ರಾಂಧವ ಬಿಡುಗಡೆಗೂ ಮುನ್ನವೇ ರಿಯಲ್ ಹೀರೋ ಆದ ಭುವನ್!

[adning id="4492"]

ಸಹಜವಾದ ಸ್ನೇಹಶೀಲ ವ್ಯಕ್ತಿತ್ವ ಯಾವತ್ತಿದ್ದರೂ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿರುವವರು, ಹೀರೋಗಳು ಇಂಥಾ ವ್ಯಕ್ತಿತ್ವ ಹೊಂದಿದ್ದರಂತೂ ರಿಯಲ್ ಹೀರೋಗಳಾಗಿ ಕಂಗೊಳಿಸುತ್ತಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರೋ ರಾಂಧವ ಚಿತ್ರದ ಹೀರೋ, ಬಿಗ್ ಬಾಸ್ ಖ್ಯಾತಿಯ ಭುವನ್ ಕೂಡಾ ಇಂಥಾದ್ದೇ ಗುಣ ಲಕ್ಷಣಗಳಿಂದ ಜನ ಮನ ಗೆದ್ದುಕೊಂಡಿದ್ದಾರೆ. ಅದರ ತೀವ್ರತೆ ಎಷ್ಟಿದೆಯೆಂದರೆ, ಯಾರದ್ದೋ ಮನೆಯಲ್ಲಿ ಹುಟ್ಟಿದ ಕೂಸಿಗೆ ಭುವನ್ ಅಂತಲೇ ಹೆಸರಿಡುವಷ್ಟು!

ಬಿಗ್ ಬಾಸ್ ಶೋನ ಸ್ಪರ್ಧಿಯಾಗಿದ್ದ ಭುವನ್ ಆ ಮೂಲಕವೇ ಜನರ ಪ್ರೀತಿ ಗಳಿಸಿಕೊಂಡಿದ್ದರು. ಆ ಶೋನಲ್ಲಿ ಭುವನ್ ಸ್ನೇಹಶೀಲ ವ್ಯಕ್ತಿತ್ವದಿಂದಲೇ ಅಪಾರ ಅಭಿಮಾನಿ ಬಳಗವನ್ನೂ ತಮ್ಮದಾಗಿಸಿಕೊಂಡಿದ್ದರು. ಆ ಶೋನ ನಂತರವೂ ಸಾಮಾಜಿಕ ಕಳಕಳಿಯಿಂದಲೇ ಮತ್ತಷ್ಟು ಪ್ರೀತಿ ಗಳಿಸಿಕೊಂಡಿದ್ದರು. ಇದೆಲ್ಲದರಿಂದ ಜನ ಅದೆಷ್ಟು ಪ್ರಭಾವಿತರಾಗಿದ್ದಾರೆಂದರೆ ತಮ್ಮ ಮಗುವಿಗೆ ಅದೆಷ್ಟೋ ಮಂದಿ ಭುವನ್ ಎಂದೇ ನಾಮಕರಣ ಮಾಡುತ್ತಿದ್ದಾರೆ. ಇಂಥಾದ್ದೇ ಒಂದು ಅಪರೂಪದ ನಾಮಕರಣ ಸಮಾರಂಭದಲ್ಲಿ ಖುದ್ದು ಭುವನ್ ಭಾಗಿಯಾಗಿದ್ದಾರೆ.

ತುಮಕೂರು ದಂಪತಿ ತಮ್ಮ ಮಗುವಿಗೆ ಭುವನ್ ಅಂತ ನಾಯಕರಣ ಮಾಡಿದ್ದರು. ಆ ಸಮಾರಂಭಕ್ಕೆ ಭುವನ್ ತೆರಳಿ ತಮ್ಮದೇ ಹೆಸರಿಟ್ಟುಕೊಂಡ ಮಗುವನ್ನು ಮುದ್ದಾಡಿ ಹರಸಿ ಬಂದಿದ್ದಾರೆ. ಇದು ಇನ್ನೂ ತಾನು ನಟಿಸಿರೋ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಭವನ್ ನಿಜದ ಹೀರೋ ಆಗಿ ಹೊರ ಹೊಮ್ಮಿರೋದರ ಸಂಕೇತ. ಭುವನ್ ನಟಿಸಿರೋ ಮೊದಲ ಚಿತ್ರ ರಾಂಧವ ಕೂಡಾ ಭರ್ಜರಿಯಾಗಿಯೇ ಸೌಂಡ್ ಮಾಡುತ್ತಿದೆ. ಈ ಚಿತ್ರದ ‘ಈ ಧರೆಯ ಸೊಬಗು ನಮ್ಮ ನಾಡು’ ಎಂಬ ಹಾಡು ಇಂದು ಸಂಜೆ ಆರು ಘಂಟೆಗೆ ಅನಾವರಣಗೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here