ಗೃಹಿಣಿಯೊಂದಿಗೆ ಲವ್ವಲ್ಲಿ ಬಿದ್ದರಾ ನಿರೂಪ್ ಭಂಡಾರಿ?

[adning id="4492"]


ರಾಜರಥ ಚಿತ್ರ ಬಿಡುಗಡೆಯಾದ ನಂತರದಲ್ಲಿ ಉಂಟಾದೊಂದು ವಿವಾದ ಬಿಟ್ಟರೆ ರಂಗಿತರಂಗದ ಭಂಡಾರಿ ಬ್ರದರ್ಸ್ ಮತ್ಯಾವ ರಂಖಲುಗಳಲ್ಲಿಯೂ ಭಾಗಿಯಾದವರಲ್ಲ. ತಾವಾಯಿತು ತಮ್ಮ ಸಿನಿಮಾ ಕೆಲಸ ಕಾರ್ಯವಾಯಿತು ಅಂತಿರೋ ಈ ಸಹೋದರರಲ್ಲೊಬ್ಬರಾದ ನಿರೂಪ್ ಭಂಡಾರಿ ಗೃಹಿಣಿಯೊಂದಿಗೆ ಲವ್ವಲ್ಲಿ ಬಿದ್ದಿದ್ದಾರೆ ಮತ್ತು ಏಳು ವರ್ಷದ ಮಗುವಿರೋ ಹೆಣ್ಣನ್ನೇ ಮದುವೆಯಾಗಲೂ ಮುಂದಾಗಿದ್ದಾರೆ ಅಂತೊಂದು ವಿಚಾರವೀಗ ಜಾಹೀರಾಗಿದೆ!

ಹಾಗಂತ ಇದು ರಿಯಲ್ ಅಂದುಕೊಳ್ಳುವಂತಿಲ್ಲ. ಇಂಥಾ ವಿಚಾರಗಳು ಎಲ್ಲೆಂದರಲ್ಲಿ ಹರಡಿಕೊಂಡಿರೋದರಿಂದ ಒಂದಷ್ಟು ಜನ ಅದು ರಿಯಲ್ ಪ್ರೇಮ್ ಕಹಾನಿ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರಿದು ನಿರೂಪ್ ಭಂಡಾರಿ ನಟಿಸಿರೋ ಆದಿಲಕ್ಷ್ಮಿ ಪುರಾಣ ಚಿತ್ರದ ಕಡೆಯಿಂದ ಹುಟ್ಟಿಕೊಂಡಿರೋ ಮ್ಯಾಟರ್. ಈ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದೆ. ಈ ಟ್ರೈಲರಿನಲ್ಲಿ ಕಾಣಿಸಿರೋ ಕಥಾಹಂದರದ ಚಹರೆಗಳೇ ನಿರೂಪ್ ಗೃಹಿಣಿಯೊಬ್ಬಳ ಬೆಂಬಿದ್ದು ಮದುವೆಯಾಗಲೂ ಹವಣಿಸುತ್ತಿರೋ ವಿಚಾರ ಹರಡಿಕೊಳ್ಳಲು ಪ್ರೇರೇಪಣೆ ನೀಡಿದೆ!

ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಏಳು ವರ್ಷದ ಮಗುವಿರೋ ತಾಯಿಯಾಗಿ ನಟಿಸಿದ್ದಾರೆ. ನಿರೂಪ್ ಭಂಡಾರಿ ಆಕೆಯ ಮೇಲೆ ಮೋಹಗೊಂಡು ಮದುವೆಯಾಗಲೂ ಮುಂದಾಗೋ ಪಾತ್ರದಲ್ಲಿ ನಟಿಸಿದ್ದಾರೆ. ಈ ವಿಚಾರವೇ ಆದಿ ಮತ್ತು ಲಕ್ಷ್ಮಿಯ ಪ್ರೇಮ ಪುರಾಣ ಡಿಫರೆಂಟಾಗಿದೆ ಎಂಬುದನ್ನು ಸಾರಿ ಹೇಳಿದೆ. ಇಂಥಾ ಕಥಾನಕದ ಸುಳಿವಿನೊಂದಿಗೇ ಈ ಸಿನಿಮಶಾದ ಟ್ರೈಲರ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕವೇ ಇನ್ನೇನು ಬಿಡುಗಡೆಗೆ ಸಜ್ಜಾಗಿ ನಿಂತಿರೋ ಆದಿಲಕ್ಷ್ಮಿ ಪುರಾಣದ ಪಾರಾಯಣಕ್ಕೆ ಪ್ರೇಕ್ಷಕರು ಕಾಯುವಂತಾಗಿದೆ.

ಇದು ನಾನಾ ಕಾರಣಗಳಿಂದ ಪ್ರೇಕ್ಷಕರ ಗಮನ ಸೆಳೆದಿರೋ ಚಿತ್ರ. ಈ ಮೂಲಕವೇ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದಲ್ಲಿ ನಟಿಸಿದ್ದೇ ಕೊನೆ, ಆ ನಂತರದ ವರ್ಷಗಳಲ್ಲಿ ರಾಧಿಕಾ ನಾಯಕಿಯಾಗಿ ಕಾಣಿಸಿಕೊಂಡಿರಲಿಲ್ಲ. ಯಶ್ ಅವರನ್ನು ಮದುವೆಯಾದ ನಂತರ ರಾಧಿಕಾ ನಟಿಸಿರೋ ಮೊದಲ ಚಿತ್ರವಿದು. ಇನ್ನು ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಪಾಲಿಗಿದು ನಾಯಕನಾಗಿ ಮೂರನೇ ಚಿತ್ರ

[adning id="4492"]

LEAVE A REPLY

Please enter your comment!
Please enter your name here