ಕಲ್ಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಅಂದರ್!

[adning id="4492"]

ಪ್ರಗತಿಪರ ಚಿಂತಕ ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣವೂ ಇತರೇ ಪ್ರಕರಣಗಳಂತೆಯೇ ಹಳ್ಳ ಹಿಡಿಯುತ್ತದೆ ಎಂಬ ಆತಂಕ ಹಲವರಲ್ಲಿತ್ತು. ಆದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳೇ ಕಲ್ಬುರ್ಗಿ ಹತ್ಯೆ ಪ್ರಕರಣದ ಸಿಕ್ಕುಗಳನ್ನು ಬಿಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಬುರ್ಗಿಯವರನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಲ್ಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೃಷ್ಣಮೂರ್ತಿ ಎಂಬಾತನನ್ನು ಹುಬ್ಬಳಿಳಿಯಲ್ಲಿ ಬಂಧಿಸಲಾಗಿದೆ. ಇದಕ್ಕೆ ಕಾರಣವಾಗಿರೋದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ನೀಡಿದ್ದೊಂದು ಸುಳಿವು. ಇದರಿಂದಲೇ ಅಲರ್ಟ್ ಆಗಿ ಕೃಷ್ಣಮೂರ್ತಿಗಾಗಿ ಬಲೆ ಬೀಸಿದ್ದ ಎಸ್‌ಐಟಿ ಅಧಿಕಾರಿಗಳು ಆತನನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.


ಈ ಮೂಲಕ ವಿಚಾರವಾದಿ ಎಂ ಎಂ ಕಲ್ಬುರ್ಗಿಯವರ ಕೊಲೆ ಕೇಸಿನ ತನಿಖೆ ಅಂತಿಮ ಘಟ್ಟಕ್ಕೆ ಬಂದಂತಾಗಿದೆ. ಈಗ ಬಂಧಿತನಾಗಿರೋ ಕೃಷ್ಣಮೂರ್ತಿ ಹತ್ಯೆ ನಡೆದ ದಿನ ಬೈ ಓಡಿಸಿದ್ದ. ಆ ಬೈಕಿನಲ್ಲಿ ಬಂದಿಳಿದ ಗಣೇಶ್ ಮಸ್ಕಿನ್ ಗುಂಡು ಹಾರಿಸಿ ಕಲ್ಬುರ್ಗಿಯವರನ್ನು ಹತ್ಯೆ ಮಾಡಿರುವುದು ದೃಢಪಟ್ಟಿದೆ. ಹತ್ಯೆ ನಡೆದ ದಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಷ್ಯಾವಳಿಗಳಲ್ಲಿ ಕಂಡ ಮುಖಗಳಿಗೂ ಈಗ ಬಂಧಿತರಿಗೂ ತಾಳೆಯಾಗಿದೆ ಎಂದೂ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮೂಲಕ ಪ್ರಧಾನವಾದ ಅಂಶವೊಂದು ಜಾಹೀರಾಗಿದೆ. ಈ ಹಿಂದೆ ದಾಬೋಳ್ಕರ್, ಪನ್ಸಾರೆ ಮುಂತಾದ ವಿಚಾರವಾದಿಗಳನ್ನು ಹತ್ಯೆ ಮಾಡಿದ್ದ ಸಿದ್ಧಾಂತ ನೆಚ್ಚಿಕೊಂಡವರೇ ಗೌರಿ ಮತ್ತು ಕಲ್ಬುರ್ಗಿ ಹತ್ಯೆಯ ಹಿಂದೆಯೂ ಇದ್ದಾರೆ. ಹೀಗೆಂದು ಈ ನಾಡಿನ ಪ್ರಜ್ಞಾವಂತರು ಅಭಿಪ್ರಾಯ ಪಡುತ್ತಿದ್ದಾರೆ

[adning id="4492"]

LEAVE A REPLY

Please enter your comment!
Please enter your name here