ಸರ್ಕಾರಿ ಅಧಿಕಾರಿಗಳ ಮೇಲೆ ಶಾಸಕನ ಗೂಂಡಾ ಪ್ರಹಾರ!

[adning id="4492"]

ಆನರ ಮುಂದೆ ನಡ ಬಗ್ಗಿಸಿ ನಿಂತು ಅಧಿಕಾರ ಸಿಗುತ್ತಲೇ ಅದೇ ಜನರನ್ನು ಗುಲಾಮರಂತೆ ಕಾಣುವುದು ಬಹುತೇಕ ರಾಜಕಾರಣಿಗಳಿಗೆ ಅಂಟಿಕೊಂಡಿರೋ ನೀಚ ಬುದ್ಧಿ. ಕೆಲ ಮಂದಿಯಂತೂ ಪಾಳೇಗಾರರಂತೆ, ಸರ್ವಾಧಿಕಾರಿಗಳಂತೆ ಮೆರೆದಾಡಿ ಬಿಡುತ್ತಾರೆ. ಇಂಥಾದ್ದೇ ಮನಸ್ಥಿತಿಯ ಪುಢಾರಿ ಶಾಸಕನೊಬ್ಬ ಸಾರ್ವಜನಿಕರೆದುರೇ ಸರ್ಕಾರಿ ಅಧಿಕಾರಿಗಳ ಮೇಲೆ ಬ್ಯಾಟಿನಿಂದ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂಧೋರ್‌ನ ಗಂಜ್ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಪ್ರಭಾವಿ ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವಾರ್ಗಿಯಾರ ಪುತ್ರ, ಶಾಸಕ ಆಕಾಶ್ ವಿಜಯ್ ವಾರ್ಗಿಯಾ ಇಂಥಾ ಗೂಂಡಾಗಿರಿ ಪ್ರದರ್ಶಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಆಕಾಶ್ ಇಂಧೋರ್-೩ ವಿಧಾನಸಭಾ ಕ್ರೇತ್ರದ ಶಾಸಕ. ಈತ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕಾಂಪೌಂಡ್ ತೆರವುಗೊಳಿಸಲು ಬಂದ ನಾಗರಿಕ ಸಮಿತಿಯ ಅಧಿಕಾರಿಗನ್ನು ಬ್ಯಾಟಿನಿಂದ ಅಟ್ಟಾಡಿಸಿ ಬಡಿದ ವೀಡಿಯೋವೊಂದು ವೈರಲ್ ಆಗಿ ದೇಶಾಧ್ಯಂತ ಸುದ್ದಿಯಲ್ಲಿದೆ. ಆನ ಸಾಮಾನ್ಯರೂ ಕೂಡಾ ಈ ಶಾಸಕನ ಗೂಂಡಾ ವರ್ತನೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇಂಧೋರ್‌ನ ಗಂಜ್ ಎಂಬ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಾಂಪೌಂಡ್ ಕಟ್ಟಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಧೀರೇಂದ್ರ ಬೈಯಾಸ್ ಮತ್ತು ಅಶೀಲ್ ಖಾರೆ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿದ್ದರು. ಈ ಅಧಿಕಾರಿಗಳ ತಂಡ ಕಾಂಪೌಂಡನ್ನು ತೆರವುಗೊಳಿಸಲು ಮುಂದಾಗುತ್ತಲೇ ಶಾಸಕ ಆಕಾಶ್ ವಿಜಯ್ ವಾರ್ಗಿಯಾ ತನ್ನ ಗೂಂಡಾ ಪಡೆಯೊಂದಿಗೆ ಸ್ಥಳಕ್ಕಾಗಮಿಸಿದ್ದ. ಕರ್ತವ್ಯ ನಿರತ ಅಧಿಕಾರಿಗಳಿಗೆ ಜಾಗ ಖಾಲಿ ಮಾಡುವಂತೆ ಆವಾಜು ಹಾಕಿದ್ದ.

ಅದಕ್ಕೆ ಅಧಿಕಾರಿಗಳು ಕ್ಯಾರೇ ಅನ್ನದಿದ್ದಾಗ ರೊಚ್ಚಿಗೆದ್ದ ಆಕಾಶ್ ಏಕಾಏಕಿ ಕ್ರಿಕೆಟ್ ಬ್ಯಾಟಿನಿಂದ ಅಧಿಕಾರಿಗಳಿಗೆ ಅಟ್ಟಾಡಿಸಿ ಹೊಡೆದಿದ್ದಾನೆ. ಬಳಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣದ ವಿರುದ್ಧ ಬೇರೆ ಪಕ್ಷದ ಮಂದಿ ಸೆಟೆದೆದ್ದಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಗೃಹಸಚಿವ ಬಾಲಬಚ್ಚನ್, ಇದು ಬಿಜೆಪಿಯ ನಿಜವಾದ ಮುಖ. ತಮ್ಮ ಮೇಲೆಯೇ ನಿಯಂತ್ರಣವಿಲ್ಲದ ಇಂಥಾ ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here