ಮತ್ತೇರಿಸಿಕೊಂಡು ರಾತ್ರಿಯಿಡೀ ನರಕ ಅನುಭವಿಸಿದ ಯುವತಿ!

ಬೆಂಗಳೂರಿನಲ್ಲಿ ಹೆಣ್ಣುಮಕ್ಕಳೂ ಗಂಡು ಹೈಕಳಿಗೆ ಸರಿಸಮನಾಗಿ ಕುಡಿದು ತೂರಾಡುತ್ತಾ ಯಡವಟ್ಟು ಮಾಡಿಕೊಳ್ಳೋದು ಮಾಮೂಲು. ಸರಿರಾತ್ರಿ ಪಬ್ಬಲ್ಲಿ ಎಣ್ಣೆ ಹೊಡೆದು ಕುಣಿದು ಕುಪ್ಪಳಿಸಿ ಕಾಮುಕರ ದೃಷ್ಟಿ ಬಿದ್ದಾಗ ಬೆಂಗಳೂರು ಸೇಫ್ ಅಲ್ಲ ಅಂತ ಬೊಬ್ಬೆ ಹೊಡೆಯೋದೂ ಕೂಡಾ ಮಾಮೂಲಿಯೇ. ಇಂಥಾದ್ದೇ ಖಯಾಲಿಯ ಯುವತಿಯೊಬ್ಬಳು ನಶೆಯೇರಿಸಿಕೊಂಡು ರಾತ್ರಿಯಿಡೀ ನರಕ ಅನುಭವಿಸಿದ ಘಟನೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯುವತಿಯೊಬ್ಬಳು ತನ್ನ ಗೆಳೆಯ ಜಯಂತ್ ಎಂಬಾತನ ಜೊತೆ ಪಬ್ಬಿಗೆ ತೆರಳಿ ಕಂಠಮಟ್ಟ ಬಿಯರ್ ಹೀರಿದ್ದಳು. ಗೆಳೆಯನೂ ಕುಡಿದು ಚಿತ್ತಾಗಿ ಬಿಟ್ಟಿದ್ದ. ಅದೇ ಅವಸ್ಥೆಯಲ್ಲಿ ಮನೆಗೆ ಹೋಗಲು ಸಾಧ್ಯವಾಗದೆ ಆ ಯುವತಿ ಒಯೋ ರೂಂ ಬುಕ್ ಮಾಡಿಕೊಂಡು ಅಲ್ಲಿಯೇ ತಂಗಿದ್ದಳು.

ನಡುರಾತ್ರಿಯ ಹೊತ್ತಿಗೆ ಆ ರೂಮಿಗೆ ನುಗ್ಗಿದ ಗೆಳೆಯ ಜಯಂತ ರಾತ್ರಿಯಿಡೀ ಯುವತಿಗೆ ಕಾಟ ಕೊಟ್ಟಿದ್ದಾನೆ. ನಶೆಯ ಏಟಿನಲ್ಲಿ ಅತ್ಯಾಚಾರಕ್ಕೂ ಯತ್ನಿಸಿದ್ದಾನೆಂದು ಆರೋಪಿಸಿ ಯುವತಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಶೋಕ್ ನಗರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here