ಜೆಡಿಎಸ್ ಬ್ಲಾಕ್ ಮೇಲ್ ಗೆ ಹೆದರಿದರಾ ಸಿದ್ದರಾಮಯ್ಯ?

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇನ್ನೂ ಎರಡು ದಿನಗಳ ಕಾಲಾವಕಾಶವಷ್ಟೇ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತಷ್ಟು ಕಾವೇರಿಕೊಂಡಿದೆ. ನಿಖಿಲ್ ಮತ್ತು ಸುಮಲತಾ ನಡುವಿನ ಕದನ, ಆರೋಪ ಪತ್ಯಾರೋಪಗಳೂ ನಿಗಿ ನಿಗಿಸಲಾರಂಭಿಸಿವೆ. ಯಾವಾಗ ನಿಖಿಲ್ ಪರವಾಗಿ ಸಿದ್ದರಾಮಯ್ಯ ಪ್ರಚಾರ ನಡೆಸಿದರೋ, ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾ ಘನ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ಮಳವಳ್ಳಿಯ ದಳವಾಯಿ ಕೋಡಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ಸುಮಲತಾ, ಸಿದ್ದರಾಮಯ್ಯನವರನ್ನು ನಾನಾ ಮುಲಾಜಿಗೆ ಕಟ್ಟಿ ಹಾಕಿ, ಬ್ಲಾಕ್ ಮೇಲ್ ಮಾಡಿ ಜೆಡಿಎಸ್ ನಾಯಕರು ಮಂಡ್ಯ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ. ಅದಕ್ಕೆ ಹೆದರಿ ಸಿದ್ದರಾಮಯ್ಯ ಜೆಡಿಸ್ ಪರವಾಗಿ ಪ್ರಚಾರ ನಡೆಸಿದ್ದಾರೆ. ಆದರೆ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಮಹಹಾಕಬೇಡಿ ಅಂತ ಮನಃಪೂರ್ವಕವಾಗಿಯೇನೂ ಹೇಳಿಲ್ಲ ಅಂತ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರ ಮೇಲೆ ನೇರವಾಗಿಯೇ ಮತ್ತೊಂದಷ್ಟು ಆರೋಪಗಳನ್ನೂ ಸುಮಲತಾ ಹೊರಿಸಿದ್ದಾರೆ. ಅವರದ್ದು ಬರೀ ಕುಟುಂಬ ರಾಜಕಾರಣ. ಮೂವರು ಸಚಿವರು ಮಾಡದ ಅಭಿವೃದ್ಧಿಯನ್ನು ಈಗ ಅವರ ಮಗ ಮಾಡುತ್ತಾರಂತೆ. ಇದಕ್ಕೆಲ್ಲ ಮರುಳಾಗದೆ ತನಗೇ ಮತ ನೀಡಿ ಅಂತ ಸುಮಲತಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here