ಸಾರ್ವಜನಿಕರಲ್ಲಿ ವಿನಂತಿ: ಲೂಸ್ ಮಾದ ಯೋಗಿ ಜೊತೆ ಚಿತ್ರ ನೋಡೋ ಸದಾವಕಾಶ!

 


ಕೃಪಾಸಾಗರ್ ನಿರ್ದೇಶನದ ಚೊಚ್ಚಲ ಚಿತ್ರ ಸಾರ್ವಜನಿಕರಲ್ಲಿ ವಿನಂತಿ. ಈ ಚಿತ್ರ ವಾರಗಳ ಹಿಂದೆ ತೆರೆ ಕಂಡು ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಹೊಸಬರ ಚಿತ್ರವೊಂದು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿಯೂ ಯಶ ಕಂಡಿದೆ. ಬಿಡುಗಡೆ ಪೂರ್ವದಲ್ಲಿ ಹುಟ್ಟಿಕೊಂಡಿದ್ದ ನಿರೀಕ್ಷೆಗಳನ್ನು ತಣಿಸುವಂಥಾ ಕಂಟೆಂಟು ಹೊಂದಿರೋ ಈ ಚಿತ್ರವನ್ನು ಲೂಸ್ ಮಾದ ಯೋಗಿ ವೀಕ್ಷಿಸಲು ತಯಾರಾಗಿದ್ದಾರೆ. ಯೋಗಿಯೊಂದಿಗೆ ಕೂತು ಈ ಸಿನಿಮಾ ನೋಡುವ ಯೋಗವನ್ನೂ ಕೂಡಾ ಈ ಮೂಲಕ ಚಿತ್ರತಂಡ ಪ್ರೇಕ್ಷಕರಿಗೆ ನೀಡಿದೆ.

ಇದೇ ಒಂಬತ್ತನೇ ತಾರೀಕು ಅಂದರೆ ನಾಳೆ ಯೋಗಿ ಬೆಂಗಳೂರಿನ ಮಲ್ಲೇಶ್ವರದ ಸವಿತಾ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ವೀಕ್ಷಿಸಲಿದ್ದಾರೆ. ಬೆಳಗ್ಗೆ ಹನ್ನೆಂದೂವರೆಗೆಲ್ಲ ಈ ಶೋ ಆರಂಭವಾಗುತ್ತದೆ. ನೀವೀಗಲೇ ಟಿಕೆಟ್ ಬುಕ್ ಮಾಡಿದರೆ ಲೂಸ್ ಮಾದ ಯೋಗಿ ಜೊತೆಗೇ ಸಾರ್ವಜನಿಕರಲ್ಲಿ ವಿನಂತಿಯನ್ನು ಕಣ್ತುಂಬಿಕೊಳ್ಳುವ ಸದಾವಕಾಶ ನಿಮ್ಮದಾಗುತ್ತದೆ.

ಹೊಸಬರ ಚಿತ್ರಗಳನ್ನು ನೋಡುತ್ತಾ ಅವಕಾಶ ಸಿಕ್ಕಾಗೆಲ್ಲ ಸಾಥ್ ಕೊಡುತ್ತಾ ಬಂದಿರುವವರು ಯೋಗಿ. ಕೃಪಾ ಸಾಗರ್ ನಿರ್ದೇಶನದ ಸಾರ್ವಜನಿಕರಲ್ಲಿ ಚಿತ್ರವಂತೂ ಬಿಡುಗಡೆಗೂ ಮುನ್ನವೇ ಸೌಂಡ್ ಮಾಡಿತ್ತಲ್ಲಾ? ಆ ಸಂದರ್ಭದಲ್ಲಿಯೇ ಯೋಗಿ ಈ ಸಿನಿಮಾವನ್ನು ನೋಡ ಬೇಕೆಂದು ಅಂದುಕೊಂಡಿದ್ದರಂತೆ. ಅದಕ್ಕೀಗ ಕಾಲ ಕೂಡಿ ಬಂದಿದೆ. ನಾಳೆ ಅವರು ಸಾರ್ವಜನಿಕರಲ್ಲಿ ವಿನಂತಿಯನ್ನು ವೀಕ್ಷಿಸುತ್ತಾರೆ.

ಫ್ರೆಶ್ ಆದ ಕಥೆಯನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗಿದ್ದರೂ ಒಪ್ಪಿಕೊಳ್ಳುತ್ತಾರೆ, ನೋಡಿ ಪ್ರೋತ್ಸಾಹಿಸುತ್ತಾರೆಂಬುದಕ್ಕೆ ಸಾರ್ವಜನಿಕರಲ್ಲಿ ವಿನಂತಿ ಚಿತ್ರವೇ ಸಾಕ್ಷಿ. ಬಂದ ಒಂದಷ್ಟು ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿರೋ ಈ ಚಿತ್ರವೀಗ ಗೆಲುವಿನತ್ತ ಮುನ್ನುಗ್ಗುತ್ತಿದೆ. ಅಷ್ಟಕ್ಕೂ ಸಾರ್ವಜನಿಕರಲ್ಲಿ ವಿನಂತಿ ಎಂಬುದು ಅಪರೂಪದ ಕ್ರೈಂ ಥ್ರಿಲ್ಲರ್ ಜಾನರಿನ ಹೊಸತನದ ನಿರೂಪಣೆ ಹೊಂದಿರೋ ಚಿತ್ರ. ನೀವಿನ್ನೂ ಸಾರ್ವಜನಿಕರಲ್ಲಿ ವಿನಂತಿಯನ್ನು ನೋಡಿಲ್ಲವಾದರೆ ಲೂಸ್ ಮಾದ ಯೋಗಿಯೊಂದಿಗೆ ಇದನ್ನು ನೋಡೋ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

LEAVE A REPLY

Please enter your comment!
Please enter your name here