ಹನಿಟ್ರ್ಯಾಪ್ ಬಲೆಗೆ ಬಿದ್ದ ಮೀನು ವ್ಯಾಪಾರಿ!


ಎಲ್ಲರ ಕೈ ಸೇರಿರೋ ಮೊಬೈಲು, ಅದರೊಳಗಿರೋ ತಂತ್ರಜ್ಞಾನ… ಇದನ್ನೆಲ್ಲ ತಂತಮ್ಮ ಬೆಳವಣಿಗೆಗೆ, ಅವಶ್ಯಕತೆಗಳಿಗೆ ಪೂರಕವಾಗಿ ಬಳಸಿಕೊಳ್ಳುವವರ ಸಖ್ಯೆಗಿಂತಲೂ ಅಡ್ನಾಡಿ ಕಸುಬಿಗೆ ಪಣವಾಗಿಟ್ಟವರ ಸಂಖ್ಯೆಯೇ ದೊಡ್ಡದಿದೆ. ಅದರಲ್ಲಿಯೂ ಹೆಚ್ಚಿನದಾಗಿ ಬ್ಲ್ಯಾಕ್‌ಮೇಲ್ ಮಾಡಿ ಕಾಸು ಗುಂಜುವ ಕಾರ್ಯಕ್ಕೇ ಇಂಥಾ ತಂತ್ರಜ್ಞಾನವೆಲ್ಲ ಬಸಿದು ಹೋಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹನಿಟ್ರ್ಯಾಪ್ ಎಂಬ ದಂಧೆ ಹಣವಂತರನ್ನಷ್ಟೇ ಅಲ್ಲದೇ ಇತರೇ ವರ್ಗದವರನ್ನೂ ಗುರಿ ಮಾಡಿಕೊಂಡಿದೆ. ಇದಕ್ಕೆ ಮಿಕಗಳನ್ನು ಕೆಡವಿಕೊಳ್ಳಲು ಮೊಬೈಲೇ ಬಳಕೆಯಾಗುತ್ತಿದೆ.

ಹೀಗೆ ಕೊಡಗು ಮೂಲದ ಮಾಯಾಂಗನೆಯೊಬ್ಬಳು ಮೊಬೈಲಿಂದಲೇ ಮಂಗಳೂರಿನ ಮೀನು ವ್ಯಾಪಾರಿಯನ್ನ ಪಲ್ಲಂಗಕ್ಕೇರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡಿದ ಘಟನೆಯೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ನ್ಯೂಸ್ ಆಗಿ ಬಿಟ್ಟಿದೆ. ಈ ಮೂಲಕವೇ ಇಬ್ಬರು ಹೆಂಡಿರು ಮತ್ತು ಬರೋಬ್ಬರಿ ಒಂಭತ್ತು ಮಕ್ಕಳ ತಂದೆಯಾಗಿದ್ದರೂ ಕಾಮವನ್ನು ನಿತ್ತರಿಸಿಕೊಳ್ಳಲಾಗದ ಆಸಾಮಿಯೊಬ್ಬ ಮಾನ ಕಳೆದುಕೊಂಡಿದ್ದಾನೆ!
ಇಂಥಾದ್ದೊಂದು ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ. ಆತ ಅಬ್ದುಲ್ ರೆಹಮಾನ್. ಮೀನು ಮಾರಾಟ ಮಾಡೋದು ಇವನ ವೃತ್ತಿ. ಅಸಾಧ್ಯ ಚಪಲ ಹೊಂದಿದ್ದ ಈತ ಎರಡೆರಡು ಮದುವೆಯಾಗಿ ಒಂಬತ್ತು ಮಕ್ಕಳ ಅಪ್ಪನೂ ಆಗಿದ್ದ. ಅದಾಗಲೇ ಈತನ ವಯಸ್ಸು ಐವತ್ತರ ಆಸುಪಾಸಿನಲ್ಲಿತ್ತು. ಆದರೂ ಹದಿನೆಂಟರ ಕಾವು ಹೊಂದಿದ್ದ ಈತನ ಮೊಬೈಲಿಗೆ ಹುಡುಗಿಯೊಬ್ಬಳ ವಾಯ್ಸ್ ಮೆಸೇಜು ಬಂದಿದೆ. ಇದರ ಮೂಲ ಹುಡುಕಿ ಆ ಹುಡುಗಿಯನ್ನ ರೆಹಮಾನ್ ಮಂಗಳೂರಿಗೆ ಕರೆಸಿಕೊಂಡಿದ್ದ. ಅಲ್ಲಿಯೇ ರೂಂ ಮಾಡಿ ಕೊಡಗಿನ ಹುಡುಗಿಯೊಂದಿಗೆ ಕಳೆದಿದ್ದಾನೆ. ಅಲ್ಲಿಯೇ ಅಹೋರಾತ್ರಿ ಮೀನು ವ್ಯಾಪಾರವನ್ನ ಜೋರಾಗಿಯೇ ನಡೆಸಿದವನು ಮಾರಾನೇ ದಿನ ಎದ್ದು ಬಂದರೆ ಅದಾಗಲೇ ಶಾಕ್ ಕಾದಿತ್ತು.

ರೂಂನಲ್ಲಿ ನಡೆದಿದ್ದ ಅಷ್ಟೂ ರೋಚಕ ಘಳಿಗೆಗಳನ್ನು ಆ ಹುಡುಗಿಯ ಕಡೆಯವರೇ ಚಿತ್ರೀಕರಿಸಿದ್ದರು. ಕಡೇಯವರೆಗೂ ಒಂದುಲಕ್ಷಕ್ಕೂ ಹೆಚ್ಚು ಹಣವನ್ನೂ ಪೀಕಿದ್ದರು. ಮರ್ಯಾದೆಗಂಜಿ ಈ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳದಿದ್ದ ರೆಹಮಾನ್‌ಗೆ ಮೊನ್ನೆ ಭಯಾನಕ ಶಾಕ್ ಕಾದಿತ್ತು. ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದ ಆ ಹುಡುಗಿ ರಾಸಲೀಲೆಯ ದೃಷ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಳು. ಅಲ್ಲಿಗೆ ಚಪಲ ಚನ್ನಿಗ ರೆಹಮಾನನ ಮಾನ ನಡು ಬೀದಿಯಲ್ಲಿಯೇ ಹರಾಜಾಗಿತ್ತು.

ಇಂಥಾದ್ದೊಂದು ಅಶ್ಲೀಲ ವೀಡಿಯೋ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಒದಾಡಿತ್ತೋ ಇದನ್ನು ರೆಹಮಾನನೇ ಮಾಡಿದ್ದಾನೆಂದುಕೊಂಡ ಸ್ಥಳೀಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಆಗ ಈ ಹನಿಟ್ರ್ಯಾಪ್ ವೃತ್ತಾಂತ ಹೊರ ಬಿದ್ದಿದೆ. ಹೀಗೆ ರೆಹಮಾನನನ್ನು ಬ್ಲ್ಯಾಕ್‌ಮೇಲ್ ಮಾಡಿದ ಹುಡುಗಿ ಕೊಡಗಿನವಳೆಂಬ ಸುಳಿವು ಸಿಕ್ಕಿದೆ. ಆಕೆಯ ಹಿಂದೆ ನಾಲ್ವರ ತಂಡವಿರೋ ಮಾಹಿತಿಯನ್ನೂ ರೆಹಮಾನ್ ನೀಡಿದ್ದಾನೆ. ಇದೆಲ್ಲಕ್ಕಿಂತಲೂ ಶಾಕಿಂಗ್ ವಿಚಾರವೆಂದರೆ ಈ ಪ್ರಕರಣದ ಸೂತ್ರಧಾರಿಯಾದ ಹುಡುಗಿ ವಿದ್ಯಾರ್ಥಿನಿಯೆಂಬ ಮಾಹಿತಿಯೂ ಪೊಲೀಸರಿಗೆ ಗೊತ್ತಾಗಿದೆ. ಈ ಬಗ್ಗೆ ತನಿಖೆ ಬಿರುಸು ಪಡೆದುಕೊಂಡಿದೆ

LEAVE A REPLY

Please enter your comment!
Please enter your name here