ಅವನು ಕಣ್ಣಲ್ಲೇ ರೇಪ್ ಮಾಡಿದ ಅಂದಳು ಇಶಾ ಗುಪ್ತಾ!

[adning id="4492"]


ಈ ನಟಿಯರಿಗೆ ಪಬ್ಲಿಸಿಟಿ ಪಡೆಯಲು ನಾನಾ ದಾರಿಗಳಿವೆ. ಅದರಲ್ಲಿಯೂ ಈ ಬಾಲಿವುಡ್ ನಟಿಯರಂತೂ ಅದಕ್ಕಾಗಿ ನವೀನ ಮಾರ್ಗಗಳನ್ನೇ ಆವಿಷ್ಕರಿಸಿಕೊಂಡಿದ್ದಾರೆ. ಈಗ ಇಶಾ ಗುಪ್ತಾ ಮಾರಿರುವ ಆರೋಪವೊಂದು ಈ ಮಾತಿಗೆ ತಕ್ಕುದಾಗಿದೆ. ರೆಸ್ಟೋರೆಂಟ್ ಮಾಲೀಕ ತನ್ನನ್ನು ಕಣ್ಣಲ್ಲೇ ರೇಪ್ ಮಾಡಿದ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರೋ ಇಶಾ ಹೊಸತೊಂದು ವಿವಾದಕ್ಕೆ ನಾಂದಿ ಹಾಡಿದ್ದಾಳೆ.

ಇಶಾ ಇತ್ತೀಚೆಗೆ ಸ್ನೇಹಿತೆಯರೊಂದಿಗೆ ದೆಹಲಿಯ ರೆಸ್ಟೋರಾಂಟ್ ಒಂದಕ್ಕೆ ಹೋಗಿದ್ದಳಂತೆ. ಆ ಸಂದರ್ಭದಲ್ಲಿ ಸದರಿ ರೆಸ್ಟೋರೆಂಟ್ ಮಾಲೀಕ ರೋಹಿತ್ ವಿಗ್ ಎಂಬಾತ ಇಶಾಳನ್ನೇ ಕೆಕ್ಕರಿಸಿ ದಿಟ್ಟಿಸಿದ್ದನಂತೆ. ಒಂದಷ್ಟು ಸೆಕೆಂಡುಗಳ ಕಾಲ ಆತ ತನ್ನನ್ನೇ ನೋಡಿದಾಗ ಇರುಸುಮುರುಸಾಯಿತು ಅಂತ ಇಶಾ ಹೇಳಿಕೊಂಡಿದ್ದಾಳೆ. ಕಣ್ಣು ಗುಡ್ಡೆಗಳಲ್ಲಿಯೇ ಕಾಮ ತುಂಬಿಕೊಂಡು ನೋಡುತ್ತಿದ್ದ ಆತನ ಬಗ್ಗೆ ಬಾಡಿಗಾರ್ಡ್‌ಗೆ ತಿಳಿಸಿದ್ದಾಗಿಯೂ ಇಶಾ ಬರೆದುಕೊಂಡಿದ್ದಾಳೆ.

ಸದ್ಯ ಆತ ಮುಂದುವರೆದು ತನ್ನನ್ನು ಮುಟ್ಟಲು ಬಂದಿಲ್ಲ, ಮಾತಾಡಿಸಲೂ ಇಲ್ಲ ಅಂತ ಸಮಾಧಾನ ಪಟ್ಟುಕೊಂಡಿರೋ ಇಶಾ ಈ ಘಟನೆಯ ಮೂಲಕವೇ ಮಹಿಳಾ ರಕ್ಷಣೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾಳೆ. ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಹೆಚ್ಚಾಗಿ ಆಗಾಗ ಟಾಪ್‌ಲೆಸ್ ಪೋಸು ಕೊಡುವುದೂ ಸೇರಿದಂತೆ ಇದೇ ಮಾದರಿಯ ಕೆಲಸ ಕಾರ್ಯಗಳ ಮೂಲಕ ಸದ್ದು ಮಾಡುವವಳು ಇಶಾ. ಇದೀಗ ಆಕೆ ಕಣ್ಣಲ್ಲೇ ರೇಪ್ ಮಾಡಿದ ಹೊಸಾ ಕಾನ್ಸೆಪ್ಟಿನ ಮೂಲಕ ಮತ್ತೆ ಒಂದಷ್ಟು ಸುದ್ದಿ ಮಾಡಿದ್ದಾಳೆ!

[adning id="4492"]

LEAVE A REPLY

Please enter your comment!
Please enter your name here