ವಿಶ್ವ ಸುಂದರಿಯೊಬ್ಬಳ ಆತ್ಮಕಥೆ ಹೇಳಲು ಬಂದ ಅಂಜು!

[adning id="4492"]


ಹೊಸಾ ಪ್ರಯತ್ನಗಳಿಗೆಗೆ ಒಡ್ಡಿಕೊಳ್ಳುತ್ತಲೇ ಭಿನ್ನವಾದ ಕಥೆ ಹೇಳುವ ಪ್ರಯತ್ನಗಳು ಕನ್ನಡದಲ್ಲಿಗ ಬಿರುಸು ಪಡೆದುಕೊಂಡಿದೆ. ಇದೇ ಸಾಲಿನಲ್ಲಿ ಇಲ್ಲೊಂದು ಪ್ರತಿಭಾವಂತ ತಂಡ ವಿಶ್ವಸುಂದರಿಯಾಗಿ ಇಡೀ ಜಗತ್ತಿನ ಗಮನವನ್ನೇ ತನ್ನತ್ತ ಸೆಳೆದುಕೊಂಡ ಸಾಮಾನ್ಯ ಹುಡುಗಿಯೊಬ್ಬಳ ಅಸಾಮಾನ್ಯ ಕಥೆ ಹೇಳಲು ಮುಂದಾಗಿದೆ. ಅಂಜು ಎಂಬ ಶೀರ್ಷಿಕೆಯ ಈ ಚಿತ್ರಕ್ಕೆ ಬಿಟಿಎಂ ಲೇಔಟ್‌ನ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ಮುಹೂರ್ತ ಸಮಾರಂಭವೂ ನೆರವೇರಿದೆ.

ದೊರೆ ಭಗವಾನ್, ರೇಣುಕಾ ಶರ್ಮಾ, ಎಂ.ಎಸ್ ರಾಜಶೇಖರ್ ಅವರಂಥಾ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿ, ಹಲವಾರು ವರ್ಷಗಳಿಂದ ಚಿತ್ರರಂಗದ ಭಾಗವಾಗಿರುವ ಎ. ವಿಶ್ವನಾಥ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಸ್ವತಂತ್ರ ನಿರ್ದೇಶಕರಾಗಿ ಅವರ ಮೊದಲ ಪ್ರಯತ್ನ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ವಿಶೇಷವಾದೊಂದು ಕಥೆಯನ್ನು ಆರಿಸಿಕೊಂಡಿದ್ದಾರೆ.

ಅಚಿಜನಾ ಶೆಟ್ಟಿ ಈ ಚಿತ್ರದ ಮೂಲಕವೇ ನಾಯಕಿಯಾಗಿ ಆಗಮಿಸುತ್ತಿದ್ದಾರೆ. ಅಂಜನಾ ರಂಗಾಯಣದ ವಿದ್ಯಾರ್ಥಿನಿ. ಈಗಾಗಲೇ ಹಲವಾರು ನಾಟಕಗಳು ಮತ್ತು ಕಿರು ಚಿತ್ರಗಳಲ್ಲಿ ನಟಿಸಿರೋ ಅಂಜನಾ ಇಲ್ಲಿ ಚೆಂದದ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ. ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗಿಯೊಬ್ಬಳು ಕಷ್ಟಪಟ್ಟು ವಿಶ್ವಸುಂದರಿಯಾಗಿ ಮಹಾನ್ ಸಾಧನೆ ಮಾಡೋ ಕಥೆಯನ್ನು ಈ ಚಿತ್ರ ಒಳಗೊಂಡಿದೆಯಂತೆ. ಈ ಚಿತ್ರದ ಮೂಲಕವೇ ರಕ್ಷಿತ್ ನಾಯಕನಾಗಿ ಆಗಮಿಸಲಿದ್ದಾರೆ. ಅಂಜು ಚಿತ್ರವನ್ನು ಭದ್ರಾವತಿ ಮೀನಾ ಕುಮಾರಿ ನಿರ್ಮಾಣ ಮಾಡುತ್ತಿದ್ದಾರೆ.

ಬೇಬಿ ಅಂಕಿತಾ ಮುಂತಾದವರ ತಾರಾಗಣವಿರುವ ಈ ಚಿತ್ರದ ತಾಯಿ ಪಾತ್ರ ಸೇರಿದಂತೆ ಮುಖ್ಯ ಪಾತ್ರಗಳಿಗೆ ಕಲಾವಿದರ ಆಯ್ಕೆ ಕಾರ್ಯ ನಡೆಯುತ್ತಿದೆ. ಮನು ಛಾಯಾಗ್ರಹಣ, ವಿಕ್ರಂ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಎಂ. ರಾಜೇಂದ್ರ ಕುಮಾರ್ ಆರ್ಯ, ಜಿ.ವಿ. ರಾಮರಾವ್, ಮಹೇಶ್ ಕುಮಾರ್, ವೈಭವ್, ಮಂಡ್ಯ ನಾಗರಾಜ್, ಶ್ರೀನಿವಾಸ್, ರೂಪಾ, ಸುಪ್ರೀತಾ ಸೇರಿದಂತೆ ಅನೇಕರು ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು.

[adning id="4492"]

LEAVE A REPLY

Please enter your comment!
Please enter your name here