ಮತ್ತೆ ನೆಟ್ಟಿಗರ ಸಿಟ್ಟಿಗೆ ಗುರಿಯಾದಳು ಕಿರಿಕ್ ರಶ್ಮಿಕಾ!


ಅದ್ಯಾವ ಘಳಿಗೆಯಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಸಂಬಂಧ ಮುರಿದುಬಿತ್ತೋ ಗೊತ್ತಿಲ್ಲ. ಆ ಕ್ಷಣದಿಂದಲೇ ಇಬ್ಬರ ನೆಮ್ಮದಿಯೂ ಭಂಗವಾಗುವಂಥಾ ಘಟನಾವಳಿಗಳೇ ಸಾಲು ಸಾಲಾಗಿ ನಡೆಯುತ್ತಿವೆ. ರಕ್ಷಿತ್ ಒಂದು ವರ್ಷ ಎಲ್ಲದರಿಂದ ದೂರವಿದ್ದಂತಿದ್ದು ಈಗ ಮರಳಿದ್ದಾರೆ. ಆದರೆ ಖುದ್ದು ರಕ್ಷಿತ್ ಶೆಟ್ಟಿಯೇ ರಶ್ಮಿಕಾಳನ್ನು ಕ್ಷಮಿಸೋ ಮನಸು ಮಾಡಿದರೂ ಈ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರೋ ಕೆಲ ಮಂದಿ ಮಾತ್ರ ಆಕೆಯನ್ನು ಕ್ಷಮಿಸೋ ಲಕ್ಷಣಗಳಿಲ್ಲ!

ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲೊಂದು ಪೋಸ್ಟ್ ಹಾಕಿದರೂ ಅದು ಬ್ರೇಕಪ್ ಪ್ರಕರಣಕ್ಕೆ ಕನೆಕ್ಟಾಗುತ್ತೆ. ವಿಜಯ್ ದೇವರಕೊಂಡನ ಜೊತೆಗಿನ ಸಿನಿಮಾ ಸ್ಟಲ್ಲುಗಳನ್ನು ಪೋಸ್ಟ್ ಮಾಡಿದರೂ ಅಲ್ಲೊಂದು ಕದನ ಏರ್ಪಟ್ಟು ಬಿಡುತ್ತೆ. ಹಾಗಿದ್ದ ಮೇಲೆ ರಕ್ಷಿತ್ ಶೆಟ್ಟಿ ಬರ್ತ್‍ಡೇಗೆ ರಶ್ಮಿಕಾ ಕಡೆಯಿಂದೊಂದು ಶುಭಾಶಯವೂ ಬಾರದಿದ್ದರೆ ಅಂಥಾ ಮನಸುಗಳು ಸುಮ್ಮನಿರಲು ಸಾಧ್ಯವೇ?

ರಕ್ಷಿತ್ ಶೆಟ್ಟಿಗೆ ಅಂಥಾದ್ದೊಂದು ನಿರೀಕ್ಷೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಬಹುತೇಕರಿಗೆ ರಶ್ಮಿಕಾ ರಕ್ಷಿತ್ ಬರ್ತ್‍ಡೇಗೆ ವಿಶ್ ಮಾಡಬಹುದೆಂಬ ನಿರೀಕ್ಷೆ ಇತ್ತು. ಅದು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಇದ್ದೀತೆಂದೇ ಹಲವರು ಕಾದಿದ್ದರು. ಇದರಿಂದಾಗಿಯೇ ಬರ್ತ್‍ಡೇಗೆ ಒಂದು ದಿನ ಮುಂಚೆಯೇ ರಶ್ಮಿಕಾ ವಿಶ್ ಮಾಡ್ತಾರಾ ಎಂಬರ್ಥದಲ್ಲಿ ಚರ್ಚೆಗಳೂ ನಡೆದಿದ್ದವು. ಆದರೆ ಕಡೆಗೂ ಕಿರಿಕ್ ಹುಡುಗಿಯ ಕಡೆಯಿಂದ ಯಾವ ಶುಭಾಶಯವೂ ಬಂದಿಲ್ಲ.

ಇದರಿಂದ ಕೋಪಗೊಂಡಿರೋ ನೆಟ್ಟಿಗರನೇಕರು ಮೊದಲ ಅವಕಾಶ ನೀಡಿ ನಟಿಯಾಗಿ ರೂಪಿಸಿದವರ ಮೇಲೆ ಕೃತಜ್ಞತೆ ಬೇಡವಾ ಅಂತೆಲ್ಲಾ ರಶ್ಮಿಕಾಗೆ ಅಟಕಾಯಿಸಿಕೊಂಡಿದ್ದಾರೆ. ಈಗ್ಗೆ ತಿಂಗಳ ಹಿಂದೆ ವಿಜಯ್ ದೇವರಕೊಂಡನ ಬರ್ತಡೇಗೆ ವೆರೈಟಿ ವೆರೈಟಿಯಾಗಿ ವಿಶ್ ಮಾಡಿದ್ದ ರಶ್ಮಿಕಾ ರಕ್ಷಿತ್ ಬರ್ತಡೇ ದಿನ ಮುಗುಮ್ಮಾಗಿದ್ದದ್ದು ಹಲವರು ನಖಶಿಖಾಂತ ಖುದ್ದುಹೋಗುವಂತೆ ಮಾಡಿದೆ! ಅಷ್ಟಕ್ಕೂ ರಕ್ಷಿತ್ ಜೊತೆ ಎಂಗೇಜ್‍ಮೆಂಟನ್ನೂ ಮಾಡಿಕೊಂಡಿದ್ದ ರಶ್ಮಿಕಾ ಬದಲಾದದ್ದೇ ವಿಜಯ್ ದೇವರಕೊಂಡನ ಸಾಹಚರ್ಯ ಸಿಕ್ಕ ಮೇಲೆ ಅನ್ನುವವರಿದ್ದಾರೆ. ಅವರಿಬ್ಬರೂ ಜೋಡಿಯಾಗಿ ನಟಿಸಿದ್ದ ಗೀತಾಗೋವಿಂದಂ ಚಿತ್ರ ಹಿಟ್ ಆದ ನಂತರವಂತೂ ರಶ್ಮಿಕಾಳನ್ನು ಹಿಡಿದು ನಿಲ್ಲಿಸುವವರೇ ಇರದಂತಾಗಿತ್ತು. ಹೀಗೆ ಯಶದ ಅಲೆಯಲ್ಲಿ ತೇಲಾಡುತ್ತಿರೋ ರÀಶ್ಮಿಕಾ ಮೊದಲು ಆಸರೆಯಾದವರನ್ನೇ ಮರೆತು ಬಿಟ್ಟಿದ್ದಾಳಂಬ ಸಿಟ್ಟು ನೆಟ್ಟಿಗರಲ್ಲಿದೆ!

LEAVE A REPLY

Please enter your comment!
Please enter your name here