವು. ಈ ಬಾರಿಯೂ ತೆಲುಗಿನ ಬಿಗ್‌ಬಾಸ್ ಶೋಗಾಗಿ ತಯಾರಿ ನಡೆಯುತ್ತಿದೆ. ಈ ಬಾರಿ ಯಾರು ಸ್ಪರ್ಧಿಗಳಾಗಬಹುದೆಂಬ ಬಗ್ಗೆ ರಂಗು ರಂಗಿನ ಸುದ್ದಿಗಳೇ ಹರಡಿಕೊಳ್ಳುತ್ತಿವೆ. ಹೀಗಿರುವಾಗಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತೆಲುಗು ನಟಿ ಗಾಯತ್ರಿ ಗುಪ್ತಾ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾಳೆ!

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಗಾಯತ್ರಿಗೆ ಮೂರನೇ ಸೀಜನ್ನಿನ ಬಿಗ್‌ಬಾಸ್ ಶೋನಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು. ಈ ಬಾರಿಯ ಶೋನಲ್ಲಿ ಭಾಗವಹಿಸಲು ಆಫರ್ ಬಂದಿತ್ತೆಂದಿರೋ ಗಯತ್ರಿ ಅದಕ್ಕಾಗಿ ಮಂಚವೇರಬೇಕೆಂಬ ಬೇಡಿಕೆ ಇಟ್ಟಿದ್ದರೆಂಬ ಶಾಕಿಂಗ್ ವಿಚಾರವನ್ನೂ ಹೇಳಿಕೊಂಡಿದ್ದಾಳೆ. ಈ ಮೂಲಕ ತೆಲುಗು ಆವೃತ್ತಿಯ ಮೂರನೇ ಸೀಜನ್ ಬಿಗ್‌ಬಾಸ್ ಶೋಗೆ ಆರಂಭದಲ್ಲಿಯೇ ಕಂಟಕ ಶುರುವಾದಂತಿದೆ.

ಈ ಬಾರಿ ಮೂರನೇ ಆವೃತ್ತಿಯ ಈ ಶೋವನ್ನು ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡಲಿದ್ದಾರಂತೆ. ಹದಿನಾಲಕ್ಕು ಸ್ಪರ್ಧಿಗಳಿಗಾಗಿಯೂ ಈಗಾಗಲೇ ಶೋಧ ಕಾರ್ಯ ಆರಂಭವಾಗಿದೆ. ಆದರೆ ಗಾಯತ್ರಿ ಮಾಡಿರೋ ಈ ಆರೋಪ ತೆಲುಗು ಪ್ರೇಕ್ಷಕರು ಬಿಗ್‌ಬಾಸ್ ಶೋವನ್ನು ಗುಮಾನಿಯಿಂದ ನೋಡುವಂತಾಗಿದೆ. ಇಲ್ಲಿನ ಪ್ರೇಕ್ಷಕರು ಯಾರದ್ದೋ ಖಾಸಗಿ ಕಚ್ಚಾಟ, ವಿಕೃತಿಗಳನ್ನು ನೂರು ದಿನ ತೋರಿಸೋ ಈ ಶೋವನ್ನು ವಿರೋಧಿಸಿದ್ದರು. ಆದರೆ ಮನುಷ್ಯರಲ್ಲಿ ಬೇರೆಯವರ ಖಾಸಗಿ ಬದುಕಿನ ಬಗೆಗಿರುವ ಸಹಜ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡಿರೋ ಬಿಗ್‌ಬಾಸ್‌ನ ಮೂರನೇ ಆವೃತ್ತಿಗೀಗ ತಯಾರಿ ಆರಂಭವಾಗಿದೆ.

LEAVE A REPLY

Please enter your comment!
Please enter your name here