ಮಾಡೆಲ್ ಮರ್ಡರ್ ಹಿಂದಿದೆಯಾ ಸೆಕ್ಸ್ ಆಂಡ್ ದೋಖಾ?

[adning id="4492"]

ಆಕೆ ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಲೇ ಒಂದಷ್ಟು ಹೆಸರು ಮಾಡಿದ್ದ ರೂಪವತಿ. ಎಲ್ಲೆಲ್ಲಿ ಹೈಫೈ ಜನರು ಪಾರ್ಟಿ ನಡೆಸುತ್ತಾರೋ ಅಲ್ಲೆಲ್ಲ ಈಕೆ ಹಾಜರಾಗುತ್ತಿದ್ದಳು. ಎಂಥವರನ್ನೂ ಸೆಳೆಯವಂಥಾ ರೂಪ ಲಾವಣ್ಯ ಹೊಂದಿದ್ದವಳ ಶವ ಕೆರೆಯಲ್ಲಿ ವಿರೂಪವಾಗಿ ತೇಲಾಡಿದರೆ ಜನ ಶಾಕ್ ಆಗದಿರ‍್ತಾರಾ?

ಇಂಥಾದ್ದೊಂದು ಆಘಾತಕರ ಘಟನೆ ನಡೆದಿರೋದು ಜಾರ್ಖಂಡ್ ನ ದಂಥಾರಿ ಜಿಲ್ಲೆಯಲ್ಲಿ. ಆಂಚಲ್ ಯಾದವ್ ಎಂಬ ಮಾಡೆಲ್ ಈ ಮೂಲಕ ದುರಂತ ಸಾವಿಗೀಡಾಗಿದ್ದಾಳೆ. ಇದು ಕೊಲೆಯೇ ಎಂಬ ಬಗ್ಗೆ ಅಲ್ಲಿ ಮಾಧ್ಯಮಗಳ ಮೂಲಕವೂ ಸುಳಿವುಗಳು ಹೊರ ಬೀಳುತ್ತಿದೆ. ಆಕೆಯ ಹಿಸ್ಟರಿ ಕೂಡಾ ಅದಕ್ಕೆ ಪೂರಕವಾಗಿಯೇ ಇದೆ.

ಹಾಗಾದ್ರೆ ಯಾರು ಈ ಮಾಡೆಲ್ ಆಂಚಲ್ ಅಂತ ಹುಡುಕುತ್ತಾ ಹೋದರೆ ಒಂದಷ್ಟು ಇಂಟರೆಸ್ಟಿಂಗ್ ಡೀಟೇಲುಗಳು ಹೊರ ಬೀಳುತ್ತವೆ. ಮಾಡೆಲ್ ಆಂಚಲ್ ವಾಸವಿದ್ದದ್ದು ದಂಥಾರಿಯಲ್ಲಿದ್ದ ಮನೆಯೊಂದರಲ್ಲಿ. ರಾತ್ರಿ ಒಂಬತ್ತು ಘಂಟೆಯ ಸುಮಾರಿಗೆ ಅದೆಲ್ಲಿಂದಲೋ ಮನೆಗೆ ಮರಳಿದ್ದ ಆಂಚಲ್‌ಗೆ ಮನೆಯೊಳಗೆ ಬರೋದರೊಳಗಾಗಿಯೇ ಒಂದು ಕರೆ ಬಂದಿತ್ತು. ಈಗ ಬರ‍್ತೀನಿ ಅಂತ ಅಮ್ಮನಿಗೆ ಹೇಳಿ ಹೋದವಳು ರಾತ್ರಿ ಕಳೆದರೂ ಪತ್ತೆಯಿರಲಿಲ್ಲ.

ಮಾರನೇ ದಿನ ಕೆರೆಯೊಂದರಲ್ಲಿ ಕೈಕಾಲು ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ಆಂಚಲ್ ದೇಹ ಪತ್ತೆಯಾಗಿದೆ. ಹೊಟ್ಟೆಗೆ ಚಾಕೂವಿನಿಂದ ಇರಿದ ಗಾಯಗಳೂ ಪತ್ತೆಯಾಗಿವೆ. ಹಾಗಾದರೆ ಆವತ್ತು ರಾತ್ರಿ ಬೈಕಿನಲ್ಲಿ ಬಂದು ಆಂಚಲ್‌ಳನ್ನು ಕರೆದೊಯ್ದ ವ್ಯಕ್ತಿ ಯಾರು, ಇದರ ಹಿಂದೆ ಯಾವ ಕಿಸುರಿದೆ ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಕೆಯ ಕೊಲೆಯ ಹಿಂದೆ ಸೆಕ್ಸ್ ಮತ್ತು ದೋಖಾದ ಪಾತ್ರವಿರುವ ಬಗ್ಗೆಯೂ ಜನರಲ್ಲಿ ಅನುಮಾನಗಳಿವೆ. ಯಾಕಂದ್ರೆ ಆಂಚಲ್ ವರ್ಷಗಳ ಹಿಂದೆ ಅರಣ್ಯಾಧಿಕಾರಿಯೊಬ್ಬನಿಗೆ ಸೆಕ್ಸ್ ವೀಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ಸಿಕ್ಕಿ ಬಿದ್ದಿದ್ದಳು. ಸೆರೆ ವಾಸವನ್ನೂ ಅನುಭವಿಸಿದ್ದಳು.

[adning id="4492"]

LEAVE A REPLY

Please enter your comment!
Please enter your name here