ಮೀಟೂ ಬ್ರ್ಯಾಂಡಿನ ಶ್ರುತಿ ಹರಿಹರನ್ ಬಗ್ಗೆ ಇದೆಂಥಾ ರೂಮರ್?

ಶ್ರುತಿಹರಿಹರನ್ ಎಂಬ ಹೆಸರು ಓರ್ವ ಹೀರೋಯಿನ್ ಆಗಿ ಅದೆಷ್ಟು ಪ್ರಚಲಿತಕ್ಕೆ ಬಂದಿತ್ತೋ ಗೊತ್ತಿಲ್ಲ. ಆದರೆ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿ ಅದರಡಿಯಲ್ಲಿ ಒಂದಷ್ಟು ಹೋರಾಟ ಮಾಡೋ ಮೂಲಕ ಆಕೆ ವರ್ಲ್ಡ್ ಫೇಮಸ್ ಆಗಿದ್ದಳು. ಆದರೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಅದರ ಸುತ್ತಲೂ ಒಂದಷ್ಟು ಸುದ್ದಿಗಳು ಹರಡಿ ಜನರ ಗಮನ ಸಹಜವಾಗಿಯೇ ಬೇರೆ ಇಶ್ಯೂಗಳ ಬೆಂಬಿದ್ದಿದೆ. ಆದರೆ ಮೀಟೂ ವಿಚಾರದಲ್ಲಿ ಶ್ರುತಿ ಪರವಿದ್ದವರು ಮತ್ತು ವಿರೋಧಿ ಬಣದಲ್ಲಿದ್ದವರನ್ನೆಲ್ಲ ಈಗ ಶ್ರುತಿ ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆಂಬ ಪ್ರಶ್ನೆಯೊಂದು ಮೂಲಭೂತ ಸಮಸ್ಯೆಯಂತೆ ಬಿಡದೇ ಕಾಡುತ್ತಿದೆ.

ಈ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕೆಲಸಿಲ್ಲದ ಆಸಾಮಿಗಳಿದ್ದಾರಲ್ಲಾ? ಅಂಥವರಿಗೆ ಜನರಲ್ಲಿರೋ ಇಂಥಾ ಕುತೂಹಲಗಳೇ ಹೆಚ್ಚಿನದಾಗಿ ಕೈತುಂಬಾ ಕೆಲಸ ಕೊಡುತ್ತವೆ. ಈ ಬಗ್ಗೆ ಯದ್ವಾತದ್ವಾ ಸಂಶೋಧನೆ ನಡೆಸಿ ಸತ್ಯ ಪತ್ತೆಯಾಗದಿದ್ದರೆ ಸುಳ್ಳನ್ನಾದರೂ ಕಾರಿಕೊಂಡು ಬೆಚ್ಚಗೆ ಹೊದ್ದು ಮಲಗುತ್ತಾರೆ. ಇಂಥವರ ದೆಸೆಯಿಂದಲೇ ಕೆಲವೊಮ್ಮೆ ಭೀಕರ ರೂಮರುಗಳಿಗೆ ಜೀವ ಬಂದು ಎಲ್ಲೆಂದರಲ್ಲಿ ಇಟ್ಟಾಡಿ ಬಿಡುತ್ತದೆ!

ಸದ್ಯ ಅಂಥಾ ಕೆಲಸಿಲ್ಲದ ಆಸಾಮಿಗಳಿಗೆ ಭರ್ಜರಿ ಕಸುಬು ಸಿಗುವಂತೆ ಮಾಡಿರೋದು ಮೀಟೂ ಶ್ರುತಿಯ ಪರ್ಸನಲ್ ಮ್ಯಾಟರ್. ಅಸಲೀ ಮ್ಯಾಟರ್ ಏನೆಂದರೆ, ಶ್ರುತಿ ಹರಿಹರನ್ ಇದೀಗ ತನ್ನ ಪ್ರೇಮಿ ಕಂ ಗಂಡನೊಂದಿಗೆ ಅಮೆರಿಕಾದಲ್ಲಿದ್ದಾಳೆ ಮತ್ತು ಆಕೆಯೀಗ ಗರ್ಭಿಣಿ ಅಂತೊಂದು ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಕೆಲ ಮಂದಿ ಇದನ್ನಿಟ್ಟುಕೊಂಡೇ ಮೀಟೂಗೆ ತಳುಕು ಹಾಕುತ್ತಲೇ ಶ್ರುತಿಯ ಕ್ಯಾರೆಕ್ಟರಿನ ಬಗ್ಗೆ ಅವಹೇಳನಕ್ಕೂ ಅಣಿಯಾದರೂ ಅಚ್ಚರಿಯೇನಿಲ್ಲ.

ಶ್ರುತಿ ತನಗೆ ಮದುವೆಯಾಗಿರೋ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮೀಟೂ ಕೇಸಿನ ಸಂದರ್ಭದಲ್ಲಿ ಆಕೆಗೆ ಮದುವೆಯಾಗಿರೋ ವಿಚಾರ ಜಾಹೀರಾಗಿತ್ತು. ಶ್ರುತಿ ತನ್ನ ಬಹುಕಾಲದ ಗೆಳೆಯ ರಾಮ್‌ಕುಮಾರ್ ಎಂಬಾತನನ್ನು ಗುಟ್ಟಾಗಿ ಮದುವೆಯಾಗಿದ್ದಾಳೆ ಎಂಬಲ್ಲಿಗೆ ಈ ಪ್ರಕರಣ ಅಂತ್ಯ ಕಂಡಿತ್ತು. ಆದರೆ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡುತ್ತಲೇ ಶ್ರುತಿ ಮೇಲೆ ವೈಯಕ್ತಿಕ ನಿಂದನೆ ಶುರುವಿಟ್ಟುಕೊಂಡಿದ್ದ ಜನರೇ ಆಕೆ ಮದುವೆಯಾಗದೆ ಬಸುರಾಗಿದ್ದಾಳೆಂಬಂತೆ ಸುದ್ದಿ ಹರಡಲು ಶುರುವಿಟ್ಟುಕೊಂಡರೂ ಅಚ್ಚರಿಯೇನಿಲ್ಲ.

ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿರೋ ಮೀಟೂ ಆರೋಪವೀಗ ನ್ಯಾಯಾಲಯದಲ್ಲಿದೆ. ಕೊಂಚ ತಡವಾದರೂ ಯಾವುದು ಸತ್ಯ ಯಾವುದು ಸುಳ್ಳೆಂಬ ವಿಚಾರ ಹೊರ ಬಂದೇ ಬರುತ್ತದೆ. ಆದರೆ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿದ್ದೇ ಮಹಾಪರಾಧ ಎಂಬಂತೆ ವರ್ತಿಸೋದು, ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಶ್ರುತಿಯೇ ತಪ್ಪಿತಸ್ಥೆ ಎಂಬಂತೆ ಷರಾ ಬರೆಯೋದು, ವಿನಾ ಕಾರಣ ಆಕೆಯ ಬಗ್ಗೆ ಸುದ್ದಿ ಹಬ್ಬಿಸೋದೂ ಕೂಡಾ ದುಷ್ಟತನವೇ

LEAVE A REPLY

Please enter your comment!
Please enter your name here